ಸೃಷ್ಟಿಯೊಳು ಭೋರಿಟ್ಟು ಹರಿವ ಶರಧಿಯ ಕಂಡು
ಅಂಗದಟ್ಟವ ಹಾಕಿ ದಾಟಿ
ಸರ್ವರಿಗೆ ಲಿಂಗವ ಕಟ್ಟಿ
ಪ್ರವುಡನ ಪಟ್ಟದಾನೆಗೆ ಭಸಿತವನಿಟ್ಟು ನಿಲಿಸಿದ
ಕರಸ್ಥಲದದೇವರಿಗೆ ಮಿಡಿಬೀರದೆ ಲಿಂಗವಕಟ್ಟಿ
ಕಡೆಗಿಟ್ಟರೆ ಪ್ರಾಣಹೋದ ಬಳಿಕ ಆ ಲಿಂಗವ ಕಟ್ಟಿದರೆ
ಬದುಕುವ ಪ್ರಾಣಲಿಂಗಾಂಗಿ ಮರುಳಶಂಕರದೇವರಿಗೆ
ಶರಣು ಶರಣಾರ್ಥಿ
ಅಖಂಡಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Transliteration Sr̥ṣṭiyoḷu bhōriṭṭu hariva śaradhiya kaṇḍu
aṅgadaṭṭava hāki dāṭi
sarvarige liṅgava kaṭṭi
pravuḍana paṭṭadānege bhasitavaniṭṭu nilisida
karasthaladadēvarige miḍibīrade liṅgavakaṭṭi
kaḍegiṭṭare prāṇahōda baḷika ā liṅgava kaṭṭidare
badukuva prāṇaliṅgāṅgi maruḷaśaṅkaradēvarige
śaraṇu śaraṇārthi
akhaṇḍaparipūrṇa ghanaliṅgaguru
cennabasavēśvara śivasākṣiyāgi.