•  
  •  
  •  
  •  
Index   ವಚನ - 28    Search  
 
ಕುಲ ಎಷ್ಟು ಎಂದಡೆ, ಎರಡು ಕುಲ. ಅವಾವೆಂದಡೆ : ಭವಿ ಒಂದು ಕುಲ, ಭಕ್ತ ಒಂದು ಕುಲ. ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿಪ್ಪ ಭಕ್ತರ ಕುಲವನರಸಿದಡೆ ಬಾರದ ಭವಂಗಳಲ್ಲಿ ಬಪ್ಪುದು ತಪ್ಪುದು. ನೀರಿಂದಾದ ಮುತ್ತು ಮರಳಿ ಉದಕವಪ್ಪುದೆ? ಆಕಾಶಕ್ಕೆ ಹೋದ ಹೊಗೆ ಹಿಂದಕ್ಕೆ ಬಪ್ಪುದೆ? ಮಣ್ಣಿಂದಾದ ಮಡಕೆ ಮತ್ತೆ ಮಣ್ಣಪ್ಪುದೆ? ಮತ್ತೆ ವಾಮನಮುನಿ ಹಿರಿಯ ಭಕ್ತರ ಮನೆಯ ಬಿನ್ನಹವ ಕೈಕೊಂಡು ಕುಲಕಂಜಿ ಉಣಲೊಲ್ಲದೆ ಹೋದ ನಿಮಿತ್ತದಿಂದ, ಹಾವಿನಹಾಳ ಕಲ್ಲಯ್ಯಗಳ ಮನೆಯ ಶ್ವಾನನಾಗಿ ಹುಟ್ಟಲಿಲ್ಲವೆ? ಅದು ಕಾರಣ, ಶಿವಭಕ್ತರ ಒಕ್ಕುಮಿಕ್ಕ ಪ್ರಸಾದವ ಕೊಳಬೇಕು ಎಂದಾತ ನಮ್ಮ ಶಾಂತಕೂಡಲಸಂಗಮದೇವ
Transliteration Kula eṣṭu endaḍe, eraḍu kula. Avāvendaḍe: Bhavi ondu kula, bhakta ondu kula. Aṣṭāvaraṇavē aṅgavāgi, pan̄cācāravē prāṇavāgippa bhaktara kulavanarasidaḍe bārada bhavaṅgaḷalli bappudu tappudu. Nīrindāda muttu maraḷi udakavappude? Ākāśakke hōda hoge hindakke bappude? Maṇṇindāda maḍake matte maṇṇappude? Matte vāmanamuni hiriya bhaktara maneya binnahava kaikoṇḍu kulakan̄ji uṇalollade hōda nimittadinda, hāvinahāḷa kallayyagaḷa maneya śvānanāgi huṭṭalillave? Adu kāraṇa, śivabhaktara okkumikka prasādava koḷabēku endāta nam'ma śāntakūḍalasaṅgamadēva