•  
  •  
  •  
  •  
Index   ವಚನ - 91    Search  
 
ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ. ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ.
Transliteration Āsege sattudu kōṭi, āmiṣakke sattudu kōṭi, honnu heṇṇu maṇṇiṅge sattudu kōṭi. Guhēśvarā nimagāgi sattavaranāranū kāṇe.
Music Courtesy:
Hindi Translation चाह केलिए मरे करोड़, आमिष केलिए मरे करोड़, सोना, स्त्री, मिट्ठी केलिए मरे करोड़, गुहेश्वरा, तुम्हारे लिए मरे किसीको नहीं देखा। Translated by: Eswara Sharma M and Govindarao B N
Tamil Translation ஆசைக்கு மடிந்தவர் கோடி புலனின்பத்திற்கு மடிந்தவர் கோடி, பொன், பெண், மண்ணிற்கு மடிந்தவர் கோடி குஹேசுவரனே, உமக்காக மடிந்தவர் எவரையும் காணேன் Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಮಿಷ = ಭೋಗವಸ್ತು; ಆಸೆ = ಸಲ್ಲದ ಬಯಕೆ; ನಿಮಗಾಗಿ = ಪರಮ ಸತ್ಯವಸ್ತುವಿಗಾಗಿ, ದೇವನಿಗಾಗಿ; ಮಣ್ಣು = ಸ್ಥಿರಾಸ್ತಿ; ಸತ್ತವರು = ಬದುಕನ್ನು ಸಂಪೂರ್ಣವಾಗಿ ಬಳಸಿದವರು; ಹೆಣ್ಣು = ಪುರುಷನಿಗೆ ಸ್ತ್ರೀ, ಸ್ರೀಗೆ ಪುರುಷ; ಹೊನ್ನು = ಅತ್ಯಮೂಲ್ಯವಾದ ಹೇಮ, ಮುತ್ತು-ರತ್ನಗಳು, ವಜ್ರ-ವೈಢೂರ್ಯಗಳು; Written by: Sri Siddeswara Swamiji, Vijayapura

C-373 

  Sun 01 Oct 2023  

 ಉತ್ತಮ ಮಾಹಿತಿ ನೀಡಿದ್ದೀರಿ ಶರಣು ಶರಣಾರ್ಥಿಗಳು
  Annapurna Shankar ganachari