•  
  •  
  •  
  •  
Index   ವಚನ - 5    Search  
 
ಅಂಥ ಬ್ರಹ್ಮಾಂಡವ ಮೂರುಸಾವಿರದ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅನಂತನೆಂಬ ಭುವನ. ಆ ಭುವನದೊಳು ಕಾಲರುದ್ರನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಹದಿನೈದುಕೋಟಿ ನಾರಾಯಣ ಬ್ರಹ್ಮ ರುದ್ರರು, ಹದಿನೈದುಕೋಟಿ ವೇದಪುರುಷರು, ಮುನೀಂದ್ರರು, ಇಂದ್ರಚಂದ್ರಾದಿತ್ಯರು, ಮೂವತ್ತಾರುಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣ ಕೂಡಲಸಂಗಮವೇವಾ.
Transliteration Antha brahmāṇḍava mūrusāvirada ippatteṇṭu brahmāṇḍavanoḷakoṇḍudondu anantanemba bhuvana. Ā bhuvanadoḷu kālarudranemba mahārudramūrti ihanu. Ā rudramūrtiya ōlagadalli hadinaidukōṭi nārāyaṇa brahma rudraru, hadinaidukōṭi vēdapuruṣaru, munīndraru, indracandrādityaru, mūvattārukōṭi dēvarkaḷiharu nōḍā apramāṇa kūḍalasaṅgamavēvā.