•  
  •  
  •  
  •  
Index   ವಚನ - 103    Search  
 
ಅಂಥ ಬ್ರಹ್ಮಾಂಡವ ಎರಡುಲಕ್ಷದ ಮೇಲೆ ಸಾವಿರದ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ನಖಲವೆಂಬ ಭುವನ. ಆ ಭುವನದೊಳು ನಾರಾಯಣಪ್ರಿಯನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರೈದುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳು ಇಂದ್ರ-ಚಂದ್ರಾದಿತ್ಯರಿಹರು ನೋಡಾ. ಐನೂರೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Antha brahmāṇḍava eraḍulakṣada mēle sāvirada hadineṇṭu brahmāṇḍavanoḷakoṇḍudondu nakhalavemba bhuvana. Ā bhuvanadoḷu nārāyaṇapriyanemba rudramūrti ihanu. Ā rudramūrtiya ōlagadalli ainūraidukōṭi vēdapuruṣaru munīndraru dēvarkaḷu indra-candrādityariharu nōḍā. Ainūraidukōṭi brahma-nārāyaṇa-rudrariharu nōḍā apramāṇakūḍalasaṅgamadēvā.