ಹಸುವಿಗೆ ಹಾಗ, ಎತ್ತಿಗೆ ಹಣವಡ್ಡ,
ಕರುವಿಗೆ ಮೂರು ಹಣ,
ಎಮ್ಮೆ ಕೋಣ ಕುಲವ ನಾ ಕಾಯಲಿಲ್ಲ.
ಅವು ಎನ್ನ ತುರುವಿಗೆ ಹೊರಗು.
ತೊಂಡು ಹೋಗದಂತೆ ಕಾದೊಪ್ಪಿಸುವೆ
ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ.
Transliteration Hasuvige hāga, ettige haṇavaḍḍa,
karuvige mūru haṇa,
em'me kōṇa kulava nā kāyalilla.
Avu enna turuvige horagu.
Toṇḍu hōgadante kādoppisuve
gōpatinātha viśvēśvaraliṅgakke.