•  
  •  
  •  
  •  
Index   ವಚನ - 247    Search  
 
ಪ್ರಾಣನ ಪೂರ್ವಾಶ್ರಯವಳಿದು ಲಿಂಗ ನೆನಹು ಸಂಬಂಧಿಸಿದ ಪ್ರಾಣಲಿಂಗಿಯ ಅಂಗವು ಹೇಂಗಿಹುದಯ್ಯ ಎಂದರೆ: ಲಿಂಗ ನೆನಹೆ ಹಿಂಚಾಗಿ ಲಿಂಗ ನೆನಹೆ ಮುಂಚಾಗಿಹುದಯ್ಯ. ಅಂಗವಿಷಯಂಗಳೆ ಹಿಂಚಾಗಿ ಲಿಂಗವಿಷಯಂಗಳೆ ಮುಂಚಾಗಿಪ್ಪುದಯ್ಯ. ಆವಾಗಲು ಲಿಂಗಸಹಿತವಾಗಿಯೆ ಇಂದ್ರಿಯಂಗಳ ಭೋಗವ ಭೋಗಿಸುತಿಪ್ಪುದಯ್ಯ. ಭೋಗಿಸುವ ಕ್ರಮವೆಂತುಟಯ್ಯ ಎಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರವೆಂಬ ಮುಖದ್ವಾರಂಗಳಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗವೆಂಬ ಲಿಂಗಸ್ಥಲಂಗಳ ಮೂರ್ತಿಗೊಳಿಸಿ ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಈ ಪದಾರ್ಥಂಗಳ ಲಿಂಗಮುಖಕ್ಕೆ ನೈವೇದಿಸಿ ಆ ಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತಿಪ್ಪಾತನೆ ಪ್ರಾಣಲಿಂಗಿ ಲಿಂಗಪ್ರಾಣಿಯಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Prāṇana pūrvāśrayavaḷidu liṅga nenahu sambandhisida prāṇaliṅgiya aṅgavu hēṅgihudayya endare: Liṅga nenahe hin̄cāgi liṅga nenahe mun̄cāgihudayya. Aṅgaviṣayaṅgaḷe hin̄cāgi liṅgaviṣayaṅgaḷe mun̄cāgippudayya. Āvāgalu liṅgasahitavāgiye indriyaṅgaḷa bhōgava bhōgisutippudayya. Bhōgisuva kramaventuṭayya endaḍe: Ghrāṇa, jihve, nētra, tvakku, śrōtravemba mukhadvāraṅgaḷalli Ācāraliṅga guruliṅga śivaliṅga jaṅgamaliṅga prasādaliṅgavemba liṅgasthalaṅgaḷa mūrtigoḷisi śabda sparśa rūpu rasa gandhaṅgaḷemba ī padārthaṅgaḷa liṅgamukhakke naivēdisi ā liṅgada prasanna prasādava svīkarisutippātane prāṇaliṅgi liṅgaprāṇiyayya, mahāliṅgaguru śivasid'dhēśvara prabhuvē.