•  
  •  
  •  
  •  
Index   ವಚನ - 255    Search  
 
ಪ್ರಾಣಲಿಂಗದಲ್ಲಿ ಅವಿಶ್ವಾಸ ಕಂಡು. ಆ ತೀರ್ಥಲಿಂಗದಲ್ಲಿ ವಿಶ್ವಾಸವ ಮಾಡುವ, ಬಣಗರ ಎನಗೊಮ್ಮೆ ತೋರದಿರಾ. ಉಡಿಸಿ ತೊಡಿಸಿ ನೋಡುವ ಗಂಡನ ತನು ಮುಟ್ಟಿ ಅಪ್ಪಿ, ಮನ ಮುಟ್ಟಿ ನೆರೆಯದೆ, ಕಡೆಯಲ್ಲಿದ್ದವರಿಗೆ ಕಾಮಿಸುವ, ತುಡುಗುಣಿ ಹೊಲತಿಯಂತೆ, ತನ್ನ ಲಿಂಗವ ಬಿಟ್ಟು, ಅನ್ಯಲಿಂಗಕ್ಕೆ ಹರಿವ ಅನಾಚಾರಿಗಳಿಗೆ, ಮುನ್ನವೆ ಶಿವನಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Prāṇaliṅgadalli aviśvāsa kaṇḍu. Ā tīrthaliṅgadalli viśvāsava māḍuva, baṇagara enagom'me tōradirā. Uḍisi toḍisi nōḍuva gaṇḍana tanu muṭṭi appi, mana muṭṭi nereyade, kaḍeyalliddavarige kāmisuva, tuḍuguṇi holatiyante, tanna liṅgava biṭṭu, an'yaliṅgakke hariva anācārigaḷige, munnave śivanilla kāṇā, mahāliṅgaguru śivasid'dhēśvara prabhuvē.