ಚಂದ್ರಮಂಡಲದಲ್ಲಿ ರವಿ ಅಗ್ನಿಯೋಕುಳಿಯನಾಡುವದ
ಹಿಂದಳ ಕೇರಿಯವರು ಕಂಡು
ಮುಂದಳೊರವರಿಗೆ ಮೊರೆಯ ಹೇಳುತ್ತಿದಾರೆ ನೋಡಿರೇ.
ಮುಂದಳೂರವರೆಲ್ಲಾ ರವಿಯೋಕುಳಿಯ ಸಂಗದಿಂದ
ಮಂಗಳ ಮುಂಗಳವೆನುತ
ಶಿವಲಿಂಗೈಕ್ಯರಾದುದ ಕಂಡೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Candramaṇḍaladalli ravi agniyōkuḷiyanāḍuvada
hindaḷa kēriyavaru kaṇḍu
mundaḷoravarige moreya hēḷuttidāre nōḍirē.
Mundaḷūravarellā raviyōkuḷiya saṅgadinda
maṅgaḷa muṅgaḷavenuta
śivaliṅgaikyarāduda kaṇḍenu kāṇā,
mahāliṅgaguru śivasid'dhēśvara prabhuvē.