ಮರ್ತ್ಯಲೋಕದುದರದೊಳಗೆ ಮೃತ್ಯುದೇವತೆ
ಕತ್ತೆ ಕುದುರೆಯ ಹಡೆದು
ಪುತ್ರೋತ್ಸಾಹವ ಮಾಡುವದ ಕಂಡು
ಸತ್ಯಲೋಕದ ಸತಿಯರು ಬಂದು
ಇದೆತ್ತಳುಚ್ಚಾಹವೆಂದು ಬೆಸಗೊಳಲು
ಕತ್ತೆ ಕುದುರೆಗಳು ಸತ್ತು ಮೃತ್ಯು ದೇವತೆಯೆತ್ತ ಹೋದಳೆಂದರಿಯೆ.
ಆ ಲೋಕವೆಲ್ಲವು ಮುಕ್ತಿ ಸಾಮ್ರಾಜ್ಯವಾದುದ ಕಂಡು
ಇದು ನಿತ್ಯ ನಿಜಲಿಂಗೈಕ್ಯವೆಂದರಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Martyalōkadudaradoḷage mr̥tyudēvate
katte kudureya haḍedu
putrōtsāhava māḍuvada kaṇḍu
satyalōkada satiyaru bandu
idettaḷuccāhavendu besagoḷalu
katte kuduregaḷu sattu mr̥tyu dēvateyetta hōdaḷendariye.
Ā lōkavellavu mukti sāmrājyavāduda kaṇḍu
idu nitya nijaliṅgaikyavendaridenu kāṇā,
mahāliṅgaguru śivasid'dhēśvara prabhuvē.