ಉರಿಯ ಗಗನದೊಳಗೆ ಶರೀರವಿಲ್ಲದ ತರುಣಿ ಉದಯವಾಗಿ
ಉರಿಯ ಮಣಿಯ ಪವಣಿಗೆಯ ಮಾಡುವುದ ಕಂಡೆನಯ್ಯ.
ಉರಿಯನುಂಡು, ಶರೀರವಿಲ್ಲದಾಕೆಯ ನೆರೆದು ಪರಮಾಮೃತವ ಸೇವಿಸಿ
ಪರಮ ಪರಿಣಾಮದೊಳಗೋಲಾಡಿದೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Uriya gaganadoḷage śarīravillada taruṇi udayavāgi
uriya maṇiya pavaṇigeya māḍuvuda kaṇḍenayya.
Uriyanuṇḍu, śarīravilladākeya neredu paramāmr̥tava sēvisi
parama pariṇāmadoḷagōlāḍidenayya,
mahāliṅgaguru śivasid'dhēśvara prabhuvē.