•  
  •  
  •  
  •  
Index   ವಚನ - 47    Search  
 
ತೊಟ್ಟುಬಿಡುವ ವೇಳೆಯನರಿದ ಮತ್ತೆ ದೋಟಿಯನಿಕ್ಕಲೇತಕ್ಕೆ? ತನ್ನ ಕೃತ್ಯದ ಭಕ್ತಿಯ ಮಾಡುತ್ತಿದ್ದ ಮತ್ತೆ ಒಂದು ದಿನ ತಪ್ಪಲಿಕ್ಕಾಗಿ ಕುಪ್ಪಳಿಸಿ ಬೇಯಲೇತಕ್ಕೆ? ಇದು ಗುರುಸ್ಥಲಕ್ಕೆ ನಿಶ್ಚಯವಲ್ಲ; ಇದು ಶಿಲೆಯ ಮಾರಿಯ ಹದಹು; ವ್ಯಾಧನ ವೇಷ, ಮೂಷಕನ ವಾಸದ ತಪ್ಪಿನ ಪಥ ಆತ ಸದ್ಗುರುಜಾತನಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು.
Transliteration Toṭṭubiḍuva vēḷeyanarida matte dōṭiyanikkalētakke? Tanna kr̥tyada bhaktiya māḍuttidda matte ondu dina tappalikkāgi kuppaḷisi bēyalētakke? Idu gurusthalakke niścayavalla; idu śileya māriya hadahu; vyādhana vēṣa, mūṣakana vāsada tappina patha āta sadgurujātanalla. Śambhuvininditta svayambhuvinindatta atibaḷa nōḍā. Mātuḷaṅga madhukēśvaranu.