ನಿರೂಪ ರೂಪಿನಲ್ಲಿ ಅಡಗಿ,
ನಿರಾಲಂಬವಾಯಿತ್ತು ಬಸವನಲ್ಲಿ.
ನಿರಾಲಂಬಮೂರ್ತಿಯಲ್ಲಿ
ನಿರ್ಮಲ ಸುಧೆಯನನುಭವಿಸಿದೆನಯ್ಯಾ ನಾನು ಬಸವಾ.
ಅನುಭವಿಸಿ ಬಸವ ಕುಳವಳಿದು
ಭ್ರಮೆಯಳಿದೆನಯ್ಯಾ ಸಂಗಯ್ಯಾ.
Transliteration Nirūpa rūpinalli aḍagi,
nirālambavāyittu basavanalli.
Nirālambamūrtiyalli
nirmala sudheyananubhavisidenayyā nānu basavā.
Anubhavisi basava kuḷavaḷidu
bhrameyaḷidenayyā saṅgayyā.