ನಿರೋಧವಳಿದು ನಿರಾಕಾರವಾಯಿತ್ತು ಬಸವಾ,
ನಿರಾಕುಳದ ಭಕ್ತಿ ನಿರ್ವಯಲಾಯಿತ್ತು ಬಸವಾ.
ನಿಃಪ್ರಪಂಚಿಕನಾದೆ ಬಸವಾ,
ನಿಃಪರಿಣಾಮಿಯಾದೆ ಬಸವಾ,
ರೂಪು ನಿರೂಪುವಿಡಿದ ಬಸವಾ.
ಸಂಗಯ್ಯನ ಮನಃಪ್ರೀತಿಯ ಬಸವಾ
ಭರಿತ ನಿರ್ಭರಿತವಾಯಿತು.
Transliteration Nirōdhavaḷidu nirākāravāyittu basavā,
nirākuḷada bhakti nirvayalāyittu basavā.
Niḥprapan̄cikanāde basavā,
niḥpariṇāmiyāde basavā,
rūpu nirūpuviḍida basavā.
Saṅgayyana manaḥprītiya basavā
bharita nirbharitavāyitu.