ಪ್ರಾಣವಿಲ್ಲದ ಹೆಣ್ಣು ನಾನಾಗಿರಲು,
ಆ ಪ್ರಾಣವಿಲ್ಲದ ಕಾಯಕ್ಕೆ ಪ್ರಾಣ ಪ್ರಸನ್ನರೂಪಾಯಿತ್ತು.
ಎಲ್ಲವನಳಿದು ಎಲ್ಲವ ತಿಳಿದು
ಎಲ್ಲಾ ವಸ್ತುವ ಕಂಡು ನಿರ್ಲೇಪಿಯಾದೆನಯ್ಯ ಸಂಗಯ್ಯ.
Transliteration Prāṇavillada heṇṇu nānāgiralu,
ā prāṇavillada kāyakke prāṇa prasannarūpāyittu.
Ellavanaḷidu ellava tiḷidu
ellā vastuva kaṇḍu nirlēpiyādenayya saṅgayya.