ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.
ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು.
ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು.
ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ.
ಸಂಗಯ್ಯ, ಎಮ್ಮಯ್ಯನವರ ಕರುಣದಿಂದ
ಆನು ಪರಮ ಪ್ರಸಾದಿಯಾದೆನಯ್ಯ.
Transliteration Baṇṇada put'thaḷiya māḍi salahidarenna nam'mayyanavaru.
Kāyavanaḷidavaḷendu hesariṭṭarenage em'mayyanavaru.
Vratavaḷida prapan̄ci endarenna em'mayyanavaru.
Sansāra bandhava haridu niḥsansāriyādenayya.
Saṅgayya, em'mayyanavara karuṇadinda
ānu parama prasādiyādenayya.