ಬಸವನ ಹೆಸರಳಿಯಿತ್ತು,
ಬಸವನ ಕುರುಹಳಿಯಿತ್ತು,
ಬಸವನ ಭಾವವಳಿಯಿತ್ತು,
ಬಸವನಮೂರ್ತಿಯ ಕರ್ಮವ ಹರಿದು
ಆನು ನಿಃಕರ್ಮಿಯಾದೆನಯ್ಯಾ.
ನಿಃಕರ್ಮಿಯಾದ ಕಾರಣ ಅರಿವನರಿದು
ಪ್ರಣವಮೂರ್ತಿಯ ತಿಳಿದು
ಆನು ಬದುಕಿದೆನಯ್ಯಾ ಸಂಗಯ್ಯಾ.
Transliteration Basavana hesaraḷiyittu,
basavana kuruhaḷiyittu,
basavana bhāvavaḷiyittu,
basavanamūrtiya karmava haridu
ānu niḥkarmiyādenayyā.
Niḥkarmiyāda kāraṇa arivanaridu
praṇavamūrtiya tiḷidu
ānu badukidenayyā saṅgayyā.