•  
  •  
  •  
  •  
Index   ವಚನ - 125    Search  
 
ಭಕ್ತನ ಜ್ಞಾನಿಸ್ಥಲ - ಅವಗುಣಿ
ಏತ ತಲೆವಾಗಿದರೇನು, ಗುರುಭಕ್ತನಾಗಬಲ್ಲುದೆ? ಇಕ್ಕುಳ ಕೈಮುಗಿದರೇನು? ಭೃತ್ಯಾಚಾರಿಯಾಗಬಲ್ಲುದೆ? ಗಿಳಿಯೋದಿದರೇನು, ಲಿಂಗವೇದಿಯಾಗಬಲ್ಲುದೆ? ಕೂಡಲಸಂಗನ ಶರಣರ ಬಂದ ಬರವ, ನಿಂದ ನಿಲವ ಅನಂಗಸಂಗಿಗಳೆತ್ತ ಬಲ್ಲರು?
Transliteration Ēta talevāgidarēnu, gurubhaktanāgaballude? Ikkuḷa kaimugidarēnu? Bhr̥tyācāriyāgaballude? Giḷiyōdidarēnu, liṅgavēdiyāgaballude? Kūḍalasaṅgana śaraṇara banda barava, ninda nilava anaṅgasaṅgigaḷetta ballaru?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy:
English Translation 2 See-saw watermills bow their heads. So what? Do they get to be devotees to the Master? The tongs join hands. So what? Can they be humble in service to the Lord? Parrots recite. So what? Can they read the Lord? How can the slaves of the Bodiless God, Desire, know the way our Lord's Men move or the stance of their standing?

Translated by: A K Ramanujan
Book Name: Speaking Of Siva
Publisher: Penguin Books
----------------------------------
What if the well-frame bend its head, Does it become a Guru's devotee? What if the pincers fold their hands, Do they become a humble minister? What if a parrot read? Does it Become a theologian? How can the votaries Of the disembodied god Know why these have come, How great is their worth The Śaraṇās Of Kūḍala Saṅgama ? Translated by: L M A Menezes, S M Angadi

Hindi Translation पुरदंड सिर झुकाने से क्या गुरु भक्त बन सकता है? चिमटा हाथ जोड़ने से क्या, भृत्याचारी बन सकता है? शुक के पढने से क्या, वह लिंग-ज्ञानी बन सकता है? कूडलसंगमेश के शरणों के आने का अर्थ तथा यथार्थ स्थिति अनंग संगी कैसे जान सकते हैं? Translated by: Banakara K Gowdappa
Telugu Translation ఏతము తల వంచిన, గురుభక్తుడు కానేర్చునే పటకారు కేల్మోడ్వ, భటాచారి కానేర్చునే! చిలుక చదివిన నేమి శివజ్ఞాని కానేర్చునే కూడల సంగని శరణులు వచ్చు రాక, నిలుచు నిలువ; అనంగసంగులెట్లు తెలియనేర్తురు? Translated by: Dr. Badala Ramaiah
Tamil Translation ஏற்றம் தலைவணங்கிலென்ன? குருபக்தனாக வியலுமோ? குறடு கைக்கூப்பிலென்ன? தொண்டனாக வியலுமோ? கிளி ஓதிலென்ன? இலிங்கத்தை அறிந்ததாமோ? கூடல சங்கனின் அடியார்தம் நெறிமுறையை, திளைத்த நிலையை உலகப் பற்றுளோர் அறியவியலுமோ? Translated by: Smt. Kalyani Venkataraman, Chennai
Marathi Translation वाकविते मोट, डोके जरी आपुले तरी नच ठरले, गुरुभक्ती दोन्ही हात जोडी, सांडस आपुले परी नच ठरले, भ्रत्याचारी पोपट वदतो, तैसाचि रटतो परी नच ठरतो, लिंगज्ञानी देवा तुज शरण येण्याचे कारण थांबण्याचे कारण, जाणे कोण कूडलसंगमदेवा ! शरणांची कृती विकारी मनोवृत्ती, जाणी कैसे अर्थ - विहीरीवरील मोट आपले डोके प्रत्येक वेळी वर येताच वाकवीत असते म्हणून ही त्याची कृती गुरुभक्ती ठरते का ? मोठा चिमटा वा सांडस आपले दोन्ही हात अनेक वेळा जोडत असतो म्हणून का तो भ्रत्याचारी ठरतो का? अन्नदानाचे पुण्य त्यांच्या पदरी पडते का? पोपट दिवस रात्रीतून अनेक वेळा देवाचे नामस्मरण करतो म्हणून त्यास त्याचे फळ मिळू शकेल काय ? त्याच प्रमाणे शिव- शरण आपल्याकडे आल्याचे उद्देश, ते थांबण्याचे कारण, त्यांच्या विचाराची गहनता, त्यांचे अनुभव, अनुभाव व अनुमती ह्या गोष्टीपैकी एकही विकारी मनोवृत्तीचे लोकांना समजणारही नाही वा उमजणारही नाही. त्यासाठी शरणवृत्ती अंगी बसावी लागतो. Translated by Rajendra Jirobe, Published by V B Patil, Hirabaug, Chembur, Mumbai, 1983 रहाटाचे मस्तक झुकल्याने गुरुभक्त होईल का? चिमट्याने हात जोडल्याने भृत्याचारी होईल का? पोपट बोलल्याने लिंगज्ञानी होईल का? कूडलसंगमदेवाच्या शरणांचा येण्याचा उद्देश त्यांचा महिमा अनंग संगीना कसा समजणार ? Translated by Shalini Sreeshaila Doddamani
ಶಬ್ದಾರ್ಥಗಳು ಅನಂಗ = ಮನ್ಮಥ; ಇಕ್ಕುಳ = ; ಏತ = ಬಾವಿಯಿಂದ ನೀರು ಎತ್ತುವ ಗಳೆ; ತಲೆವಾಗು = ತಲೆ ಬಾಗು; ಭೃತ್ಯ = ಸೇವಕ; ಸಂಗಿ = ಸ್ನೇಹ;
ಕನ್ನಡ ವ್ಯಾಖ್ಯಾನ ಬಾಹ್ಯವರ್ತನೆ ಮುಖ್ಯವಲ್ಲ; ಭಾವ ಮುಖ್ಯ ಏತ ನೀರನ್ನು ಹಾಯಿಸಲು ರೈತ (ವ್ಯವಸಾಯಗಾರ) ಬಳಸುವ ಒಂದು ಉಪಕರಣ (ಸಾಧನ). ನೀರನ್ನು ತುಂಬಿಕೊಂಡು ಮೇಲಕ್ಕೆ ಬರುವ ಮುನ್ನ ಅದು ಬಾವಿಗೆ ಅಭಿಮುಖವಾಗಿ ಬಾಗಿ ಹೋಗುತ್ತದೆ. ಶ್ರೇಷ್ಠ ಗುರುಭಕ್ತನೂ ಸಹ ಗುರುವಿನ ಪಾದಕಮಲಗಳನ್ನು ಸ್ಪರ್ಶಿಸಿ ಕೃತಾರ್ಥನಾಗುವುದಕ್ಕಾಗಿ ಅನನ್ಯ ಭಕ್ತಿಯಿಂದ ತಲೆಬಾಗುತ್ತಾನೆ. ಆದರೆ ಏತವೂ ಅವನಂತೆಯೇ ಬಾವಿಯ ಕಡೆ ಬಾಗುವುದೆಂದು ಭಾವಿಸಿ ಅದನ್ನು ಗುರುಭಕ್ತನೆಂದು ಕರೆಯಲು ಸಾಧ್ಯವೇ? ಏತವಾಗಲೀ ಬಾವಿಯಾಗಲೀ ಜಡವಸ್ತು. ನಮಸ್ಕರಿಸುವಂತೆ ತೋರುವ ಏತ ಗುರುಭಕ್ತನಾಗಲೀ, ನಮಸ್ಕರಿಸಲ್ಪಡುವಂತೆ ಕಾಣುವ ಬಾವಿಯು ಗುರುವಾಗಲೀ ಆಗಲು ಸಾಧ್ಯವಿಲ್ಲ. ವೀರಶೈವ ಧರ್ಮದಲ್ಲಿ ಬೋಧಿಸಿರುವ ಐದು ಆಚಾರ (ಪಂಚಾಚಾರ) ಗಳಲ್ಲಿ ಭೃತ್ಯಾಚಾರವು ಪ್ರಮುಖವಾದ ಸ್ಥಾನವನ್ನು ಪಡೆದಿದೆ. ಶ್ರೀ ಬಸವೇಶ್ವರ ವಚನಗಳಲ್ಲಂತೂ ಇದುವಿಶೇಷವಾಗಿ ವ್ಯಕ್ತಗೊಂಡಿದೆ. ಅವರ ವಚನಗಳಲ್ಲಿ ವ್ಯಕ್ತಗೊಂಡಿದೆಯೆಂದರೆ ಅದು ಅವರ ಜೀವನದಲ್ಲಿ ಸುಪ್ರತಿಷ್ಠತವಾಗಿತ್ತೆಂದು ಹೇಳಿದಂತೆಯೇ. ಏಕೆಂದರೆ ಅವರು ಆಡಿರುವ ನುಡಿಗಳು ಅವರ ಹೃದಯದ ಪಡಿಯಚ್ಚುಗಳು. ಅವರಲ್ಲಿ ವಂಚನೆಯಿಲ್ಲ; ಕಪಟವಿಲ್ಲ, ತಮ್ಮ ಘನತೆಗೆ ಕುಂದಾಗುವುದೆಂದು ಶಂಕಿಸಿ ಮೆರಗು ನೀಡುವ ಕೆಲಸಕ್ಕೆ ಮಾರುಹೋಗಿಲ್ಲ. ‘ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯಾ .........’ ‘ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ, ರುದ್ರ ಪದವಿಯನೊಲ್ಲೆ, ಮತ್ತಾವ ಪದವಿಯನೊಲ್ಲೆ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ.......’ ‘ಮೇಲಾಗಲೊಲ್ಲನು ಕೀಳಾಗಲೊಲ್ಲದೆ...ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು ಕೂಡಲಸಂಗಮದೇವಾ’ ‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ...’ ಈ ಎಲ್ಲ ವಚನಗಳು ಬಸವಣ್ಣನವರ ಭೃತ್ಯಾಚಾರ ಭಾವನೆಯನ್ನು ಸ್ಪಷ್ಟವಾಗಿ ಬಿತ್ತರಿಸುತ್ತವೆ. ನಿಜವಾದ ಸೇವಕ ವಿನಯದಿಂದ ತನ್ನ ಯಜಮಾನನನ್ನು ಗೌರವಿಸಿ ಅವನ ಸೇವೆಯನ್ನು ಮಾಡುವಂತೆ ಮಾನವ, ತಾನೊಬ್ಬ ಸೇವಕನೆಂದೇ ಭಾವಿಸಿ ಇತರ ಮನವನನ್ನು ನಯವಿನಯಗಳಿಂದ ಕಂಡು ಗೌರವಿಸುವುದೇ ಭೃತ್ಯಾಚಾರ. ಆದ್ದರಿಂದಲೇ ಶರಣರು ‘ಶಿವೋS ಹಂ ಎಂದೆನಿಸದಿರಯ್ಯಾ ಸೋS ಹಂ ಎಂದೆನಿಸದಿರಯ್ಯಾ ದಾಸೋಹಂ ಎಂದೆನಿಸಯ್ಯಾ...........’ ಎಂದರು. ಆದ್ದರಿಂದ ತಾನು ಇತರರಿಗಿಂತ ಕಿರಿಯವನೆಂಬ ಭಾವನೆಯನ್ನು ಬೆಳೆಸಿಕೊಂಡು ‘ಇತ್ತ ಬಾರಯ್ಯಾ ಇತ್ತ ಬಾರಯ್ಯಾ’ ಎಂದು ಭಕ್ತರೆಲ್ಲರೂ ಕೂರ್ತು ಹತ್ತೆ ಕರೆಯುತ್ತಿರೆ ಮತ್ತೆ ಕೆಲಸಕ್ಕೆ ಹೋಗಿ ಶರಣೆಂದು ಹಸ್ತ ಬಾಯನೆ ಮುಚ್ಚಿ ವಿನಯದ ನಾಲ್ಕು ಕಿರಿಯ ನುಡಿಗಳನ್ನಾಡಿ ಸೌಜನ್ಯ ಮೂರ್ತಿಯಾಗುವನು ಭೃತ್ಯಾಚಾರಿ. ಇಕ್ಕಳದ ಹಿಡಿಗಳನ್ನು ಒತ್ತಿದರೆ ಅದರ ಮೇಲಿನ ಭಾಗವು ಮುಚ್ಚಿಕೊಳ್ಳುವುದು ಎಲ್ಲರಿಗೂ ತಿಳಿದ ವಿಷಯ. ಹೀಗೆಂದು ಭೃತ್ಯಾಚಾರಿಯು ತನ್ನ ಕೈಗಳನ್ನು ಜೋಡಿಸುವುದರ ಮೂಲಕ ವಿನಯವನ್ನು ಪ್ರಕಟಗೊಳಿಸುವನೆಂದರೆ ಇಕ್ಕುಳವೂ ಅವನಂತಯೇ ಕೈಜೋಡಿಸುವುದೆಂದು ಅದನ್ನು ಭೃತ್ಯಾಚಾರಿಯೆಂದು ಕರೆಯಲು ಸಾಧ್ಯವೇ? Every man has got two personalities internal and external. He usually hides the inner and exhibits the outer. (ಪ್ರತಿಯೊಬ್ಬ ಮಾನವನಲ್ಲಿಯೂ ಎರಡು ರೀತಿಯ ವ್ಯಕ್ತಿತ್ವಗಳಿರುತ್ತವೆ. ಒಂದು ಆಂತರಿಕ, ಮತ್ತೊಂದು ಬಾಹ್ಯ. ಅವನು ಸಾಮಾನ್ಯವಾಗಿ ಆಂತರಿಕವಾದುದನ್ನು ಮುಚ್ಚಿಟ್ಟು ಬಾಹ್ಯವನ್ನು ಪ್ರದರ್ಶಿಸುತ್ತಾನೆ, ಆದ್ದರಿಂದ ಇಲ್ಲಿ ಬಸವಣ್ಣನವರು ನೀಡಿರುವ ಉಪಮೆಗಳು ಇಂದಿನ ಲೌಕಿಕ ಜೀವನವನ್ನು ಬಹು ಸುಂದರವಾಗಿ ಪ್ರತಿಬಿಂಬಿಸುತ್ತವೆ, ಏತ ತಲೆಬಾಗುವುದಾಗಲೀ, ಇಕ್ಕುಳ ಕೈಮುಗಿವುದಾಗಲೀ ಯಾವಾಗ? ಕ್ರಮವಾಗಿ ಬಾವಿಯಿಂದ ನೀರನ್ನು ತುಂಬಿಕೊಳ್ಳಲು ಹೋಗುವಾಗ ಹಾಗೂ ಹಿಡಿಯ ಮೇಲೆ ಬಲಪ್ರಯೋಗವಾದಾಗ. ಅಂತೆಯೇ ಇಂದಿನ ಬಹುಪಾಲುಭಕ್ತರು ತಲೆಬಾಗುವುದು ಗುರುಗಳಿಂದ ಏನಾದರೂ ಗಿಟ್ಟಿಸಿಕೊಳ್ಳುವಾಗ, ಅಂತೆಯೇ ಇಂದಿನ ಮಾನವ ಇತರ ಮಾನವನ ಮುಂದೆ ವಿನಯವಗಿ ವರ್ತಿಸುವುದು ಸಂಕಷ್ಟಗಳ ಒತ್ತಡಕ್ಕೆ ಸಿಕ್ಕಿ ಸಹಾಯವನ್ನು ಅವನಿಂದ ಅಪೇಕ್ಷಿಸುವಾಗ ಎಂದು ಹೇಳಿದರೆ ಅಲ್ಲವಾದುದನ್ನು ಹೇಳಿದಂತೇನೂ ಆಗುವುದಿಲ್ಲ. ವಿವೇಕಾನಂದರೇ ಒಂದು ಕಡೆ ಹೇಳಿರುವಂತೆ ಜ್ಞಾನವು ಹೊರಗಿನಿಂದ ಬರುವ ವಸ್ತುವಲ್ಲ. ಅದು ಪ್ರತಿಯೊಬ್ಬ ಮಾನವನ ಹೃದಯದಲ್ಲಿಯೇ ಸುಪ್ತಗೊಂಡಿದೆ. (Knowledge is inherent in man. No knowledge come from outside; it is all inside.) ಹಾಗಾದಂತೆ ನಮಗೆ ಈಗ ಜ್ಞಾನೋದಯವಾಯಿತು, ಈಗ ಅರಿವಾಯಿತು ಎಂಬ ಅನುಭವ ಉಂಟಾಗುತ್ತದೆಯಲ್ಲಾ ಹೇಗೆ? ಎಂದರೆ ಅವರೇ ಹೇಳುವಂತೆ ಅದರ ಅರ್ಥ ಹೊರಗಿನಿಂದ ಎಲ್ಲಿಂದಲೋ ಜ್ಞಾನ ನಮ್ಮೊಳಕ್ಕೆ ಬಂದು ಸೇರಿದಂತೆಲ್ಲ. ನಮ್ಮೊಳಗೇ ಇರುವ ಜ್ಞಾನದ ಮೇಲಿರುವ ಪರದೆಯ ನಿಸ್ಸರಣವಾಯಿತೆಂದರ್ಥ, ಅಂದರೆ ನಮ್ಮೊಳಗಿರುವ ಜ್ಞಾನದ ಮೇಲೆ ಒಂದು ದೊಡ್ಡ ಪರದೆ ಇದೆ. ಅದು ಸರಿದು ಹೋದಂತೆಲ್ಲ ನಮಗೆ ಹೊಸ ಹೊಸ ಜ್ಞಾನ ಉಂಟಾದಂತಾಗುತ್ತದೆ. ಹೊಸ ಹೊಸ ಅರಿವು ಮೂಡಿ ಬಂದಂತಾಗುತ್ತದೆ. ಯಾವ ಮನುಷ್ಯನು ಹೆಚ್ಚು ಹೆಚ್ಚು ಈ ಪರದೆಯನ್ನು ಸರಿಸುವುದರ ಮೂಲಕ ಜ್ಞಾನವನ್ನು ಆವರಣ ರಹಿತವನ್ನಾಗಿ ಮಾಡುತ್ತಾ ಹೋಗುವನೋ ಅವನು ಜ್ಞಾನಿಯೆಂದು ಕರೆಯಲ್ಪಡುವನು. ಯಾವನಲ್ಲಿ ಈ ಪರದೆಯು ಸಂಪೂರ್ಣವಾಗಿ ದೂರ ಸರಿದಿರುವುದೋ ಅವನೇ ಸರ್ವಜ್ಞನೆನಿಸಿಕೊಳ್ಳುವನು. ಆದರೆ ಈ ಆವರಣದ ನಿಸ್ಸರಣಕ್ಕೆ ಬಾಹ್ಯವಸ್ತುವಿನ ಸಹಾಯ ಬೇಕಾಗುವುದು, ಅದು ಒಂದು ಪುಸ್ತಕವೇ ಆಗಬಹುದು ಅಥವಾ ಒಬ್ಬ ಚೈತನ್ಯಮೂರ್ತಿ ಗುರುವೇ ಆಗಬಹುದು. ಗುರುವಾದರೆ ಅನೇಕ ರೀತಿಗಳಿಂದ ಜ್ಞಾನದ ಮೇಲಿರುವ ಪರದೆಯು ನಿಸ್ಸರಣ ಮಾಡಿ ನಮ್ಮಲ್ಲಿ ಜ್ಞಾನಜ್ಯೋತಿಯು ಪ್ರಕಾಶಿಸುವಂತೆ ಮಾಡುತ್ತಾನೆ. ಪುಸ್ತಕವಾದರೆ ನಾವು ಎಲ್ಲಿಯವರೆಗೆ ಅದರಲ್ಲಿರುವ ಪದ ಪದವನ್ನೂ ಅರ್ಥಮಾಡಿಕೊಂಡು ಮುಂದುವರಿಯುವುದಿಲ್ಲವೋ ಅಲ್ಲಿಯವರೆಗೆ ನಮ್ಮಲ್ಲಿರುವ ಆವರಣ ನಿಸ್ಸರಣ ಸಾಧ್ಯವಿಲ್ಲ. ಅರ್ಥಮಾಡಿಕೊಳ್ಳದೇ ಓದುವುದಾಗಲೀ ಕಂಠಸ್ಥ ಮಾಡಿಕೊಳ್ಳುವುದಾಗಲೀ (ಈಗಿನ ಕೆಲವು ಪುರೋಹಿತರು ವೇದ ಮಂತ್ರಗಳನ್ನು ಕಂಠಗತ ಮಾಡಿಕೊಳ್ಳುವಂತೆ! ಹಾಗೂ ಈಗಿನ ಕೆಲವು ಪರಿಕ್ಷಾರ್ಥಿಗಳು (ವಿದ್ಯಾರ್ಥಿಗಳಲ್ಲ!) ಪರೀಕ್ಷೆಗೆ ಇಂಗ್ಲೀಷ್ ಪ್ರಬಂಧಗಳನ್ನು ಗಟ್ಟಿಮಾಡುವಂತೆ!) ಕತ್ತೆಯು ಚಂದನದ ಹೊರೆಯನ್ನು ಹೊತ್ತಂತೆ. ಕತ್ತೆಗೆ ಹೇಗೆ ತಿಳಿಯಬೇಕು ಚಂದನದ ಸುಗಂಧ? ಅದಕ್ಕೆ ಚಂದನದ ಹೊರೆಯ ಭಾರವಷ್ಟೇ ಗೊತ್ತು. ಅದಕ್ಕೆ ಸುಶ್ರುತ ಸಂಹಿತಾ ಎಂಬ ಸಂಸ್ಕೃತ ಗ್ರಂಥದಲ್ಲಿ ಹೇಳಿರುವುದು : ‘ಯಥಾ ಖರಶ್ಚಂದನಭಾರವಾಹೀ ಭಾರಸ್ಯ ವೇತ್ತಾ ನ ತು ಚಂದನಸ್ಯ| ಏವಂ ಹಿ ಶಾಸ್ತ್ರಾಣಿ ಬಹೂನ್ಯಧೀತ್ಯ ಚಾರ್ಥೇಷು ಮೂಢಾಃ ಖರವದ್ವಹಂತಿ||’ (ಭಾವಾನುವಾದ) ಶ್ರೀಗಂಧದ ಹೊರೆಯ ಹೊತ್ತುಕೊಂಡು ಒಂದು ಕತ್ತೆ ಸಾಗೆ, ಭಾರನಲ್ಲದೆ ಸುಗಂಧವದಕೆ ಗೊತ್ತೇ? ಶಾಸ್ತ್ರದ ತರಾಳವರಿಯದೆ ನಟಿಸಿ ಮೂರ್ಖರು ಶಾಸ್ತ್ರ ಭಾರದಿಂದ, ಹೊರೆಯ ಹೊತ್ತು ಕತ್ತೆಯಪ್ಪರು| ಇದನ್ನೇ ಪೋಪ್ ಕೂಡ ಒಂದಡೆ ಹೇಳುತ್ತಾರೆ: “The bookfull blackhead, ignorantly read, with loads of learned lumber in his head” ಆದ್ದರಿಂದ ‘ಗಿಳಿಯೋದಿದರೇನು ಲಿಂಗವೇಯಾಗಬಲ್ಲುದೆ?’ ಏಕೆಂದರೆ ಅದು ಕಲಿತದ್ದನ್ನು ಬಡಬಡಿಸಬಲ್ಲುದೇ ವಿನಾ ಅದರ ಅರ್ಥವೇನೂ ಅದಕ್ಕೆ ತಿಳಿಯದು. ಅರ್ಥವೇ ತಿಳಿಯದಿರುವಾಗ ಅದು ಲಿಂಗವೇದಿಯಾಗುವುದಾದರೂ ಹೇಗೆ? ಇಲ್ಲಿ ಲಿಂಗ ಎಂದರೆ ದೇವರು. ಆದ್ದರಿಂದ ದೇವರು ಹಾಗೂ ಧರ್ಮದ ಬಗ್ಗೆ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಂಡು ಸಾಧನೆಯಲ್ಲಿ ಕಂಡುಕೊಂಡ ಒಬ್ಬ ವಿವೇಕಿಯು ಲಿಂಗವೇದಿಯಾಗ ಬಲ್ಲನಲ್ಲದೆ, ಕಂಠಸ್ಥವಾಗಿರುವುದನ್ನು ಬಡಬಡಿಸುವ ಗಿಳಿ ಆಗಲಾರನು. ತಲೆಬಾಗುವುದಾಗಲೀ, ಕೈಜೋಡಿಸುವುದಾಗಲೀ, ಇತ್ಯಾದಿ ಬಾಹ್ಯ ಆಚರಣೆಗಳಿಂದ ಯಾರೂ ಭಕ್ತರಾಗಲಾರರು. ಇವಾವೂ ಭಕ್ತ, ಶರಣ, ಜಂಗಮ, ಪ್ರಥಮ ಈ ಪದಗಳಿಂದ ವ್ಯವಹರಿಸಲ್ಪಡುವ ವ್ಯಕ್ತಿತ್ವದ ಸೂಚಕಗಳಲ್ಲ ಈ ವ್ಯಕ್ತಿತ್ವದ ಸ್ವರೂಪವಾದ ನಡೆ-ನುಡಿ ಒಂದಾದ ನಿಲುವು ಆಂತರಿಕವಾಗಿ ಹೊರಹೊಮ್ಮಬೇಕು. ಅಂತಹವರೇ ಭಕ್ತರು, ಶರಣರು, ಜಂಗಮರು, ಪ್ರಮಥರೆನಿಸಿಕೊಳ್ಳುವರು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.