•  
  •  
  •  
  •  
Index   ವಚನ - 128    Search  
 
ಭಕ್ತನ ಜ್ಞಾನಿಸ್ಥಲ - ಆಸೆ
ಆಸೆಗೆ ಹುಟ್ಟಿದ ಪ್ರಾಣಿ ಆಸೆಯನೆ ಕಲಿತು, ಪುಣ್ಯದ ಪದವಿಯ ಬಯಸಿದರೆ ಭವಮಾಲೆಯೆ ಬರವು ತಪ್ಪದು. ಬೇಡಲು ಹುಟ್ಟಿದ ಪ್ರಾಣಿಗೆ, ಬೇಡಲು ವಿಧಿಯೇ! ಸೂಳೆಗೆ ಹುಟ್ಟಿದ ಪ್ರಾಣಿಗೆ ನಿಜಗುಣ ಸಜ್ಜನವಪ್ಪುದೆ? ಲಿಂಗ-ಉದಯ, ಶರಣ-ವಿಸ್ತಾರವು ಬಯಸಿದರೊಳವೆ, ಕೂಡಲಸಂಗಮದೇವಾ, ನಿಮ್ಮಲ್ಲಿ?
Transliteration Āsege huṭṭida prāṇi āseyane kalitu, puṇyada padaviya bayasidare bhavamāleye baravu tappadu. Bēḍalu huṭṭida prāṇige, bēḍalu vidhiye! Sūḷege huṭṭida prāṇige nijaguṇa sajjanavappude? Liṅga-udaya, śaraṇa-vistāravu bayasidaroḷave, kūḍalasaṅgamadēvā, nim'malli?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If a creature born of greed and, learning greed, Covets a meritorious pride of place, Will the birth-cycle fail to come? Is begging a curse for one who's born to beg? And will a harlot's child be gentle and nice? Will it be proper, O Lord Kūḍala Saṅgama To wish for the Liṅga -dawn, the spread of Śaraṇās , In you? Translated by: L M A Menezes, S M Angadi
Hindi Translation आशार्थ उत्पन्न प्राणी आशा ही सीखकर पुण्य-पद चाहे, तो भवमाला की प्रखरता से मुक्ति नहीं भिक्षार्थ उत्पन्न प्राणी के लिए याचना करना शाप है? वेश्या से उत्पन्न प्राणी गुण-शील संपन्न हो सकता है? लिंग-उदय, शरण-विस्तार तुम से चाहना उचित, कूडलसंगमदेव॥ Translated by: Banakara K Gowdappa
Telugu Translation ఆశకు పుట్టిన ప్రాణి ఆళనే నేర్చి పుణ్యపదవి నాశింప భవమాల రాక తప్పదు. యాచింప పుట్టిన ప్రాణికి యాచనవిధియే! లంజకు పుట్టిన ప్రాణికి సద్గుణసారము కల్గునే? లింగోదయము. శరణ విస్తారము తలచిన వచ్చు నే; కూడల సంగమదేవా నీ పట్ల ? Translated by: Dr. Badala Ramaiah
Tamil Translation ஆசைக்குப் பிறந்த உயிர் ஆசையையே கற்று வீடு பேற்றினை விரும்பின் பிறவித் தொடரின் வரவு உறுதியாம் இரத்தற்குப் பிறந்த உயிருக்கு இரத்தல் ஊழ்வினையோ? சூளைக்குப் பிறந்த உயிருக்கு மெய்யான நல்லியல்புண்டோ? இலிங்கத் தோற்றம், அடியார் நேருணர்வை நயப்பரோ கூடல சங்கம தேவனே, உம்மிடம்? Translated by: Smt. Kalyani Venkataraman, Chennai
Marathi Translation आशापाठी जन्मूनि, आशेचा घरी ध्यास पदरी पुण्य त्यास, मिळे कैसे ? वेश्यापोटी जन्मुनि, आशापाठी राहुनि सज्जन निजगुणी होई कैसा ? वेश्यापोटी जन्मुनि, परी आशा सांडोनि सज्जन संगे राहुनि, मिळे मोक्ष ! सांडण्या येरझारा, जन्मजन्मांतराचा मागणी मागण्याची, लाज कैसी ? ज्ञानोदय लिंगाचा, शरण विशालता जोवरी न मागता मिळे कैसे ? कूडलसंगमदेवा ! मागणाऱ्या प्राण्याना लज्जा येता मनी, पावे कैसा ? अर्थ - इहलोकातील सुख भोगावे आणि शेवटी भवपाशातून वा जन्म-जन्मांतराच्या फेऱ्यातून सुटका करून घ्यावी या आशेने जन्म घेतलेला मानव येथे येऊन आतच अडकून राहिला आहे. मोक्ष मिळावा अशी केवळ इच्छा व्यक्त केल्याने तो कसा काय मिळू शकेल ? देवाजवळ मागणी घालताना लहान सहान मागणी करण्यापेक्षा अंतीम सत्य म्हणजे मोक्ष का मागू नये ? आणि मागणी मागताना त्यात लज्जा वा कृत्रिमता कशाला ? एकच मागणी तेही अंतर मनापासून व जिवनाच्या शेवट पर्यंत का मागणी करु नये ! वेश्या पोटी जन्म घेणाऱ्यालाही जर त्यानी आशा सोडून दिल्यास व शिवशरणांची सत्संगत मिळाल्यास निश्चित तो मोक्षाला पात्र ठरतो. शरणधर्मात लिंग ज्ञान व तत्व जाणण्यासाठी शरणांकडे मागणी करा व ते मागितल्यानेच मिळत असते स्वत:चा विकास व विस्तार करून घेण्यासाठी व ऐक्य साधण्यासाठी ज्ञानाची मागणी करा पण ते अंतर मनाने मागितले तरच शिवशरण मुक्त हस्ताने व उदार अंतकरणाने देतील हे निश्चित जाणा. Translated by Rajendra Jirobe, Published by V B Patil, Hirabaug, Chembur, Mumbai, 1983 आशेसाठी जन्मलेला प्राणी आशा शिकून, पुण्य पदाची आशा ठेवली तर भवचक्रात येणे चुकणार नाही. मागण्या साठी जन्म घेतला तर मागण्यात हानी कोणती? वेश्यापुत्राला सज्जनत्व आवडेल काय ? लिंग पथावरील जन्म, शरण पथावर चालणे, मागितल्याने मिळणार आहे कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಉದಯ = ಹುಟ್ಟು; ಭವ = ಜೀವನ; ವಿಧಿ = ಹಣೆಬರಹ;
ಕನ್ನಡ ವ್ಯಾಖ್ಯಾನ ಕಾಮದ ಆಶೆಗೆ ಹುಟ್ಟಿದ ಈ ಮಾನವ ಪ್ರಾಣಿ ಆಶೆಯಿಂದಲೇ ಬೆಳೆದು, ಆಶೆಯಲ್ಲೇ ತೊಳಲಿ ಸತ್ತರೆ-ಪುನರಪಿ ಜನನ ಪುನರಪಿ ಮರಣದ ಸಂಸಾರಚಕ್ರ ಅವನ ಮೇಲೆ ಹರಿಯದೆ ಬಿಡದು. ದೇವರಿಗೆ ಹರಕೆ ಹೊತ್ತು ಹೆತ್ತ ಈ ಮಾನವಪ್ರಾಣಿಗೆ ಜೀವನಪರ್ಯಂತವೂ-ಮಿಂಚಿ ಮಾಯವಾಗುವ ಕ್ಷಣಿಕ ಮತ್ತು ಕ್ಷುದ್ರ ಸುಖಗಳತ್ತ ಕೈಚಾಚಿ ಅಂಗಲಾಚುವುದೇ ವಿಧಿಯಾಯಿತೇನು ? ಮಾಯೆಗೆ ಹುಟ್ಟಿದ ಈ ಮಾನವ ಪ್ರಾಣಿಗೆ ತಾನು ಶಿವನ ಅಂಶವೆಂಬ ನೈಜಾನುಸಂಧಾನ ಹೇಗಾದೀತು? ಸೂರ್ಯೋದಯವಾದರೆ ಸೃಷ್ಟಿವಿಸ್ತಾರವು ಕಂಗೊಳಿಸಿ ಕಾಣಿಸುವುದು-ಲಿಂಗೋದಯವಾದರೆ ಶರಣ ವಿಸ್ತಾರವು ದೃಗ್ಗೋಚರವಾಗುವುದು. ಆದರೆ ಸೂರ್ಯೋದಯವಾಗಲಿ ಲಿಂಗೋದಯವಾಗಲಿ ಬರಿದೆ ಬಯಸಿದ ಮಾತ್ರಕ್ಕೆ ಆಗದು. ಕಾಳರಾತ್ರಿ ಕಳೆಯಬೇಕು ಸೂರ್ಯೋದಯವಾಗಬೇಕು. ಅಂಗಗುಣ ಕಳೆಯಬೇಕು ಲಿಂಗೋದಯವಾಗಬೇಕು. ಆ ಅಂಗಗುಣ ಕಳೆಯಬೇಕಾದರೂ ಮನಸ್ಸಿನಲ್ಲೇ ಮಂಡಿಗೆ ಮುರಿದರಾಗುವುದಿಲ್ಲ-ಆಶೆಯನ್ನು ಮೆಟ್ಟಿ ನಿಲ್ಲಬೇಕು, ಯಾರ ಮುಂದೆಯೂ ಕೈಚಾಚದೆ ಶಿವನೊಬ್ಬನಿಗೇ ಬದ್ಧಾಂಜಲಿಯಾಗಿ ನಿಲ್ಲಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು