ಭಕ್ತನ ಜ್ಞಾನಿಸ್ಥಲ - ಅವಗುಣಿ
ಸ್ನೇಹ ತಪ್ಪಿದ ಠಾವಿನಲ್ಲಿ ಗುಣವನರಸುವರೆ, ಅಯ್ಯಾ?
ಹೂ ಬಾಡಿದಲ್ಲಿ ಪರಿಮಳವನರಸುವರೆ, ಅಯ್ಯಾ?
ಎನ್ನ ತಂದೆ ಕೂಡಲಸಂಗಮದೇವಾ,
ತೊರೆಯಿಳಿದರೆ ಅಂಬಿಗಂಗೇನುಂಟು?
Transliteration Snēha tappida ṭhāvinalli guṇavanarasuvare, ayyā?
Hū bāḍidalli parimaḷavanarasuvare, ayyā?
Enna tande kūḍalasaṅgamadēvā,
toreyiḷidare ambigaṅgēnuṇṭu?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Where friendship is undone,
Would you, Sir, look for goodness there?
And would you, Sir, expect perfume
In withered flower?
My Father,Kūḍala Saṅgama Lord,
What is the rower's lot
When the stream ebbs?
Translated by: L M A Menezes, S M Angadi
Hindi Translation स्वामिन, स्नेहहीन स्थान पर गुण खोजते हो-
कुम्ह्लाए फूल में परिमल खोजते हो
मेरे पिता कूडलसंगमदेव
प्रवाह घट जाय, तो धीवर को क्या मिलेगा?
Translated by: Banakara K Gowdappa
Telugu Translation స్నేహము దప్పినకడ గుణము చూతురే అయ్యా!
పుష్పము వాడిన యెడ పరిమళము దలతురె అయ్యా!
అయ్యా! కూడల సంగమదేవా;
ప్రవాహము తగ్గ పనియేమి బెస్తకు?
Translated by: Dr. Badala Ramaiah
Tamil Translation நட்பற்றவிடத்திலே நல்லியல்பைத் தேடுவாரோ ஐயனே?
உலர்ந்த மலரிலே நறுமணத்தைத் தேடுவாரோ ஐயனே?
என் தந்தையே கூடல சங்கம தேவனே
நதியிலே நீர் குறையின் படகோட்டி இருப்பானோ?
Translated by: Smt. Kalyani Venkataraman, Chennai
Marathi Translation
जेथे नाही स्नेह, नको शोधू तेथे
गुण-अवगुणाते, व्यर्थ जाण
सुकलेल्या फुलात, सुगंध का शोधिता
तैसिया पाहू जाता, व्यर्थ जाण
कूडलसंगमदेवा ! जेव्हा पूर ओसरे
नाव नको शोधूरे, व्यर्थ जाण
अर्थ - जेथे स्नेह व प्रेमाचा अभाव असतो तेथे सद्गुण किंवा अवगुण शोधण्यात व्यर्थ वेळ घालवू नये. तेथे गुण शोधूनही सापडणार नाही. आणि अशा लोकांकडून सदाचाराची अपेक्षाही करु नये. कोमेजलेली, सुकलेली फुले दिसतात तेथे सुगंध (परीमळ) कसा दरवळेल ? तशा ठिकाणी परिमळ सिंचन करणारा भ्रमर देखील त्याकडे ढुंकूनही पाहत नाही आणि आपला अमूल्य वेळ वाया घालवीत नाही. जेथे नदीचा पूर ओसरलेला आहे तेथे नावाडी किंवा नाव कोणी शोधील का ? म्हणून परस्पर प्रेम, स्नेहभाव ज्यांच्या जवळ नाही अशांच्या नादी लागू नये व आपला वेळ वाया घालवू नये.
इत्यर्थं असा की ऐन तारुण्यात, उमेदित असतांनाच परमेश्वराची भक्ति आराधना करावी व सदाचारी जीवन जगावे. नाही तर पूर ओसरल्यानंतर म्हणजे शरिरातील धमक, गर्मी वा चेतना संपल्यावर म्हातारपणी शरीर जर्जर झाल्यावर देव धर्म करीत बसण्यात काही अर्थ नाही.
Translated by Rajendra Jirobe, Published by V B Patil, Hirabaug, Chembur, Mumbai, 1983
स्नेह नष्ट झालेल्या ठिकाणी गुण कोण शोधणार ?
सुकलेल्या फूलात परिमळ कोण शोधणार ?
हे पिता कूडलसंगमदेवा,
पूर ओसरल्यावर नावाड्याला कोण शोधणार?
Translated by Shalini Sreeshaila Doddamani
ಶಬ್ದಾರ್ಥಗಳು ಕಾವು = ; ತೊರೆ = ನದಿ ಹಳ್ಳ; ಪರಿಮಳ = ಸುಗಂಧ;
ಕನ್ನಡ ವ್ಯಾಖ್ಯಾನ ಸಂಸಾರದ ಸೆಳವಿಗೆ, ಶಿವನ ಉಪೇಕ್ಷೆಗೆ ಬಸವಣ್ಣನವರು ಆಸತ್ತು ಹೇಳುತ್ತಿರುವ ಮಾತಿದು ; ನನ್ನ ಬಗ್ಗೆ ನಿನಗೆ ಸ್ನೇಹಸ್ಪಂದನವಿಲ್ಲದ ಮೇಲೆ-ನನ್ನಲ್ಲಿ ಗುಣವೆಲ್ಲಿ ತಾನೇ ಕಂಡೀತು ನಿನಗೆ ? ಮತ್ತು ನಾನೂ ಈ ಕಾಲಕಾಮರ ಉಪಟಳದಿಂದಾಗಿ ಬಹಳ ಸೋತಿದ್ದೇನೆ-ಬಾಡಿದ ಹೂವಿನಂತಿರುವ ನನ್ನಲ್ಲಿ ಸದ್ಗುಣ ಪರಿಮಳವಾದರೂ ಎಲ್ಲಿದ್ದೀತು-ಎಂದು ಬಸವಣ್ಣನವರು ಶಿವನನ್ನೂ ಆಕ್ಷೇಪಿಸಿ, ತಮ್ಮನ್ನೂ ಪರಿಚ್ಛೇದಿಸಿಕೊಳ್ಳುತ್ತಿರುವರು.
ಮರಳಿ ಅವರು ಆ ಶಿವನಿಗೇ ತಂದೆ ಎಂದು ಮೊರೆಯಿಡುತ್ತ-ಅಪಾರವನ್ನು ದಾಟುವಾಗಲೇ ಅಲ್ಲವೇ ಅಂಬಿಗನ ಅವಶ್ಯಕತೆ ಅಧಿಕವಾಗಿರುವುದು ? ಅದೇ ರೀತಿ ಸಂಸಾರಸಾಗರದ ಆ ತೀರ ಕಾಣದೆ ದಿಕ್ಕುತಪ್ಪಿರುವ ನನಗೆ ನಿನ್ನ ಸಹಾಯಹಸ್ತ ಬೇಕಾಗಿದೆ-ಎಂದು ಬೇಡಿಕೊಳ್ಳುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು