ಭಕ್ತನ ಜ್ಞಾನಿಸ್ಥಲ - ಲಿಂಗ-ಜಂಗಮ
ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇಬೇಕು,
ದಕ್ಕ ನುಂಗಿದಂತೆ ಬೆರೆತುಕೊಂಡಿರಬೇಡ:
ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದಡೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.
Transliteration Liṅgava pūjisida baḷika jaṅgamakkan̄jalēbēku,
dakka nuṅgidante beretukoṇḍirabēḍa:
Bīgi beḷeda gonevāḷeyante bāgikoṇḍiddaḍe
bēḍida padaviyanīva kūḍalasaṅgamadēva.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 After you worship Liṅga
You must have fear for Jaṅgama.
Do not be stiff
Like one who has swallowed a stake;
But if you bend, like a bunch
Of plantains grown full big,
Lord Kūḍala Saṅgama
Will give you all the power you ask.
Translated by: L M A Menezes, S M Angadi
Hindi Translation लिंगपूजा करने पर-
जंगम से डरना ही होगा
कील निगले सा स्तब्ध मत रहो
सुपुष्ट कदलीगुच्छ सा झुके रहो-
कूडलसंगमदेव वांछित पद प्रदान करेंगे ॥
Translated by: Banakara K Gowdappa
Telugu Translation కర్మకు మూలము గర్వపు భక్తి
ఆచారమునకు చేటు మర్మ మెఱుగని సేత;
వచ్చిన సమయోచితము తెలియకున్న
నిలువడయ్యా కూడల సంగమదేవుడు.
Translated by: Dr. Badala Ramaiah
Tamil Translation இலிங்கத்தை வழிபடின் மெய்யன்பருக்கு அஞ்சுமின்,
உலக்கை விழுங்கினதனைய விறைப்புக் கொள்ளாதீர்;
ஓசிந்தொல்கிய வாழைக்குலையனைய சாய்வுறின்
வேண்டிய பதவியை யீவான் கூடல சங்கம தேவன்.
Translated by: Smt. Kalyani Venkataraman, Chennai
Marathi Translation
लिंगदेवाची पूजा केल्यावर जंगमाला घाबरले पाहिजे.
त्यांच्यासमोर मदोन्मत होऊ नये.
केळी लागलेल्या केळीच्या झाडाप्रमाणे नम्र झाला तर
मागेल ती पदवी देईल कूडलसंगमदेव,
Translated by Shalini Sreeshaila Doddamani
ಶಬ್ದಾರ್ಥಗಳು ಅಂಜು = ಹೆದರು; ಕೊನೆವಾಳೆ = ; ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ದಕ್ಕು = ಪಡೆಯುವುದು; ಪದವಿ = ಅಧಿಕಾರ;
ಕನ್ನಡ ವ್ಯಾಖ್ಯಾನ ಲಿಂಗವನ್ನು ಪೂಜಿಸಿದ ಬಳಿಕ-ಜಂಗಮಕ್ಕೆ ತಲೆವಾಗಿ ವಿನಮ್ರವಾಗಿ ನಡೆದುಕೊಳ್ಳಬೇಕು-ಗೂಟಕ್ಕೆ ಪೆಟ್ಟಿದ ತಲೆಯಂತೆ ಸೆಟೆದಿರಬಾರದು. ಜಂಗಮರ ಸನ್ನಿಧಿಯಲ್ಲಿ-ಬಿಟ್ಟ ಗೊನೆಯ ಭಾರಕ್ಕೆ ಬಾಗಿದ ಬಾಳೆಯಂತಿದ್ದರೆ-ನೀನು ಕೇಳಿದ್ದನ್ನು ಶಿವನು ಕೊಡುವನು.
ವಿ : ಪದವಿಗಳು ನಾಲ್ಕುಂಟು : ಸಾಲೋಕ್ಯ-ಸಾಮೀಪ್ಯ-ಸಾರೂಪ್ಯ-ಸಾಯುಜ್ಯ ಎಂದು. ಸಾಲೋಕ್ಯವೆಂದರೆ-ದೇವರ ಕಣ್ಮುಂದೆಯೇ ಇರುವುದು. ಸಾಮೀಪ್ಯವೆಂದರೆ-ದೇವರ ಪಕ್ಕದಲ್ಲೇ ಇರುವುದು, ಸಾರೂಪ್ಯವೆಂದರೆ-ದೇವರ ರೂಪವನ್ನೇ ಪಡೆದಿರುವುದು, ಸಾಯುಜ್ಯವೆಂದರೆ ದೇವರಲ್ಲಿಯೇ ಲೀನವಾಗಿರುವುದು. ಇವು ಒಂದಕ್ಕಿಂತ ಒಂದು ಅತಿಶಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು