•  
  •  
  •  
  •  
Index   ವಚನ - 215    Search  
 
ಭಕ್ತನ ಜ್ಞಾನಿಸ್ಥಲ - ನಿರ್ವಂಚನೆ
ಕೌಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ ಕಳನೇರಿ ಕಾದುವುದರಿದು ನೋಡಾ. ಬಣ್ಣವಿಟ್ಟು ನುಡಿದಲ್ಲಿ ಫಲವೇನು? ಚಿನ್ನಗೆಯ್ಕನಾಡುವನಂತೆ ಬಂದ ಸಮಯವನರಿತು, ಇದ್ದುದ ವಂಚಿಸದಿದ್ದಡೆ ಕೂಡಲಸಂಗಮದೇವನೊಲಿದು ಸಲಹುವ.
Transliteration Kavuḷugōla hiḍidu śravava māḍabahudallade kaḷanēri kāduvudaridu nōḍā. Baṇṇaviṭṭu nuḍidalli phalavēnu? Cinnageykanāḍuvanante banda samayavanaritu, idduda van̄cisadiddaḍe kūḍasaṅgamadēvanolidu salahuva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 With a forked stick You may perform your drill; You cannot fight with it Upon the battlefield! What use to talk in flowers of speech, Even as a goldsmith does? If you but know the time And do not mask What you have, Lord Kūḍala Saṅgama will love, And guard you too. Translated by: L M A Menezes, S M Angadi
Hindi Translation मुद्गर लिये व्यायाम कर सकते हैं युद्धभूमि में जूझना कठिन है- आलंकारिक भाषा बोलने से क्या लाभ? जैसे सुनार बोलता है । प्राप्त समय जानकर जो भी हो, उसे न छिपाने से कूडलसंगमदेव प्रसन्न होकर रक्षा करेंगे ॥ Translated by: Banakara K Gowdappa
Telugu Translation తమరకోలు పట్టి శ్రమియింపవచ్చు గాని ఆజి నిలిచి పోరుటన్న అరిది కంసలివలె వన్నె పెట్టి పల్క ఫలమేమి? వచ్చు వేళ దెలిసి వంచన సేయక ఉన్నదిచ్చిన సంగయ్య మెచ్చునయ్య. Translated by: Dr. Badala Ramaiah
Tamil Translation கோல் பற்றிச் சிலம்ப மாடலாமன்றிச் சமர்க்களமேறிப் போர் புரியலாகுமோ! காணாய் இனிக்க இனிக்க உரைத்துப் பயனென்ன? பொற்கொல்ல னாடு முரையனைய! வந்த பொழுதினையறிந்து, உள்ளதை ஏய்க்காதுழி கூடல சங்கம தேவ னன்புட னருள்வான். Translated by: Smt. Kalyani Venkataraman, Chennai
Marathi Translation शस्त्राभ्यासात कौशल्य दाखविता येईल, पण रणभूमीवर पराक्रम दाखविणे सोपे नाही. मोठ्या-मोठ्या गप्पा मारुन काय उपयोग? सोनार जसे सोने हडप करतो. प्रसंगी जाणून वंचना न केल्यास कूडलसंगमदेव प्रसन्न होऊन रक्षण करतील.. Translated by Shalini Sreeshaila Doddamani
ಶಬ್ದಾರ್ಥಗಳು ಕಾದು = ಹೋರಾಡು; ಕೌಳು = ; ವಂಚಿಸು = ಮೋಸಮಾಡು; ಶ್ರವ = ಸಾಧನ;
ಕನ್ನಡ ವ್ಯಾಖ್ಯಾನ ಕೌಳುಕೋಲೆಂದರೆ-ತಲಹಿಲ್ಲದ ಬರೀ ಬಾಣದ ಕಡ್ಡಿ. ಅದರಲ್ಲಿ ಅಣಕಯುದ್ಧ ಮಾಡುತ್ತ ವರ್ಷಗಟ್ಟಲೆ ಕಾಲ ಕಳೆಯುವುದು ಸುಲಭ-ಆದರೆ ರಣರಂಗಕ್ಕೆ ನುಗ್ಗಿ ಒಂದು ಕ್ಷಣವಾದರೂ ಯುದ್ಧ ಮಾಡುವುದು ಸುಲಭವಲ್ಲ ಹೇಡಿಗೆ. ಹಾಗೆಯೇ ವಂಚಕಭಕ್ತನು ತನ್ನ ಮನೆಗೆ ಬಂದ ಶಿವಭಕ್ತರಿಗೆ-ಸ್ನಾನ ಮಾಡಲಿ ಪೂಜೆ ಮಾಡಲಿ ಪ್ರಸಾದ ಸ್ವೀಕರಿಸಲಿ ಎಂದು ದಾಸೋಹದ ಒಂದು ಮಾತನ್ನೂ ಆಡದೆ, ಬರೀ ಬಣ್ಣದ ಮಾತುಗಳನ್ನಾಡಿ-ಆಚೆಗೆ ಕಳಿಸುವನು. ಇಂಥ ವಂಚಕ ಭಕ್ತನಾಡುವ ಬಣ್ಣದ ಮಾತುಗಳನ್ನು ಅಕ್ಕಸಾಲೆಯ ಗಿಲೀಟು ಮಾತುಗಳಿಗೆ ಬಸವಣ್ಣನವರು ಹೋಲಿಸುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು