•  
  •  
  •  
  •  
Index   ವಚನ - 217    Search  
 
ಭಕ್ತನ ಜ್ಞಾನಿಸ್ಥಲ - ತ್ರಿವಿಧ ದಾಸೋಹ
ಅರ್ಥ ಪ್ರಾಣಾಭಿಮಾನದಲ್ಲಿ ವಂಚನೆಯಿಲ್ಲದ ಭಕ್ತಿ, ಸಮಯಾಚಾರ. ಜಂಗಮವೇ ಲಿಂಗವೆಂಬುದಕ್ಕೆ ಏನು ಗುಣ. ಮನದ ಲಂಪಟತನ ಹಿಂಗದಾಗಿ? ಒಡೆಯರ ಬರವಿಂಗೆ ಕುನ್ನಿ ಬಾಲ ಬಡಿದರೆ ವೆಚ್ಚವೇನು ಹತ್ತುವುದು, ಕೂಡಲಸಂಗಮದೇವಾ?
Transliteration Artha prāṇābhimānadalli van̄caneyillada bhakti, samayācāra. Jaṅgamave liṅgavembudakke ēnu guṇa. Manada lampaṭatana hiṅgadāgi? Oḍeyara baraviṅge kunni bāla baḍidare veccavēnu hattuvudu, kūḍalasaṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 How does one practise faith? By piety illusionless About wealth, life and self. If the heart's lewdness does not cease, What sign is there to show That Jaṅgama itself is Liṅga ? If, when the master comes, The, puppy wags his tail, What does it cost the dog, O Kūḍala Saṅgama Lord? Translated by: L M A Menezes, S M Angadi
Hindi Translation अर्थ प्राणभिमान में निर्वचनभक्ति ही समयाचार है, जंगम ही लिंग है –इसका क्या आधार है? जब तक मन की लंपटता दूर नहीं होती? स्वामी के आने पर श्वान पूँछ हिलाए, तो उसका क्या मोल लगेगा, कूडलसंगमदेव? Translated by: Banakara K Gowdappa
Telugu Translation అర్ధ ప్రాణాభిమానముల వంచన సేయని భక్తి సమయాచారము; జంగమమే లింగమన ఫలమేమి? మనోలంపటము సడలనందాక; ఒడయులు రాగ తోకనాడిరచు కుక్కకేమి నష్టము కూడల సంగయ్యా? Translated by: Dr. Badala Ramaiah
Tamil Translation செல்வம், உயிர், மதிப்பிலே ஏய்ப்பில்லதே பக்தி அறநெறி, சிவனடியாரே இலிங்கமெனின் ஆகுமோ மனத்திலே நிறைந்துள்ள பற்றினை விடாமல்? உடையனைக் கண்டு நாய்க்குட்டி வாலையாட்டின் அதற்குச் செலவாமோ கூடல சங்கம தேவனே? Translated by: Smt. Kalyani Venkataraman, Chennai
Marathi Translation अर्थ-प्राण-अभिमानात वंचनारहित भक्ती खरी भक्ती होईल. अती न करणे, कमी न करणे हाच धर्म आहे. मनाची लंपटता दूर झाल्याविना जंगमच लिंग आहे असे म्हणण्यात काय अर्थ? मालक आल्यावर कुत्रे शेपूट हालविते. यात काय खर्च होते कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಅರ್ಥ = ಹಣ; ಕುಂದು = ಕಡಿಮೆಯಾಗು; ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ಲಂಪಟ = ವಿಷಯಾಸಕ್ತ; ವಂಚನೆ = ಮೋಸ;
ಕನ್ನಡ ವ್ಯಾಖ್ಯಾನ ತನ್ನ ಧನಕ್ಕೆ ಹಾನಿ ತಟ್ಟಲಿ, ಪ್ರಾಣಕ್ಕೆ ಅಪಾಯ ಒದಗಲಿ, ಹೆಂಡತಿ ಮಕ್ಕಳ ಅಭಿಮಾನಕ್ಕೆ ಚ್ಯುತಿ ಯಾಗಲಿ-ಮತ್ತೆಯೂ ಜಂಗಮಭಕ್ತಿಯನ್ನು ಕೊರತೆಯಿಲ್ಲದೆ ಮುಂದುವರಿಸಬೇಕು-ಇದು ಸಮಯಾಚಾರ, ಈ ಸಮಯಾಚಾರವನ್ನು ನಡೆಸದೆ-ಜಂಗಮವೇ ಲಿಂಗವೆಂಬುವನ ಮಾತಿಗೇನು ಅರ್ಥವಿದೆ ಎಂದು ಪ್ರಶ್ನಿಸಿ –ಬರಿಯ ಮಾತಾಡುವರನ್ನು ಒಡೆಯನು ಬಂದಾಗ ಕೇವಲ ಬಾಲಬಡಿಯುವ ನಾಯಿಗೆ ಹೋಲಿಸಿರುವರು ಬಸವಣ್ಣನವರು. ನಾಯಿ ಜಾತಿನಾಯಾದರೆ ಒಡೆಯನ ಜೊತೆಜೊತೆಗೆ ಹೋಗಿ-ಅವನ ಮೇಲೆ ಬಿದ್ದ ಕಳ್ಳರನ್ನು ಕಚ್ಚದೆ, ಹಂದಿ ಹುಲಿಯೊಡನೆ ಸೆಣಸಾಡದೆ ಬರೀ ಬಾಲ ಬಡಿದರೇನು ಬಂತು ? ಸಮಯಾಚಾರ ವಿಲ್ಲದವನು ಜಂಗಮರನ್ನು ನೀವು ಲಿಂಗಸ್ವರೂಪಿಗಳೆಂದು ನಮ್ಮ ಒಡೆಯರೆಂದು ಮುಂತಾಗಿ ಕೊಂಡಾಡಿ-ತನು ಮನಧನವನ್ನು ಬಚ್ಚಿಟ್ಟುಕೊಂಡರೆ-ಅದು ಅರ್ಥಹೀನ ಭಜನೆಯಷ್ಟೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು