•  
  •  
  •  
  •  
Index   ವಚನ - 252    Search  
 
ಭಕ್ತನ ಭಕ್ತಸ್ಥಲ - ಅಹಂಕಾರ
ವೇದಾದಿ ನಾಮ ನಿರ್ನಾಮ| ಮಹತೋ ಮಹದೀಶ್ವರಂ ಗುರೂಕ್ತಮಂತ್ರಮಾರ್ಗೇಣ| ಜಾತಮಿಷ್ಟಂ ತು ಶಾಂಕರಿ ಎಂದುದಾಗಿ, ವಚನಪಾತಕವೆನ್ನ, ವಚನದೋಷಂಗಳೆನ್ನ, ಕಾಡಿ ಕಾಡಿ ಕೆಡಿಸಿಹುವೆನ್ನ, ಕೂಡಲಸಂಗಮದೇವಾ, ಅಹಮ್ಮೆಂಬ ಅಹಂಕಾರವೆನ್ನ!
Transliteration Vēdādi nāma nirnāma| mahatō mahadīśvaraṁ gurūktamantramārgēṇa| jātamiṣṭaṁ tu śāṅkari endudāgi, vacanapātakavenna, vacanadōṣaṅgaḷenna, kāḍi kāḍi keḍisihuvenna, kūḍalasaṅgamadēvā, `ahaṁ' emba ahaṅkāravenna!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The name is nameless whence The Revelations, flow, The great one, the Supreme, Through the mantra by the Guru said, Is Iṣṭaliṅga O Śaṅkari !' As said above, The sin of word, the slip of tongue Have plagued and ruined me, O Kūḍala Saṅgama Lord! So, too, the pride Of this 'I am'. Translated by: L M A Menezes, S M Angadi
Hindi Translation वेदादि नाम निर्नाम महत्तत्वं मदीश्वरः। गुरुक्त मंत्र मार्गेण इष्टलिंगं शांकरी ॥ यों कहा गया है मेरा वचन कृत पाप, मेरा वाक – दोष, मेरा अहं रुपी अहंकार मुझे सता सताकर नष्ट कर रहे हैं, कूडलसंगमदेव ॥ Translated by: Banakara K Gowdappa
Telugu Translation వేదాదినామ నిర్నామం; మహత్వం మహనీశ్వరం; గురూక్త మంత్రమార్గేణ; ఇష్టలింగంత శంకరీ; కానవచన పాపము నన్ను వచన దోషంబులు నన్ను అహంబను అహంకారము నన్ను నలిపి నలిపి, చెరచెనయ్యా కూడల సంగమదేవా! Translated by: Dr. Badala Ramaiah
Tamil Translation வேதாதிநாம நிர்நாம மஹத்தத்வம் மதீஸ்வர| குரூக்த மந்த்ரமார்கேண இஷ்டலிங்கம் து ஸாங்கரி|| என்பதால் சொற்றீங்கும், சொற்குற்றமுமென்னை வருத்தி வருத்தி என் நலமழித்தன, கூடல சங்கம தேவனே, “நான் எனும் செருக்கு எனை” Translated by: Smt. Kalyani Venkataraman, Chennai
Marathi Translation वेदादि नाम निर्नाम महत्तत्त्वं मदिश्वरः। गुरुक्त मंत्रमार्गेण इष्टलिंगं तु शांकरि। म्हणून वचन पातकी मी, वचनदोषी मी, त्रास देवून देवून मला नष्ट केले. कूडलसंगमदेवा `अहं` या भावाच्या अहंकाराने मला शिल्लक ठेवले नाही. Translated by Shalini Sreeshaila Doddamani
ಶಬ್ದಾರ್ಥಗಳು ಉಕ್ತ = ಹೇಳು; ಪಾತಕ = ಪಾಪ; ಮಹತ್ = ದೊಡ್ಡದು; ಶಾಂಕರಿ = ;
ಕನ್ನಡ ವ್ಯಾಖ್ಯಾನ “ಎಲೆ ಪಾರ್ವತಿ, ಯಾವುದನ್ನು ವೇದಾದಿಗಳಲ್ಲಿ-ನಾಮವಿಲ್ಲದ್ದರಿಂದ ನಿರ್ನಾಮ(ಪರತ್ಪರ)ವೆಂದೂ, ನನ್ನ ರೂಪವೇ ಅದುದರಿಂದ ಮಹಿಮಾನ್ವಿತವೆಂದೂ ಹೇಳಲಾಗಿದೆಯೋ-ಅದು ಮಂತ್ರಪುರಸ್ಸರವಾಗಿ ಗುರು ಕೊಟ್ಟ ಇಷ್ಟಲಿಂಗವೇ ಆಗಿದೆ” ಎಂಬುದು ಶಿವನು “ಪರಮರಹಸ್ಯ” ದಲ್ಲಿ ಹೇಳಿರುವ ಮಾತು (ನೋಡಿ ನನ್ನ ವೀರಶೈವತತ್ತ್ವ ಮತ್ತು ಆಚರಣೆ-ಪ್ಯಾರಾ 3). ಹೀಗೆ ಈ ಶಿವಾಗಮವನ್ನು ಉಲ್ಲೇಖಿಸಿ ಬಸವಣ್ಣನವರು ಏನನ್ನು ಹೇಳುತ್ತಿರುವರು ? “ಆಹಾ” ಎನ್ನುವ ತನ್ನ ಅಹಂಕಾರವೂ, ಆ ಅಹಂಕಾರದಿಂದ ಕೂಡಿದ ವಚನದೋಷವೂ, ಆ ವಚನ ದೋಷದಿಂದ ಉಂಟಾದ ವಚನಪಾತಕವೂ ತಮ್ಮನ್ನು ಕೆಡಿಸಿದೆಯೆನ್ನುತ್ತಿರುವರು. ಅಂದರೆ-ಅತ್ತ ಶಿವನು ಇಷ್ಟಲಿಂಗವನ್ನು ತನ್ನ ರೂಪೆಂದು ಹೇಳಿದರೆ-ಇತ್ತ ಆ ಶಿವಲಿಂಗಸ್ವರೂಪಿ ನಾನೆಂದು ಹೇಳುತ್ತಿದ್ದೇನೆ ಎನ್ನುತ್ತ ಆ ಶಿವೋಹಂಭಾವವನ್ನು ತಿರಸ್ಕರಿಸಿ-ಶಿವದಾಸೋಹಂಭಾವವನ್ನು ಸಮರ್ಥಿಸಿಕೊಳ್ಳುತ್ತಿರುವರು. ಈ ದಾಸೋಹಂಭಾವಕ್ಕೆ ಚ್ಯುತಿಬಂದಾಗಲೆಲ್ಲ ಪಶ್ಚಾತ್ತಾಪಪಟ್ಟು-ಆ ದಾಸೋಹಂಭಾವಕ್ಕೇ ತಮ್ಮನ್ನು ಮರಳಿ ಮರಳಿ ಸಮರ್ಪಿಸಿಕೊಳ್ಳುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು