ಭಕ್ತನ ಭಕ್ತಸ್ಥಲ - ನಡೆ-ನುಡಿ
ನಡೆಯ ಕಂಡಾ, ನಂಬಿ: ನುಡಿಯಲ್ಲಾ ಉಪಚಾರ !
ಮಿಗಿಲೊಂದು ಮಾತು ಬಂದರೆ ಸೈರಿಸಲಾರೆನು;
ತುಯ್ಯಲಾದರೆ ಉಂಬೆ; ಹುಯ್ಯಲಾದರೆ ಓಡುವೆ!
ಆಳು ಬೇಡಿದಡೆ ಆಳ್ದನೇನನೀ[ಯ]ನಯ್ಯಾ?
ಆಳಾಗಿ ಹೊಕ್ಕು ಅರಸನಾಗಿ ನಡೆದರೆ,
ಆಳಿಗೊಂಡಿತ್ತೆನ್ನ ಕೂಡಲಸಂಗನ ಭಕ್ತಿ!
Transliteration Naḍeya kaṇḍā, nambi: Nuḍiyallā upacāra!
Migilondu mātu bandare sairisalārenu;
tuyyalādare umbe; huyyalādare ōḍuve!
Āḷu bēḍidaḍe āḷdanēnanī[ya]nayyā?
Āḷāgi hokku arasanāgi naḍedare,
āḷigoṇḍitenna kūḍalasaṅgana bhakti!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 I do not act with faith
You see:
My speech is all pretence;
A slander what crosses mine
Must make me cross...
The ready cake, I'm ready to eat:
Beating, I run!
What doesn't the Master give
If but his servant ask?
But if I enter as a slave
And bear myself as king,
Kūḍala Saṅga's piety
Makes me a laughing-stock !
Translated by: L M A Menezes, S M Angadi
Hindi Translation मैं सविश्वास आचरण नहीं करता
वचनों में उपचार भरा है !
एक बात अधिक हो, तो सह नहीं सकता ।
खीर हो, तो खाता हूँ शोर हो, तो भागता हूँ!
सेवक के माँगने पर स्वामी क्या नहीं देता?
सेवक सा प्रविष्ट होकर स्वामी व्यवहार करुँ,
तो कूडलसंगमदेव, मेरी भक्ति धिक्कार करेगी ॥
Translated by: Banakara K Gowdappa
Telugu Translation నడత చూచి నమ్మెద; నుడుల విని గౌరవింతు;
వేఱుమాట రాగ సైపలేను; తీపైన జుర్రెద;
గాటైన పాఱెద! భటుడు కోరిన ప్రభుడే మీయడయ్యా
భటుడనై చేరి ప్రభుడనై మెల్గ ఆర డిjైుపోవు సంగని భక్తి
Translated by: Dr. Badala Ramaiah
Tamil Translation நடையைக் கண்டு நம்பி சொல்லெலாம் நன்மதிப்பு,
மீறி ஒரு சொல் வரின் தாளேன்.
பாயசமெனின் உண்பேன், அல்லலெனின் ஓடுவேன்,
ஆள் வேண்டின் ஆள்பவன் எதனை ஈவா னையனே?
ஆளாகிப் புகுந்து அரசாகி ஒழுகுற,
மறுக்கப்பட்ட தென் கூடல சங்கனின் பக்தி.
Translated by: Smt. Kalyani Venkataraman, Chennai
Marathi Translation
भरोश्याचे आचरण कर वाणीत उपचार मात्र आहे.
कोणी निंदा केलेली सहन होत नाही.
सुख आले तर भोगतो, दुःख आले तर दूर पळतो.
सेवकाने मागितले तर मालक देणार नाही का?
सेवक होऊन, राजासारखा वागलो तर
भक्ती वंचना होईल कूडलसंगमदेवाची.
Translated by Shalini Sreeshaila Doddamani
ಶಬ್ದಾರ್ಥಗಳು ಆಳಿಗೊಂಡು = ತಿರಸ್ಕರಿಸು, ಧಿಕ್ಕರಿಸು; ತುಯ್ಯು = ; ಮಿಗೆ = ಹೆಚ್ಚು; ಹುಯ್ಯು = ; ಹೊಕ್ಕು = ಸೇರು;
ಕನ್ನಡ ವ್ಯಾಖ್ಯಾನ ನಾನು ನಂಬಿ ನಡೆಯುತ್ತಿಲ್ಲ-ಉಪಚಾರಕ್ಕಾಗಿ ಬರೀ ಮಾತನಾಡುತ್ತೇನೆ. ಶರಣರೇನಾದರೂ ನನ್ನ ನಡೆವಳಿಯನ್ನು ಕುರಿತು ವಿಮರ್ಶಾತ್ಮಕವಾಗಿ ಒಂದೇ ಒಂದು ಮಾತನ್ನು (ಹೆಚ್ಚಾಗಿ) ಆಡಿದರೂ ಸೈರಿಸಿ ಕೊಳ್ಳುತ್ತಿಲ್ಲ, ಹೊಗಳಿದರೆ ಬೀಗುತ್ತೇನೆ-ತೆಗಳಿದರೆ ಮುನಿದು ಆ ಜಾಗದಿಂದ ಕಾಲುಕೀಳುತ್ತೇನೆ-“ತುಯ್ಯಲಾದರುಂಬೆ ಹುಯ್ಯಲಾದರೋಡುವೆ” ಎಂಬ ಗಾದೆ ನನಗೆ ಸಮವಾಯಿತು. ಹಾಗೆ ಮಾಡದೆ-ಕೊನೆಮುಟ್ಟ ವಿನಯದಿಂದಲೇ ನಡೆದುಕೊಂಡರೆ-ಏನನ್ನೂ ಕೊರತೆ ಮಾಡದೆ ಶಿವನು ನಮಗೆಲ್ಲವನ್ನೂ ದಯಪಾಲಿಸುತ್ತಾನೆ. ಆದರೆ ಮನ್ನಣೆ ಸಿಗುವವರೆಗೆ ಅತಿವಿನಯವಾಗಿದ್ದು-ಪ್ರತಿಷ್ಠಿತನಾದೊಡನೆಯೇ ಧೂರ್ತತನ ತೋರುವುದು ಭಕ್ತಿಯ ಲಕ್ಷಣವಲ್ಲ-ಎನ್ನುತ್ತ ಬಸವಣ್ಣನವರು-ಶರಣರನ್ನು ಶಿವನೆಂದು ನಂಬಿ ಉದ್ದಕ್ಕೂ ವಿನಯದಿಂದ ಹಿಂಬಾಲಿಸಿದರೆ ಭಕ್ತಿಮಾರ್ಗ ಮಂಗಳಾಂತವಾಗುವುದು ಎಂದು ಸ್ವವಿಮರ್ಶೆ ಮಾಡಿಕೊಳ್ಳುತ್ತಲೆ ನಮಗೆಲ್ಲ ಬೋಧಿಸುತ್ತಿರುವರು.
ವಿ: ಈ ವಚನದಲ್ಲಿರುವ “ಆಳಾಗಿ ಹೊಕ್ಕು ಅರಸಾಗಿ ನಡೆದರೆ” ಎಂಬ ಬಸವಣ್ಣನವರ ಮಾತು ಬಿಜ್ಜಳನಿಗೂ ಅನ್ವಯಿಸುತ್ತದೆಂಬುದು ಕೇವಲ ಆಕಸ್ಮಿಕವಿರಲಾರದು. ಕ್ರಿ.ಶ. 1150-1163ರ ವರೆಗೆ ಕಲ್ಯಾಣದಲ್ಲಿ ಆಳಿದ ತ್ರೈಲೋಕ್ಯಮಲ್ಲ ನೂರ್ಮಡಿ (ಮುಮ್ಮಡಿ) ತೈಲನೆಂಬ ಚಾಳುಕ್ಯ ರಾಜನನ್ನು-ಅವನ ಸೇನಾಧಿಪತಿಯಾಗಿದ್ದ ಬಿಜ್ಜಳನು ಸಿಂಹಾಸನದಿಂದಿಳಿಸಿ ಅವನೂ ಅವನ ಮಕ್ಕಳು ಕ್ರಿ.ಶ. 1183ರ ವರೆಗೆ ಚಾಳುಕ್ಯ ರಾಜ್ಯವನ್ನು ಅಳಿದರು. ಆ ಬಿಜ್ಜಳನು ರಾಜನಾಗಿದ್ದ ಅವಧಿಯಲ್ಲೇ ಬಸವಣ್ಣನವರು ಅವನ ಭಂಡಾರಿಯಾಗಿ ಕಲ್ಯಾಣದಲ್ಲಿದ್ದುದನ್ನು ಇಲ್ಲಿ ನೆನೆಯಬೇಕು.(ತುಯ್ಯಲು : ಪಾಯಸ, ಹುಯ್ಯಲು : ಗಲಭೆ, ಆಳ್ದ : ರಾಜ, ಆಳಿಗೊಂಡಿತ್ತು : ಘಾಸಿಪಡಿಸಿತ್ತು).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು