ಭಕ್ತನ ಭಕ್ತಸ್ಥಲ - ಭಕ್ತಿಮಾರ್ಗ
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ!
ಕುಂದ ಹೆಚ್ಚ ನುಡಿವೆ.
ಒಂದು ಮಾತಿನ ಗೆಲ್ಲ-ಸೋಲಕ್ಕೆ ಹಿಡಿದು ಹೋರುವೆ:
ಕೂಡಲಸಂಗನ ಶರಣರೆನ್ನಾಳ್ದರೆಂಬೆ!
Transliteration Manakke nācada vacana, vacanakke nācada mana!
Kunda hecca nuḍive.
Ondu mātina gella-sōlakke hiḍidu hōruve:
Kūḍalasaṅgana śaraṇara ennāḷdarembe!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Words not ashamed of mind.
Mind not ashamed of words!
I chatter about faults;
I fight for victory of defeat
Of a single subject.
And yet I claim
Kūḍala Saṅga's Śaraṇās
To be my masters !
Translated by: L M A Menezes, S M Angadi
Hindi Translation मन से न लजानेवाला वचन;
वचन से न लजानेवाला मन,
तृटियाँ-अधिक बोलता हूँ
एक बात की जीत की दृढ़ता के लिए लडता हूँ;
कूडलसंग के शरणों को शासक मानता हूँ ॥
Translated by: Banakara K Gowdappa
Telugu Translation మనసు కెగ్గులేని మాట; మాటకెగ్గువడని మనసు;
హెచ్చు తగ్గులు పలికెద; శరణులే నా ఏలికలని
ఒక్కమాటలో గెల్తుటో సోలుటో పట్టిపోరెద.
Translated by: Dr. Badala Ramaiah
Tamil Translation மனத்திற்கு நாணாசொல், சொல்லிற்கு நாணா மனம்,
குறைத்துக் கூட்டிப் பேசுவேன்,
ஒரு சொல்லின் வெற்றிக்குப் பிடித்துப் போரிடுவேன்,
கூடல சங்கனி னடியார் எனை ஆட்கொண்டனரென்பேன்.
Translated by: Smt. Kalyani Venkataraman, Chennai
Marathi Translation
मनी जे असेल, तेज मी बोलेन
वाणी जैसी मन, असे माझे
दिसताचि दोष, दोषच म्हणेन
गुणच म्हणीन, गुणालागी
कूडलसंगमदेवा ! वचनाला जागेन
चरणी लागेन, शरणांच्या
अर्थ - जे माझ्या मनात आहे तेच माझ्या तोंडून बाहेर पडले. त्याचप्रमाणे जे माझ्या तोंडून बाहेर येईल तेंच माझ्या मनात असेल परिस्थितीप्रमाणे किंवा अन्य लालसेसाठी त्यात कसलाही बदल करणार नाही म्हणून दोष दिसता त्यास दोषच म्हणेन व उत्तम गुणाला उत्तमच म्हणेन. अर्थात चांगले, व वाईटाला वाईटच म्हणेन. स्पष्ट वक्तेपणात मला मुळीच भीती किंवा संकोच वाटत नाही. यात मी कसलाही जुजबीपणा दाखविणार नाही. यासच मी माझी परीक्षा किंवा कसोटी समजतो. या गोष्टीना मी शेवटपर्यंत जागेन. याची साक्ष म्हणून सांगतो की माझ्या कूडलसंगमदेवाचे (परशिवाचे) शरण हे माझे स्वामी आहेत.
Translated by Rajendra Jirobe, Published by V B Patil, Hirabaug, Chembur, Mumbai, 1983
मन तशी वाणी, वाणी तसे मन नाही.
कधी कमी, कधी जास्त बोलतो.
एक शब्द जिंकण्यासाठी मी खूप संघर्ष करतो.
लाज सोडून कूडलसंगाचे शरण माझे स्वामी म्हणतो.
Translated by Shalini Sreeshaila Doddamani
ಶಬ್ದಾರ್ಥಗಳು ಕುಂದು = ಬಾಡು; ಗೆಲ್ಲ = ಗೆಲುವು; ಹೋರುವೆ = ;
ಕನ್ನಡ ವ್ಯಾಖ್ಯಾನ ನನ್ನ ಮನಸ್ಸಿಗೂ ಮಾತಿಗೂ ತಾಳಮೇಳವಿಲ್ಲದಿರುವುದು ಲಜ್ಜಾಸ್ಪದ. ಮನಸ್ಸಿನಲ್ಲಿರುವುದನ್ನು ಮಾತು ಮುಚ್ಚಿಡುತ್ತದೆ-ಅದಕ್ಕೆ ಮಾತು ನಾಚಿಕೆಪಡಬೇಕು. ಮಾತಿನೊಡನೆ-ಅದು ಉದಾತ್ತವಾಗಿದ್ದಾಗಲೂ-ಮನಸ್ಸು ಸಹಕರಿಸುವುದಿಲ್ಲ-ಅದಕ್ಕೆ ಮನಸ್ಸು ನಾಚಿಕೆಪಡಬೇಕು. ಹೀಗೆ ನನ್ನ ಮಾತು-ಮನಸ್ಸುಗಳೆರಡೂ ಎಗ್ಗುಸಿಗ್ಗಿಲ್ಲದೆ ಸ್ವಚ್ಛಂದವಾಗಿರುವವು. ಆದರೂ ನಾನು ಶಿವಶರಣರಾಡಿದ ಯಾವುದಾದರೂಂದೊಂದು ಮಾತನ್ನು ಹಿಡಿದು-ಇದು ಕೊರತೆಯಾಯಿತು, ಇದು ಅತಿಯಾಯಿತು ಎಂದು ಖಂಡಿಸುತ್ತ ಅವರೊಡನೆ ವಾದ ಮಾಡಿ-ನಾನು ಗೆಲಬೇಕು, ಅವರು ಸೋಲಬೇಕು ಎಂದು ಒಳಗೊಳಗೇ ಆಕ್ರೋಶ ತಾಳುತ್ತೇನೆ-ಈ ನಡುವೆಯೇ-ಶರಣರು ನನಗೆ ಒಡೆಯರು, ನಾನವರ ಗುಲಾಮ ಎಂದು ನಾಚಿಕೆಯಿಲ್ಲದೆ ಘೋಷಣೆಗಳನ್ನು ಕೂಗುತ್ತೇನೆ-ಎಂದು ಬಸವಣ್ಣನವರು ತಮಗೆ ತಾವೇ ಜುಗುಪ್ಸೆ ಪಡುತ್ತಿರುವರು.
ರಾಜಕಾರಣಿಗಳಾದವರು ದೀನದಲಿತರ ಉದ್ಧಾರಕರಂತೆ, ಧರ್ಮದ ರಕ್ಷಕರಂತೆ, ನಿಸ್ಪೃಹರಂತೆ ನಿರ್ವಂಚಕರಂತೆ ಮಾತನಾಡಿ ತದ್ವಿರುದ್ಧವಾಗಿ ನಡೆಯುವುದೆಂದರೆ-ಅವರಿಗೆಂದಿಗೂ ನಾಚಿಕೆಯಾಗುವುದಿಲ್ಲ-ಬದಲಾಗಿ ತಾವು ಮಹಾವಿಚಕ್ಷಣರೆಂದು ಬೀಗುವರು. ಬಸವಣ್ಣನವರಾದರೋ ರಾಜಕಾರಣದಲ್ಲಿದ್ದೂ ರಾಜಕಾರಣಿಯಾಗದೆ-ತಮ್ಮನ್ನು ತಾವು ವಿಮರ್ಶಿಸಿಕೊಳ್ಳುತ್ತ ತಿದ್ದಿಕೊಳ್ಳುತ್ತ ಮಹಾನುಭಾವರಾದರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು