ಇಲ್ಲವೆಯ ಮೇಲೆ ಕಂಚೊಡೆದಂತೆ, ಬಡ ಮನವೆನ್ನ ಕಾಡಿತ್ತಯ್ಯಾ;
ಮತಿಯಿಲ್ಲದ ಮರುಳ ನಾನಯ್ಯಾ; ಭಕ್ತಿಯಿಲ್ಲದ ಬಡವ ನಾನು;
ನಿಮ್ಮ ನೆನಹವಿಲ್ಲದೆ ನಿರ್ಭಾಗ್ಯನಾದೆ,
ಎನಗೆ ನೀ ಕರುಣಿಸಾ ಕೂಡಲಸಂಗಮದೇವಾ!
Transliteration Illaveya mēle kan̄coḍedante, baḍa manavenna kāḍittayyā;
matiyillada maruḷa nānayyā; bhaktiyillada baḍava nānu;
nim'ma nenahavillade nirbhāgyanāde,
enage nī karuṇisā kūḍalasaṅgamadēvā!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 As a plate that's broken to bits
Just when I've nought of mine,
My beggared mind plagues me...
O Lord, a witless fool am I;
And impious mendicant am I!
Heedless of Thee,
Helpless have I become.
Have mercy on me, O Lord
Kūḍala Saṅgama !
Translated by: L M A Menezes, S M Angadi
Hindi Translation अभाव में थाली टूटने के समान
मेरा दुर्बल मन सताता है ।
मतिहीन पागल हूँ मैं
भक्तिहीन दीन हूँ मैं
तव स्मरण के बिना मैं अभागा बना,
मुझ पर दया करो कूडलसंगमदेव ॥
Translated by: Banakara K Gowdappa
Telugu Translation లేని వేళ ఉన్న కుండయు పగిలినట్లు;
పేద మనస్సు నన్ను బాధించునయ్యా;
బుద్ధిలేని మూర్ఖుడనయ్యా,
భక్తి లేని బడుగునయ్యా:
నిన్ను తలవలేక నిర్భాగ్యుడై పోతి
నన్ను కరుణింపుమో కూడల సంగమదేవా!
Translated by: Dr. Badala Ramaiah
Tamil Translation வறுமையிலே உண்கலனுடைந்தது போல
ஏழைமனமெனை வாட்டியதையனே,
மதியற்ற அறிவிலி நான் ஐயனே,
பக்தியற்ற ஏழை நான் ஐயனே,
உம்மை நினையாத பேறற்றோன் யான்,
எனக்கு நீ அருள்வாய் கூடல சங்கம தேவனே.
Translated by: Smt. Kalyani Venkataraman, Chennai
Marathi Translation
दारिद्र्यात लाभले ते भांडे भंगल्यापरि गरीब मन माझे त्रासविते.
मतीविना वेडा मी, भक्तीविना गरीब मी,
तुमच्या स्मरणाविना निर्भाग्य झालो.
माझ्यावर कृपा करावी कूडलसगमदेवा
Translated by Shalini Sreeshaila Doddamani
ಶಬ್ದಾರ್ಥಗಳು ಇಲ್ಲವೆಯ = ; ನಿರ್ಭಾಗ್ಯ = ಭಾಗ್ಯ ಇಲ್ಲದವನು; ನೆನಪು = ಸ್ಮರಣೆ; ಮತಿ = ಬುದ್ದಿ; ಮರುಳೆ = ;
ಕನ್ನಡ ವ್ಯಾಖ್ಯಾನ ಮತಿಯಿಲ್ಲದ ಮರುಳ ನಾನು ಭಕ್ತಿಯಿಲ್ಲದ ದುರ್ಬಲ. ಮೇಲಾಗಿ ನಿಮ್ಮನ್ನು ನೆನೆಯದೆ ನಿರ್ಭಾಗ್ಯನಾಗಿದ್ದೇನೆ. ಇದ್ದೊಂದು ಮನಸ್ಸೂ ಇಬ್ಭಾಗವಾಗಿ-ದಟ್ಟದರಿದ್ರನ ಮನೆಯಲ್ಲಿದ್ದೊಂದು ಬಟ್ಟಲೂ ಒಡೆದು ಹೋಳಾದಂತಾಗಿದೆ. ನನ್ನ ಈ ಮನಸ್ಸನ್ನು ನಿನ್ನಲ್ಲಿ ಏಕಮಾಡಿಕೊಡು. ನಿನ್ನ ಧ್ಯಾನದ ಅಂಬಲಿಯನ್ನು ಅದರಲ್ಲಿ ನಾನು ಕುಡಿಯುವಂತಾಗಲಿ, ನನಗೆ ಭಕ್ತಿಯಾಗಲಿ-ಉಳಿದ ಭ್ರಮೆಗಳೆಲ್ಲಾ ತೊಲಗಲಿ-ಎಂದು ಬಸವಣ್ಣನವರು ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು