•  
  •  
  •  
  •  
Index   ವಚನ - 259    Search  
 
ಭಕ್ತನ ಭಕ್ತಸ್ಥಲ - ದುರ್ವ್ಯಸನ
ಅಶನ ಕುಂದದು, ವ್ಯಸನ ಮಾಣದು; ಆರತವಡಗದು, ಬೆವಹಾರವುಡುಗದು: ಮಜ್ಜನಕ್ಕೆರೆವೆನಯ್ಯಾ, ಕಾಯವಿಕಾರಿಯಾನು; ಮಜ್ಜನಕ್ಕೆರೆವೆನಯ್ಯಾ, ಜೀವವಿಕಾರಿಯಾನು; ಮಜ್ಜನಕ್ಕೆರೆವೆನಯ್ಯಾ: ಶರಣನಲ್ಲ, ಲಿಂಗೈಕ್ಯನಲ್ಲಾ! ಕೂಡಲಸಂಗಮದೇವರಲ್ಲಿ ಅಂತರಬೆಂತರ ನಾನಯ್ಯಾ!
Transliteration Aśana kundadu, vyasana māṇadu; āratavaḍagadu, bevahāravuḍugadu: Majjanakkerevenayyā, kāyavikāriyānu; majjanakkerevenayyā, jīvavikāriyānu; majjanakkerevenayyā: Śaraṇanalla, liṅgaikyanalla! Kūḍalasaṅgamadēvaralli antarabentara nānayyā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My hunger will not cease, Nor will my lust forsake; Attachments still pursue, And distractions of the world. I pour out the bath: My body still is foul. I pour out the bath: My soul is still defiled. I pour out the bath: I'm not a Śaraṇa , No Liṅgaikya I! In Lord Kūḍala Saṅgama, I'm but gnome, good sir ! Translated by: L M A Menezes, S M Angadi
Hindi Translation क्षुधा नहीं मिटती, चिंता नहीं छूटती, आशा नहीं मिटती, व्यवहार नहीं घटता, स्वामी, मैं अभिषेक करता हूँ,काय- विकारी हूँ अभिषेक करता हूँ, जीवविकारी हूँ-, अभिषेक करता हूँ,मैं न शरण हूँ, न लिंगैक्य, कूडलसंगमदेव में मैं पिशाच हूँ ॥ Translated by: Banakara K Gowdappa
Telugu Translation ఆర దీ యాకలి; అణగ దీ యార్తి ; తీరదీ వ్యధ, తేలదీ వ్యవహారము; మజ్జనమొనరించు కాయవికారి నేను; మజ్జనమొనరించు జీవవికారి నేను; మజ్జనమొనరింతునయ్యా శరణుడను కాను లింగై క్యుడను కాను; సంగడు బట్టిన భూతమయ్యా నేను Translated by: Dr. Badala Ramaiah
Tamil Translation பசி குறையாது, அல்லல் விடாது, அவா விடாது, புலனின்பம் விடாது திருமஞ்சனம் செய்வேனையனே, உடல் விகற்பினன் யான், திருமஞ்சனம் செய்வேனையனே, மனவிகற்பினன் யான் திருமஞ்சனம் செய்வேனையனே, அடியானல்ல, இலிங்க ஒன்றியனன்று கூடல சங்கம தேவரிடத்திலே அந்தர பெந்தரமெனும் பூதகணம் யான் ஐயனே. Translated by: Smt. Kalyani Venkataraman, Chennai
Marathi Translation भूक मिटत नाही, चिंता सुटत नाही. आशा सुटत नाही, व्यवहार संपत नाही. अभिषेक करतो पण देह विकारी आहे. अभिषेक करतो पण मन जीव विकारी आहे. अभिषेक करतो पण शरण नाही, लिंगैक्य नाही. कूडलसंगमदेवाच्या दृष्टीने मी पिशाच्च आहे. Translated by Shalini Sreeshaila Doddamani
ಶಬ್ದಾರ್ಥಗಳು ಅಡಗು = ಮಾಂಸ; ಅಶನ = ಆಹಾರ; ಆರತ = ಆಶಾ, ತೃಷ್ಣೆ; ಕುಂದು = ಬಾಡು; ಬೆಂತರ = ದೆವ್ವ; ಬೆವಹಾರ = ವ್ಯವಹಾರ; ಮಜ್ಜನ = ಸ್ನಾನ; ಮಾಣು = ಮಾಡು; ವ್ಯಸನ = ಚಿಂತೆ;
ಕನ್ನಡ ವ್ಯಾಖ್ಯಾನ ಉಣ್ಣುವ ತಿನ್ನುವ ಆತುರ ಕಡಿಮೆಯಾಗಲಿಲ್ಲ-ಕಾಯವಿಕಾರಿ ನಾನು, ದುಶ್ಚಟಗಳನ್ನು ಬಿಡಲಿಲ್ಲ-ಮನೋವಿಕಾರಿ ನಾನು, ಕಾಮಕ್ರೋಧ ತಗ್ಗಲಿಲ್ಲ ಜೀವವಿಕಾರಿ ನಾನು. ಆದರೂ ದೇವರಿಗೆ ಅಭಿಷೇಕ ಮಾಡಿ ಪೂಜಿಸುತ್ತಿರುವೆನೆಂಬುದೊಂದು ವಿಪರ್ಯಾಸ. ಹೀಗೆ ತನ್ನ ತನು-ಮನ-ಜೀವವಿಕಾರಗಳನ್ನೇ ತೊಳೆದು ಕಳೆಯಲಾರದವನು ದೇವರನ್ನೇ ತೊಳೆದು ಅಲಂಕಾರಮಾಡು(ಪೂಜೆಮಾಡು)ತ್ತಾನೆಂದರೆ ವಿಪರ್ಯಾಸವಲ್ಲದೆ ಮತ್ತೇನು ? ಎಂದು ಬಸವಣ್ಣನವರು ತಮ್ಮ ದೈನಂದಿನ ಆಶನ-ವ್ಯಸನ ವೈಪರೀತ್ಯಗಳು ಹೇಗೆ ತಮ್ಮನ್ನು ಅತ್ತ ಶರಣನಾಗಲೂ ಬಿಡದೆ,ಇತ್ತ ಲಿಂಗೈಕ್ಯನಾಗಲೂ ಬಿಡದೆ ಅಂತರಪಿಶಾಚಿಯನ್ನಾಗಿ ಮಾಡಿವೆಯೆಂದು ಪರಿತಪಿಸುತ್ತಿರುವರು. ಒಬ್ಬನು ಶರಣನಾದರೆ ಮನಃಪೂರ್ವಕವಾಗಿ ಮಜ್ಜನಕ್ಕೆರೆದು ಪೂಜಾದಿಮಾರ್ಗಕ್ರಿಯೆಗಳಲ್ಲಿ ತೊಡಗಿರುವನು. ಲಿಂಗೈಕ್ಯನಾದರೆ ಪೂಜಾದಿಕ್ರಿಯೆಗಳನ್ನು ಮೀರಿ ಅತೀತಸ್ಥಿತಿಯಲ್ಲಿರುವನು. ಆದರೆ ವಿಕಾರವಶಗತನಾದವನು ಅತ್ತ ಪೂಜೆ ಮಾಡಿದಂತೆಯೂ ಆಗದೆ, ಇತ್ತ ಪೂಜೆಯನ್ನು ಮೀರಿದಂತೆಯೂ ಆಗದೆ-ಎಲ್ಲವೂ ಔಪಚಾರಿಕವಾಗಿ ಆರ್ಥಹೀನವಾಗಿ ಅಂತರಬೆಂತರವಾಗುವುದೆಂಬುದರ್ಥ. ವಿ : ಅಂತರಬೆಂತರ : ಇತ್ತ ಬದುಕಿ ಮನುಷ್ಯನೂ ಆಗದೆ, ಅತ್ತ ಸತ್ತುಪರಲೋಕ ವಾಸಿಯೂ ಆಗದೆ ಇರುವ ಭೂತಪ್ರೇತ. ಆರತವೆಂದರೆ ಕಾಮ, ನೋಡಿ ವಚನ 132. ಲಿಂಗೈಕ್ಯನೆಂದರೆ ಜೀವನ್ಮುಕ್ತ, ನೋಡಿ ವಚನ 894, ಮತ್ತು ಶಿ.ಶಿ.ಬಸವನಾಳರ ಸಂಪಾದನೆಯ 838 ನೇ ವಚನ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು