ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ತನು ಹಾಳಾಯಿತ್ತಯ್ಯಾ!
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಮನ ಹಾಳಾಯಿತ್ತಯ್ಯಾ!
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಕರ್ಮಛೇದನವಾಯಿತ್ತು!
ನಿಮ್ಮವರು ಹೇಳಿ ಅಡಿಗಡಿಗೆ ಭಕ್ತಿಯೆಂಬ ಒಡವೆಯ
ದಿಟಮಾಡಿ ತೋರಿದರು ಕಾಣಾ, ಕೂಡಲಸಂಗಮದೇವಾ.
Transliteration Ayyā, nim'ma anubhāvadinda enna tanu hāḷāyittayyā!
Ayyā, nim'ma anubhāvadinda enna mana hāḷāyittayyā!
Ayyā, nim'ma anubhāvadinda enna karma chēdanavāyittu!
Nim'mavaru aḍigaḍige hēḷi bhaktiyemba oḍaveya
diṭa māḍi tōridaru kāṇā, kūḍalasaṅgamadēvā.
Manuscript
English Translation 2 Through experiencing Thee, O Lord,
My body is undone;
Through experiencing Thee, O Lord,
My mind has ceased to be;
Through experiencing Thee, O Lord,
My karma's broke to bits!
Thine own, instructing me at every step,
Have proved me that the thing we call
Devotion, is a truth:
That's so, Kūḍala Saṅgama Lord!
Translated by: L M A Menezes, S M Angadi
Hindi Translation स्वामी, तव अनुभाव से मेरा तन नष्ट हुआ;
स्वामी, तव अनुभाव से मेरा मन नष्ट हुआ;
स्वामी, तव अनुभाव से मेरा कर्म नष्ट हुआ;
भवदीयों ने बारबार कहकर भक्ति-संपदा
सिद्ध कर दिखाई कूडलसंगमदेव ॥
Translated by: Banakara K Gowdappa
Telugu Translation అయ్యా, నీ యనుభావమున
నా తనువు పాడై పోయెనయ్యా
అయ్యా; నీ యనుభావమున
నా మనసు పాడై పోయెనయ్యా
అయ్యా, నీ యనుభావమున
నా కర్మ తెగిపోయెనయ్యా!
అడుగడుగున నీ వారు భక్తియను
సొమ్మును చెప్పి; నిజము చేసి
చూపించిరయ్యా కూడల సంగయ్యా!
Translated by: Dr. Badala Ramaiah
Tamil Translation ஐயனே, உம்மை உணர்ந்து என் உடல் அழிந்தது
ஐயனே உம்மை உணர்ந்து என் மனம் ஒடுங்கியது
ஐயனே உம்மை உணர்ந்து என் வினை துண்டிக்கப்
பட்டது. உம்மவர் அடிக்கடி பக்தி எனும் அணிகலனைப்
பற்றிக் கூறி உண்மையை உணர்த்தினர் காணாய்
கூடல சங்கமதேவனே.
Translated by: Smt. Kalyani Venkataraman, Chennai
Marathi Translation
देवा, तुमच्या अनुभावाने
माझी तनु नष्ट झाली देवा.
देवा, तुमच्या अनुभावाने
माझे मन नष्ट झाले देवा.
देवा, तुमच्या अनुभावाने
माझे कर्म नष्ट झाले देवा.
तुमच्या शरणांनी पावला पावलाला
भक्तीतील सत्यता प्रत्यक्ष दाखवून दिली पहा
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ; ಒಡವೆ = ; ಛೇದನ = ; ತನು = ; ದಿಟ = ;
ಕನ್ನಡ ವ್ಯಾಖ್ಯಾನ ಶಿವಶರಣರೊಡನೆ ಶಿವನನ್ನು ಕುರಿತಂತೆಮಾಡುವ ಭಕ್ತನ ಸಲ್ಲಾಪವೇ ಶಿವಾನುಭಾವ. ಈ ಶಿವಾನುಭಾವದಿಂದ ತಮ್ಮ ತನುವಿನ ತಾಮಸ ಗುಣ, ಮನದ ಲಾಲಸ ಗುಣ ಪರಿಹಾರವಾಯಿತು, ಜನ್ಮಾಂತರದಲ್ಲಿ ಮಾಡಿದ ಕರ್ಮವೆಲ್ಲಾ ತೊಳೆದುಹೋಯಿತು ಎಂದು ಬಸವಣ್ಣನವರು ಕೃತಕೃತ್ಯಭಾವವನ್ನು ವ್ಯಕ್ತಪಡಿಸುತ್ತಿರುವರು.
ಈ ವಚನದ ಪ್ರಕಾರವಾಗಿಯೇ-ಒಂದು ಕಾಲಕ್ಕೆ ಬಸವನಣ್ಣನವರಿಗೆ ಭಕ್ತಿಯೆಂಬುದು ಕೈಗೂಡದ ಒಂದು ಕನಸಾಗಿತ್ತು. ಅವರ ಆ ಹಂಬಲವನ್ನು ಶಿವಶರಣರು ತಮ್ಮ ಉಪದೇಶ ದಿಗ್ದರ್ಶನಗಳ ಮೂಲಕ ಈಡೇರಿಸಿಕೊಳ್ಳಲು ಅನುವು ಮಾಡಿಕೊಟ್ಟರು-ಅಲಂಕಾರಕ್ಕೆ ಆಶೆಪಡುವ ಹೆಣ್ಣಿಗೆ ಚಿನ್ನಾಭರಣವನ್ನು ಮಾಡಿಸಿಕೊಟ್ಟಂತೆ : “ನಿಮ್ಮವರು ಅಡಿಗಡಿಗೆ ಹೇಳಿ ಭಕ್ತಿಯೆಂಬ ಒಡವೆಯನ್ನು ದಿಟ ಮಾಡಿ ತೊರಿದರು”ಎಂಬ ಮಾತಿನ ಅಭಿಪ್ರಾಯ ತೀರ ಅಪುರೂಪವಾದ ಅತ್ತೆಸೊಸೆಯರ ಮಧುರಸಂಬಂಧವಾಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು