ಅಭ್ಯಾಸವೆನ್ನ ವರ್ತಿಸಿತ್ತಯ್ಯಾ:
ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ?
ಆ ನಿಮ್ಮ ಮನಬೊಗುವನ್ನಕ್ಕ ನೀವೆನ್ನ ಮನಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ,
ಕೂಡಲಸಂಗಮದೇವಾ.
Transliteration Abhyāsavenna vartisittayya:
Bhakti sādhyavāgadu, nānēvenayyā?
Ā nim'ma mana boguvannakka nīvenna manaboguvannakka
kāyaguṇaṅgaḷa kaḷedavarige śaraṇembe,
kūḍalasaṅgamadēvā.
Manuscript
English Translation 2 Habit has clung to me:
Devotion has become impossible-
What shall I do?
Until I penetrate Thy heart
And Thou canst enter mine,
I say all hail! to them
Who've shed their corporal traits,
O, Kūḍala Saṅgama Lord!
Translated by: L M A Menezes, S M Angadi
Hindi Translation अभ्यास ने मुझे आवृत किया है,
भक्ति साद्य नहीं होति क्या करूँ?
तव मन में मेरा प्रवेश होने तक
मेरे मन में तव प्रवेश होने तक
काय-गुण-मुक्त व्याक्ति की वंदना करता हूँ, कूडलसंगमदेव॥
Translated by: Banakara K Gowdappa
Telugu Translation అభ్యాస మలవడెగాని భక్తి
నాకు సాధ్యము గాదయ్యా,
నేనేమి సేతు నీ యెద దూరనందాక
నా మదికి నీవు వచ్చునందాక; కాయ
గుణము లుడిగిన వానికే శరణందు దేవా!
Translated by: Dr. Badala Ramaiah
Tamil Translation கற்றகல்வி என்னை சுழலச் செய்தது ஐயனே
பக்தி எங்ஙனம் சாத்தியமாகும்?
நான் உம் மனத்தில் புகும் வரையில்?
நீ என் மனத்தில் புகும் வரையில்
உடல் இயல்புகள் அகன்றவருக்கே
தஞ்சமென்பேன் கூடல சங்கமதேவனே.
Translated by: Smt. Kalyani Venkataraman, Chennai
Marathi Translation
व्यसनाने ग्रासलो आहे, भक्ती साध्य
होत नाही, मी काय करु देवा ?
मी तुमच्या मनात प्रविष्ट होत नाही.
तुम्ही माझ्या मनात प्रविष्ट होत नाही.
तनविकार नष्ट केलेल्यांना वंदन करतो
कूडलसंमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಎಲೆ ಶಿವನೇ, ಎಷ್ಟು ಅಭ್ಯಾಸ ಮಾಡಿದರೂ-ನನಗೆ ಭಕ್ತಿ ಸಾಧ್ಯವಾಗುತ್ತಿಲ್ಲ-ನಾನು ನಿನ್ನೊಳಗಾಗಬೇಕು, ನೀನು ನನ್ನೊಳಗಾಗಬೇಕು-ಅಲ್ಲಿಯವರೆಗೆ ಭಕ್ತಿ ಸಾಧ್ಯವಾಗುವುದಿಲ್ಲ-ನಾನೇನು ಮಾಡಲಿ? ನನಗೂ ನಿನಗೂ ಮಧ್ಯಂತರದಲ್ಲಿ ಕೋಟೆಗೋಡೆಯಾಗಿರುವ ದೇಹಗುಣಗಳನ್ನು ಕಳೆದುಕೊಳ್ಳಬೇಕು-ಅದು ನನಗೆ ಸಾಧ್ಯವಾಗುತ್ತಿಲ್ಲ. ಆ ದೇಹಗುಣಗಳನ್ನೆಲ್ಲಾ ಕಳೆದುಕೊಂಡು ಶಿವನೊಳಗೆ ತಾವು, ತಮ್ಮೊಳಗೆ ಶಿವನಾಗಿರುವ ಶರಣರಿಗೆ ನಾನು ದಾಸನಾಗಿ ಅವರ ಸೇವೆಯಲ್ಲಿರುತ್ತೇನೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು