ಮಾಹೇಶ್ವರನ ಭಕ್ತಸ್ಥಲ - ನಂಟುಭಕ್ತಿ
ಅಣ್ಣ, ತಮ್ಮ, ಹೆತ್ತಣ್ಣ ಗೋತ್ರವಾದರೇನು,
ಲಿಂಗಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯಾ.
ನಂಟು-ಭಕ್ತಿ ನಾಯಕನರಕ, ಕೂಡಲಸಂಗಮದೇವಾ!
Transliteration Aṇṇa, tam'ma, hettaṇṇa gōtravādarēnu,
liṅgasāhityavilladavara ennavarennenayyā.
Naṇṭu-bhakti nāyakanaraka, kūḍalasaṅgamadēvā!
Manuscript
English Translation 2 What if they be
My elder or my younger brother,
My father or a member of my clan?
Those who have no affinity with Liṅga I
Refuse to own as mine.
O Kūḍala Saṅgama Lord,
This love of one's relations is arch-hell!
Translated by: L M A Menezes, S M Angadi
Hindi Translation अग्रज हो या अनुज, पिता हो या सगोत्री
जो लिंग संबंधी नहीं उन्हें अपना नहीं कहूँगा,
बंधु-भक्ति नायक नरक है कूडलसंगमदेव ॥
Translated by: Banakara K Gowdappa
Telugu Translation అన్న తమ్ముడు తండ్రి సగోత్రుడైన నేమి?
శివ సాహిత్యము లేనివారిని నా వారని తలచలేను
బంధు ప్రీతి పరమ నరకమురా సంగమ దేవా!
Translated by: Dr. Badala Ramaiah
Tamil Translation அண்ணன், தம்பி, தந்தை, கோத்திரம் ஆயினென்ன?
இலிங்க பக்த ரல்லாதோரை என்னவரென்னேன்
அவரோடு தொடர்பு கீழான நரகம் ஐயனே
கூடல சங்கம தேவனே.
Translated by: Smt. Kalyani Venkataraman, Chennai
Marathi Translation
अग्रज, अनुज, जन्मदाते, सगोत्री कोणीही असो
लिंगधारी नसणाऱ्यांना माझे म्हणात नाही देवा.
नाते संबंधी भक्ती घोर नरक कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹಿಂದಿನ ವಚನದ ವ್ಯಾಖ್ಯಾನದ ಹಿನ್ನಲೆಯಲ್ಲಿ ಈ ವಚನದ ಅರ್ಥ ಸ್ಪಷ್ಟವಾಗಿಯೇ ಇದೆ,
ವಿ : ಬಸವಣ್ಣನವರ ತಂದೆ ಮಾದಿರಾಜ ಸಾಂಖ್ಯಾಯನ ಗೋತ್ರದವರು (ನೋಡಿ ಸಿಂಗಿರಾಜಪುರಾಣ 5-12) ಬಸವಣ್ಣನವರಿಗೊಬ್ಬ ಅಣ್ಣನಿದ್ದನೆಂದು ಅರ್ಜುನವಾಡದ ಶಾಸನದಿಂದ ಊಹಿಸುವುದು ಸಾಧ್ಯವಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು