ಮಾಹೇಶ್ವರನ ಭಕ್ತಸ್ಥಲ - ಬ್ರಾಹ್ಮಣಿಕೆ
ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ
ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ!
ಹಾರುವೆನಯ್ಯಾ ಭಕ್ತರ ಬರವ ಗುಡಿಗಟ್ಟಿ,
ಹಾರುವೆನಯ್ಯಾ ಶರಣರ ಬರವ ಗುಡಿಗಟ್ಟಿ,
ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ,
ಅಶುದ್ಧನ ಶುದ್ಧನ ಮಾಡಿದನಾಗಿ!
Transliteration Honnu heṇṇu maṇṇemba karmada baleyalli siluki
vr̥thāya barudorehōha keḍuka hāruva nānalla!
Hāruvenayyā bhaktara barava guḍigaṭṭi,
hāruvenayyā śaraṇara barava guḍigaṭṭi,
kūḍalasaṅgamadēvanu viprakarmava biḍisi,
aśud'dhana śud'dhana māḍidanāgi!
Manuscript
English Translation 2 I am not a wastrel priest
Who, caught in Karma’s mesh
Woven of women, gold and land,
Will go in vain – a dried -up stream!
Hoisting a flag, I await
The bhaktas ' coming; I await,
Hoisting a flag;
Since Lord Kūḍala saṅgama
Has made me leave the sacrificer’ s life,
And from uncleanness made me clean.
Translated by: L M A Menezes, S M Angadi
Hindi Translation कामिनि, कांचन के कर्म-पाश में फँसकर
व्यर्थ निर्जल नदी में प्रविष्ट होनेवाला बुरा विप्र मैं नहीं हूँ ।
भक्तों की प्रतीक्षा करूँगा पताका पहराकर,
शरणों की प्रतीक्षा करूँगा पताका पहराकर,
कूडलसंगमदेव ने मुझे विप्र कर्म से मुक्त कर
अपवित्र को पवित्र जो बनाया ॥
Translated by: Banakara K Gowdappa
Telugu Translation కాంతా కాంచన భూములనెడి కర్మపుటురుల చిక్కి వృథా
కడు దూర మేగు చెనటి బాపడ గానయ్యా
ఎగిరెదనయ్యా ధ్వజమెత్తి భక్తులు రాగ;
ఎగిరెదనయ్యా ధ్వజమె త్తి శరణులు రాగ;
విప్రకర్మను తొలచి నన్ను పవిత్రుని చేసెనయ్య మా సంగయ్య:
Translated by: Dr. Badala Ramaiah
Tamil Translation பொன், பெண், மண் எனும் கர்ம வலையில் சிக்கி
பயனற்றுப் போகும் கெட்ட வேதியன் நானல்ல
பக்தரின் வருகைக்குக் கொடிகட்டி மகிழ்வேனையனே
சரணரின் வருகைக்குக் கொடிகட்டி மகிழ்வேனையனே
கூடல சங்கமதேவனே. வேதியர் கர்மத்தை விடுவித்து
தூய்மையற்றோனை தூயோனாகச் செய்தானன்றோ.
Translated by: Smt. Kalyani Venkataraman, Chennai
Marathi Translation
कामिनी, कनक, भूमी यांच्या कर्म बंधनात अडकून.
व्यर्थ जीवन घालविणारा विचारहीन विप्र मी नाही!
विनम्र होतो देवा भक्ताच्या स्वागताने उत्साहित होऊन,
विनम्र होतो देवा शरणाच्या स्वागताने उत्साहित होऊन,
म्हणून कूडलसंगमदेवाने विप्रकर्मापासून
सोडवून अशुध्दाला शुध्द केले म्हणूनी !
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತಾವು ಹುಟ್ಟಿನಿಂದ ವಿಪ್ರರಾದರೂ ಕರ್ಮದಿಂದ ವಿಪ್ರರಲ್ಲವೆನ್ನುವರು ಬಸವಣ್ಣನವರು. ಕೂಡಲ ಸಂಗಮದೇವರು ತಮಗೆ ಲಿಂಗದೀಕ್ಷೆಯನ್ನು ಕೊಟ್ಟು- ಆ ವಿಪ್ರಕರ್ಮದಿಂದ ತಮ್ಮನ್ನು ಪಾರುಮಾಡಿದ್ದನ್ನು ಕೃತಜ್ಞತೆಯಿಂದ ನೆನೆಯುತ್ತ - ಹಿಂದೆ ಅಶುದ್ಧರಾಗಿದ್ದ ತಾವೀಗ ಶುದ್ಧರಾಗಿರುವುದಾಗಿ ಆನಂದವನ್ನೂ ವ್ಯಕ್ತಪಡಿಸುವರು.
ಮತ್ತೆಯೂ ಯಾರಾದರೂ ಅವರನ್ನು ಹಾರುವರೆಂದೇ ಕರೆದರೆ – ಅವರು - “ಹೌದು, ನಾನು ದಾನದತ್ತಿ ರೂಪದ ಹೊನ್ನು ಹೆಣ್ಣು ಮಣ್ಣಿಗೆ ಹಾತೊರೆಯುವ ಮತ್ತು ವ್ಯರ್ಥಜೀವನ ನಡೆಸುವ ಒಬ್ಬ ಕೆಟ್ಟ ಹಾರುವನಲ್ಲ. ಶಿವಭಕ್ತರು ಮತ್ತು ಶಿವಶರಣರು ನನ್ನ ಮನೆಗೆ ಬಂದಾರೇ, ನನ್ನನ್ನು ಉದ್ಧಾರ ಮಾಡಿಯಾರೇ ಎಂದು ಸದಾ ಅದೇ ಜ್ಞಾನವಾಗಿ ಹಾರೈಸುತ್ತಿರುವ ಒಳ್ಳೇ ಹಾರುವ ನಾನು” ಎಂದು ಸರಸಪೂರ್ವಕವಾಗಿಯೇ ಚೇಷ್ಟೆ ಮಾಡುವರು. ಬ್ರಹ್ಮವನ್ನು ಆಚರಿಸುವವನು ಬ್ರಾಹ್ಮಣ-ಎಂಬ ಸೂಕ್ತಿ ಬಸವಣ್ಣನವರ ಮಾತಿನ ಹಿನ್ನೆಲೆಯಾಗಿದೆ.
ವಿ : ಪಾರ್ ಎಂದರೆ ಕಾದುಕೊಂಡಿರು, ನಿರೀಕ್ಷಿಸು, ಎದುರು ನೋಡು(ಪಾರ್ ಸಮಯಾನ್ವೇಷಣೆ, ಕೇಶಿರಾಜ, ಧಾತು-595) ಎಂಬುದರ್ಥ. ಈ ಧಾತುವಿನಿಂದ ನಿಷ್ಪನ್ನವಾದುದು ಪಾರ್ವನ್>ಹಾರುವ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು