•  
  •  
  •  
  •  
Index   ವಚನ - 739    Search  
 
ಮಾಹೇಶ್ವರನ ಶರಣಸ್ಥಲ - ಆತ್ಮಶುದ್ಧಿ
ಅರಸನು ಮಂಚಕ್ಕೆ ಬರಿಸಿ, ಎನ್ನ ಬೆರಸಿದ ಬಳಿಕ ಆನಂಜುವಳೇ? ಆನು ಸಿರಿಯಕ್ಕನೇ: ಪರುಷ ಮುಟ್ಟಿದ ಬಳಿಕ ಲೋಹವೇ? ಕೂಡಲಸಂಗಮದೇವ ಎನ್ನನೊಲ್ಲದೊಡಾನು ಬದುಕುವೆನೆ?
Transliteration Arasanu man̄cakke barisi, enna berasida baḷika ānu an̄juvaḷē? Ānu siriyakkanē: Paruṣa muṭṭida baḷika lōhavē? Kūḍalasaṅgamadēva ennanolladoḍānu badukuvene?
Manuscript
English Translation 2 After the Lord has made me come Unto His bed and lain with me, Should I still fear? I am a woman all over gold: After the touch of the alchemic stone Would there be iron still? But if Lord Kūḍala Saṅgama Should spurn me, should I not die? Translated by: L M A Menezes, S M Angadi
Hindi Translation पलंग पर आने देकर मुझसे प्रभु के मिल जाने के पश्चात् क्यों मैं डरूँगी? अब मैं स्वर्णमहि हूँ । पारस स्पर्श के पश्चात् लोहा कहाँ? कूडलसंगमदेव की प्रेम पात्र न बनूँ तो मैं जीवित रहूँगी? Translated by: Banakara K Gowdappa
Tamil Translation மாகேசுவரனின் சரணத்தலம் அரசர் மஞ்சத்தில் ஏற்றி, என்னை ஏற்றபிறகு நான் அஞ்சுபவளோ? நான் திருவின் தமக்கைதான் பரிசிவேதி தீண்டியபின் உலோகமாகுமோ? கூடல சங்கமதேவன் என்னை விரும்பான் எனின் நான் உயிர் வாழ்வேனோ? Translated by: Smt. Kalyani Venkataraman, Chennai
Marathi Translation राजाने मंचावर बोलावून, माझ्यात समरस झाल्यावर मी का घाबरु ? मी मालकीण झाले. परिसस्पर्शानंतर लोखंड लोखंड राहिल का? कूडलसंगमदेवा, मला दूर केले तर जगू कसा ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ರಾಜನೇ ನನ್ನನ್ನು ಮಂಚವೇರಿಕೊಂಡು ಮುದ್ದಿಸಿದನೆಂದಮೇಲೆ-ನನಗಿನ್ನು ಅಂಜಿಕೆಯಿಲ್ಲ. ಉಂಡಾಡಿಗುಂಡರು ಕುಡುಕರು ಕಳ್ಳರು ತಲೆಗಡುಕರು ಇನ್ನು ನನ್ನನ್ನು ಮುಟ್ಟುವ ಧೈರ್ಯ ಮಾಡರು ಎಂದ ಒಬ್ಬ (ರಾಣಿಯಾದ) ಅನಾಥೆಯನ್ನು ಹೋಲುವರು ಬಸವಣ್ಣನವರು. ಶಿವಧರ್ಮಕ್ಕೆ ಬಂದ ಮೇಲೆ ಶಿವನೊಬ್ಬನೇ ಅವರ ಮನೋರಮಣನಾದ –ಅಲ್ಲಿಂದೀಚೆಗೆ -ಹಿಂದಿನ ವೈದಿಕ ಧರ್ಮದಲ್ಲಿದ್ದಾಗ ಕಾಡಿದ ಹತ್ತಾರು ಹೀನ ಕ್ರೂರಗಳ ಕಾಟ ತಪ್ಪಿತು, ಶರಣಸತಿ ಲಿಂಗಪತಿಯೆಂಬ ಮಾನವೂ ಉಳಿಯಿತು ! ಬಸವಣ್ಣನವರಂಥ ಶಿವನ ಅಂತಃಪುರದ ಹೆಣ್ಣುಗಳು ಆಶಿಸಲು ಇದಕ್ಕಿಂತಲೂ ಉತ್ತಮವಾದುದೇನಿದೆ. ಹೀಗೆ ಶರಣಸತಿಯಾದ ಬಸವಣ್ಣನವರು ಎಲ್ಲ ಅರ್ಥದಲ್ಲಿಯೂ ಸಿರಿಯಕ್ಕನೇ :

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು