ಮಾಹೇಶ್ವರನ ಶರಣಸ್ಥಲ - ಭಕ್ತಿಮಾರ್ಗ
ಸಿರಿಯಾಳನ ಮಗನ ಬಾಣಸವ ಮಾಡಿಸಿ ಉಣಲೊಲ್ಲದೆ ಕಾಡಿದೆ,
ಚೋಳನ ಮನೆಯಲ್ಲುಣಲೊಲ್ಲದೆ, ಚೆನ್ನನ ಮನೆಯಲುಂಡೆ:
ಒಬ್ಬರಿಗೊಂದು ಪರಿಯ ಮಾಡಿದೆ, ಕೂಡಲಸಂಗಮದೇವಾ!
Transliteration Siriyāḷana magana bāṇasava māḍisi uṇalollade kāḍide,
cōḷana maneluṇalollade, cennana maneluṇḍe:
Obbarigondu pariya māḍide, kūḍalasaṅgamadēvā!
Manuscript
English Translation 2 You, having made
Siriyāḷa turn his son to food,
Must tantalise him by not eating it;
You would not eat at Cola's, yet
Would eat at Cenna's house:
O Kūḍala Saṅgama Lord,
You have one for each!
Translated by: L M A Menezes, S M Angadi
Hindi Translation सिरियाळ के पुत्र को पकवाकर
उसे न खाकर सताया।
चोळ के घर में न खाकर,
चन्न के घर में खाया।
तुमने प्रत्येक से विभिन्न व्यवहार किया
कूडलसंगमदेव॥
Translated by: Banakara K Gowdappa
Telugu Translation సిరియాళుని కొడుకును వండిరచి తినక యేడ్పించితి
చోళుని విడిచి చెన్నుని యింట తింటివి;
ఒక్కొక్కని ఒక్కొక్క రీతి చూతువుదేవా !
Translated by: Dr. Badala Ramaiah
Tamil Translation சிறுத்தொண்டனின் மகனைச் சமைத்து
உண்ணலாகாது வாட்டினாய்
சோழனின் இல்லத்தில் உண்ணலாகாது
சென்னனின் இல்லத்தில் உண்டனை
ஒவ்வொருவருக்கும் ஒவ்வொரு முறையைச்
செய்தாய் கூடல சங்கமதேவனே.
Translated by: Smt. Kalyani Venkataraman, Chennai
Marathi Translation
सिरियाळाच्या मुलाचे मांस शिजविले. पण न जेवता सत्त्वपरिक्षा पाहिली.
चोळाच्या घरी जेवला नाही, चन्नय्याच्या घरी जेवला.
प्रत्येकाबरोबर वेगवेगळे वागला कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭಕ್ತರಲ್ಲಿ ಶಿವನೇಕೆ ಒಬ್ಬರಿಗೊಂದು ಪರಿಯೆಂಬುದು ಬಸವಣ್ಣನವರು ಎತ್ತಿರುವ ಅಕ್ಕರೆಯ ಆಕ್ಷೇಪಣೆ : ರಾಜಾನ್ನ ರಸಾಯನಗಳನ್ನು ಬಡಿಸಿ ಉಣ್ಣೆಂದು ಬಗೆಬಗೆಯಾಗಿ ಬೇಡಿಕೊಂಡರೂ ಆ ಚೋಳನ ಮನೆಯಲ್ಲಿ ಒಂದಗುಳನ್ನೂ ಮುಟ್ಟಲಿಲ್ಲ. ಅವನ ಕುದುರೇಲಾಯದಲ್ಲಿ ಕಂಪಣದ ಕಾಯಕ ಮಾಡಿಕೊಂಡಿದ್ದ ಮಾದಾರ ಚೆನ್ನಯ್ಯನ ಉಣ್ಣುವ ಮಣ್ಣಿನ ಮುಚ್ಚಳದಲ್ಲಿ ಗಪ್ಪೆಂದು ಕೈಹಾಕಿದೆ. ಸಿರಿಯಾಳನ ಮನೆಗೆ ಹೋಗಿ ಅವನಿಗಿದ್ದ ಒಂದೇ ಒಂದು ಮಗುವಿನ ಮಾಂಸ ನನಗೆ ಬೇಕೆಂದು ಅಸುರದಿಂದ ಬೇಡಿದೆ, ಅಟ್ಟಿಟ್ಟರೆ-ಆಡಲ್ಪಟ್ಟ ಆ ಮಗನನ್ನೇ ಕರೆಯೆಂದು , ಮಕ್ಕಳಿಲ್ಲದ ಮನೆಯಲ್ಲಿ ಉಣ್ಣುವುದಿಲ್ಲವೆಂದು, ಬಂಜೆಸಂಸಾರವಿದೆಂದು –ಮೊದಲೇ ನೊಂದವರನ್ನು ಮತ್ತಷ್ಟು ನೋಯಿಸಿದೆ.
ಎಲೆ ಶಿವನೇ, ಹೀಗೇಕೆ ನೀನೆಂದು ಬಸವಣ್ಣನವರು ತಮ್ಮ ಅತಿನೆಚ್ಚಿನ ದೇವರ ಬಯಲಾಟವನ್ನು ಪ್ರಶ್ನಿಸುತ್ತಲೇ –ಆ ದೇವರು ಒಲಿಯುವುದು ರಾಜರಿಗಲ್ಲ ಶ್ರೀಮಂತರಿಗಲ್ಲ-ಚೆನ್ನಯ್ಯನಂಥ ದೀನದಲಿತರಿಗೆ-ಅದೂ ನಿರಾಯಾಸವಾಗಿ ಎಂಬುದನ್ನು ಆಕ್ಷೇಪಣೆಯ ಮೂಲಕವೇ ಅನುಲಕ್ಷಿಸುತ್ತಿರುವರು.
ಚೋಳನಿಗೆ ರಾಜತೇಜವಿದೆ, ಸಿರಿಯಾಳ ಶೆಟ್ಟಿಗೆ ಧನತೇಜವಿದೆ, ಮಾದಾರ ಚೆನ್ನಯ್ಯನಿಗಾದರೋ ಇರುವುದು ಆತ್ಮ ತೇಜವೊಂದೇ-ಅಂಥವರಿಗೆ ಆದ್ಯತೆ ಕೊಡುವನು ಶಿವನೆಂಬುದು ಈ ವಚನದ ನಿಗೂಢ ಇಂಗಿತ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು