ಮಾಹೇಶ್ವರನ ಐಕ್ಯಸ್ಥಲ - ಸಹಿಷ್ಣುತೆ
ಕಲಿಯ ಕೈಯ ಕೈದುವಿನಂತಿರಬೇಕು, ಅಯ್ಯಾ;
ಎಲುದೋರ ಸರಸವಾಡಿದರೆ ಸೈರಿಸಬೇಕಯ್ಯಾ.
ರಣದಲ್ಲಿ ತಲೆ ಹರಿದು ಅಟ್ಟೆ ನೆಲಕ್ಕೆ ಬಿದ್ದು
ಬೊಬ್ಬಿಡಲದಕ್ಕೆ ಒಲಿವ ಕೂಡಲಸಂಗಮದೇವ.
Transliteration Kaliya kaiya kaiduvinantirabēku, ayyā;
ēḷudōra sarasavāḍidare sairisabēkayyā.
Raṇadalli tale haridu aṭṭe nelakke biddu
bobbiḍaladakke oliva kūḍalasaṅgamadēva.
Manuscript
English Translation 2 One must be, Sir,
Even as a weapon in a warrior's hand:
If he plays pranks with it
Until the bones show out,
One needs must bear it, Sir,
Lord Kūḍala Saṅgama loves him
Who, in the field,
When, head torn off, his headless trunk
Drops on the ground, cries out!
Translated by: L M A Menezes, S M Angadi
Hindi Translation योद्धा के हाथ के शस्त्र सा रहना चाहिए
हड्डियों के दीखने तक विनोद करने पर भी
सह लेना चाहिए ।
रण में सिर कटने और रूंड गिरने पर
जो चिल्लाता है उससे कूडलसंगमदेव प्रसन्न होते ॥
Translated by: Banakara K Gowdappa
Tamil Translation வீரனின் கையிலுள்ள மறைந்துள்ள ஆயுத
மனைய இருக்க வேண்டும் ஐயனே
எலும்பு விளங்கக் கூறின் பொறுக்கவேணும் ஐயனே
களத்தில் தலைஅறுந்து நிலத்தில் வீழ்ந்து
கூக்குரலிடின் அதற்கு அருள்வான்
கூடல சங்கமதேவன்.
Translated by: Smt. Kalyani Venkataraman, Chennai
Marathi Translation
तळहाती प्राण, घेऊनिया लढे
वीर रणी पडे, आदेशार्थ
परी तो आदेश तया देता न ये
निर्णय घेता नये, कोणताही
स्वामीचिये हाती, सर्व अधिकार
निर्णय तो थोर, शेवटीचा
तन मन धन, सर्वस्व अर्पिण
वंचकत्व करीन, ऐसा नोहे
कूडलसंगमदेवा ! तूच माझा स्वामी
आज्ञेसी उणा, कैसा होय ?
अर्थ - रणांगणी वीर शिपाई तळहातात शिर घेऊन लढतात व प्रसंगी धारातिर्थीही पडतात. तशा निष्ठावंत वीरांना आदेश देण्याचा मात्र अधिकार नसतो. ते कसलाही निर्णय घेऊ शकत नाहीत. त्यांना स्वामीचीच (सेनापतीची) आज्ञा प्रमाण असते. हे कूडलसंगमदेवा! (परशिवा) अगदी त्याच प्रमाणे तुझ्या आज्ञेनुसार मी माझे मन व धन व प्रसंगी माझा प्राणही तुझ्यासाठी अर्पण करीन. त्यात कसलीही वंचना करणार नाही. तुझी प्रसन्नता ज्यात असते त्यातच मीही प्रसन्न असतो.
Translated by Rajendra Jirobe, Published by V B Patil, Hirabaug, Chembur, Mumbai, 1983
वीराच्या हातातील तलवार व्हावे देवा.
हाडे दिसेपर्यंत घायाळ केले तरी सहन करावे देवा.
रणांगणावर शिर तुटून जमिनीवर पडल्यावर विचलित न होता
प्रकट होतील कूडलसंगमदेव.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ಜೀವನವೊಂದು ಬರೀ ಹೂವಿನ ತೋಟವಲ್ಲ – ಅದು ಆಗಾಗ ರಣಾಂಣವಾಗುವುದೂ ಉಂಟು, ಅಲ್ಲಿ ಯಾವನು ಕಲಿತನದಿಂದ ಹೋರಾಡುವನೋ ಅವನಿಗೆ ಮಾತ್ರ ತೇಜಸ್ಸಿನಿಂದ ಬದುಕುವ ಹಕ್ಕುಂಟು .ಅವನು ಈ ಪ್ರಯತ್ನದಲ್ಲಿ ಸತ್ತರೂ ಅವನಿಗೆ ರಂಭೆ ಅಪ್ಸರೆಯರುಂಟು, ಕಾಮಧೇನು ಕಲ್ಪವೃಕ್ಷಗಳುಂಟು. ಆದ್ದರಿಂದ ಪ್ರತಿಯೋಧನ ಕತ್ತಿಯ ಬೀಸಿಗೆ ಕತ್ತರಿಸಿದ ತಲೆ – ಮುಂಡದಿಂದ ಬೇರ್ಪಟ್ಟಾಗಲೂ –ವೀರಗರ್ಜನೆ ಮಾಡಬೇಕು. ಆಗ ಆ ತಲೆಗೆ ಒಲಿಯುವಳು ವಿಜಯಶ್ರೀ.
ಹಾಗೆಯೇ ಭಕ್ತನಾದವನೂ –ವಿನಯದ ಮುದ್ದೆಯೇನೂ ಅಲ್ಲ, ಅವನು ತಾನು ಶಿವನ ಕೈಯಲ್ಲಿರುವ ಖಡ್ಗ ಶಿವನು ಹೋರಾಡಿಸುವ ತೆತ್ತಿಗ -ನಾನು ಹೋರಾಡುವ ಯೋಧ ಎಂಬ ಕೈಂಕರ್ಯದಿಂದಲೇ ಶಿವದ ವಿಜಯಕ್ಕಾಗಿ -ಪ್ರಾಣದ ಮೇಲಣ ಹಂಗನ್ನೂ ತೊರೆದು ಶ್ರಮಿಸಬೇಕು, ಬಂದ ಆಪತ್ತನ್ನು ಶಿವಲೀಲೆಯೆಂದು ನುಂಗಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು