ಪ್ರಸಾದಿಯ ಜ್ಞಾನಿಸ್ಥಲ - ನಿರ್ವಂಚನೆ
ಬಾರದು, ಬಾರದು ಭಕ್ತಂಗೆ ಪರಧನ ಪರಸ್ತ್ರೀ
ಬಾರದು, ಬಾರದು ವಿಷಯಿಗೆ ಪಶುಪತಿಯ ಬ್ರತವು.
ಬಾರದು, ಬಾರದು ಭವಭಾರಿಗೆ
ಕೂಡಲಸಂಗಮದೇವನ ಒಕ್ಕುದ ಕೊಳ್ಳಬಾರದು!
Transliteration Bāradu, bāradu bhaktaṅge paradhana parastrī
bāradu, bāradu viṣayakke paśupatiya bratavu.
Bāradu, bāradu bhavabhārige
kūḍalasaṅgamadēvana okkuda koḷḷabāradu!
Manuscript
English Translation 2 For the bhakta there can be no thought
Of another's goods of wife;
For the libertine, no good in a vow
To trust himself to Providence
As creature in the herdsman's hands.
It is not possible for one
Who bears the burden of this world
To ger what has been consecreatd by
Lord Kūḍala Saṅgama!
Translated by: L M A Menezes, S M Angadi
Hindi Translation भक्त के लिए परधन, परस्त्री त्याज्य हैं
विषयी को पशुपति का व्रत निषिद्ध है,
भव-भार ग्रस्त को त्याज्य है।
उसे कूडलसंगमदेव का प्रसाद पाना कठिन है॥
Translated by: Banakara K Gowdappa
Telugu Translation కూడదు కూడదు భక్తునకు పరదార ధనాదులు;
కూడదు కూడదు కామికి పశుపతి వ్రతము;
కూడదు కూడదు భవభారికి సంగని ప్రసాదము గ్రహింపకూడదురా
Translated by: Dr. Badala Ramaiah
Tamil Translation பக்தன் பிறர்செல்வம், பிறன்மனையை நயத்தலாகாது
புலனின்பத்தை நாடுவோனுக்கு பசுபதி நோன்பு எதற்கோ?
பிறவிப் பிணைப்பில் இருப்பவன்
கூடல சங்கமதேவனின் பிரசாதத்தைக் கொள்ளலாகுமோ?
Translated by: Smt. Kalyani Venkataraman, Chennai
Marathi Translation
भक्ताला परधन, परसतीचा मोह असू नये, असू नये,
विषयीला पशुपती व्रताचा मोह असू नये, असू नये.
भवभारीला कूडलसंगमदेवाच्या
शेष प्रसादाचे सेवन साध्य नाही साध्यनाही.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭಕ್ತನು ಪರಧನ ಮತ್ತು ಪರಸ್ತ್ರೀಗೆ ಆಶೆಪಡಬಾರದೆಂಬುದಲ್ಲ ಮಾತು -ಪರಧನ ಪರಸ್ತ್ರೀಗೆ ಆಶೆಪಡುವವನು ಭಕ್ತನೇ ಅಲ್ಲವೆಂಬುದು ಸರಿಯಾದ ಮಾತು. ಪಶುತ್ವವನ್ನು ಮೀರಿ ನಿಂತ ಪರಿಷ್ಕೃತ ಜೀವ ಶಕ್ತಿಗೆ ಆದರ್ಶಪ್ರಾಯವಾದ ಪಶುಪತಿಯನ್ನು ಲೋಭಿಯೂ ಕಾಮಾಂಧನೂ ಆದವನೊಬ್ಬನು ಪೂಜೆಮಾಡುವುದೆಂದರೇನರ್ಥ? ಆ ಪಶುಪತಿಶಿವನ ನಿರ್ಮಲನಿಜಾನಂದ(ಪ್ರಸಾದ)ವು ಭವಭಾರಿಯಾದವನಿಗೆ ಹೇಗೆ ಲಭ್ಯ?
ಅಂದರೆ ಭಕ್ತನಿಗೆ ಪರಸ್ತ್ರೀಪರಧನದ ವ್ಯಾಮೋಹಲೋಭವಿಲ್ಲ-ಇದ್ದವನು ವಿಷಯಿ, ಆ ವಿಷಯದಲ್ಲೇ ಲಂಪಟನಾದವನು ಭವಭಾರಿ-ಈ ವಿಷಯಿ ಮತ್ತು ಭವಭಾರಿ ಇಬ್ಬರಿಗೂ ಅನುಕ್ರಮವಾಗಿ ಶಿವಪೂಜೆಯನ್ನು ಮಾಡುವ ಶಿವಪ್ರಸಾದವನ್ನು ಸ್ವೀಕರಿಸುವ ಹಕ್ಕಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು