ಪ್ರಸಾದಿಯ ಜ್ಞಾನಿಸ್ಥಲ - ನಂಬಿಕೆ
ನಂಬಿದರೆ ಪ್ರಸಾದ; ನಂಬದಿದ್ದರೆ ವಿಷವು.
ತುಡುಕಬಾರದು, ನೋಡಾ, ಲಿಂಗನ ಪ್ರಸಾದ, ಸಂಗನ ಪ್ರಸಾದ!
ಕೂಡಲಸಂಗನ ಪ್ರಸಾದ: ಸಿಂಗಿ, ಕಾಳಕೂಟ ವಿಷವು!
Transliteration Nambidare prasāda; nambadiddare viṣavu.
Tuḍukabāradu, nōḍā, liṅgana prasāda, saṅgana prasāda!
kūḍalasaṅgana prasāda: Siṅgi, kāḷakūṭa viṣavu!
Manuscript
English Translation 2 If you believe, it's grace; a poison if you don't
Look you, the grace of Liṅga, Saṅga's grace,
Cannot be snatched by force!
Kūḍala Saṅga's grace is poison, deadly bane!
Translated by: L M A Menezes, S M Angadi
Hindi Translation विश्वास करने पर प्रसाद है,
विश्वास न करने पर विष,
लिंग-प्रसाद, संगमदेव का प्रसाद
देखो, छीनना नहीं चाहिए,
कूडलसंगमदेव का प्रसाद
विष है, कालकूट विष है॥
Translated by: Banakara K Gowdappa
Telugu Translation నేయి సమిరినట్లు నెమ్మదిగా బల్కు శరణుడు;
తనకు తానె బై టబడడు జాణవోలే
సంగని ప్రసాదమున బ్రతుకు నేగాని తన్నుదామెర యించుకొనడు
Translated by: Dr. Badala Ramaiah
Tamil Translation நம்பின் பிரசாதம் நம்பவில்லை எனின் நஞ்சு
இலிங்கபிரசாதம் முந்தலாகாது ஐயனே
இலிங்கபிரசாதம், அது கூடல சங்கனின் பிரசாதம்
(வஞ்சனை இருப்பின்) அது கொடிய நஞ்சு
காள கூட நஞ்சு ஐயனே.
Translated by: Smt. Kalyani Venkataraman, Chennai
Marathi Translation
मानले तर प्रसाद, मानले नाही तर विष.
तिरस्कार करु नये लिंगप्रसादाचा.
कूडलसंगमदेवाच्या प्रसादाचा तिरस्कार कालकूट विष आहे.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹಿಂದಿನ ವಚನ ಮುಗ್ಧರನ್ನು ಕುರಿತಂತಿದ್ದರೆ ಈ ವಚನ ಪ್ರತಿಷ್ಠಿತರನ್ನು ಕುರಿತಂತಿದೆ.
ಧನಿಕನೋ ಅಧಿಕಾರಿಯೋ ರಾಜಕಾರಣಿಯೋ ಬುದ್ಧಿಜೀವಿಯೋ ಆದ ಈ ಪ್ರತಿಷ್ಠಿತರು -ಸಮಾಜದ ಪ್ರಶ್ನಾತೀತ ಗೌರವಕ್ಕೆ ಪಾತ್ರವಾದ ಲಿಂಗದ ಪ್ರಸಾದವನ್ನು –ತಮ್ಮ ತಮ್ಮ ಕ್ಷೇತ್ರದಲ್ಲಿ ಬಂಡವಾಳವಾಗಿ ಬಳಸಿಕೊಂಡು ಮಿಗಿಲಾಗಿ ಪ್ರಭಾವಶಾಲಿಗಳಾಗಲು ಹವಣಿಸುವುದುಂಟು. ಹೀಗೆ ಮಾಡದಿದ್ದರೆ ಅವರು ಜನಾನುರಾಗವನ್ನು ಕಳೆದುಕೊಳ್ಳುವ ಭಯವಿರುವುದರಿಂದ –ಅಚ್ಚಭಕ್ತರಿಗಿಂತಲೂ ಅಧಿಕವಾಗಿ ದೇವರಿಗೆ ಅಡ್ಡಬಿದ್ದು ಪ್ರಸಾದಕ್ಕೆ ಕೈಯಾನುವರು. ಆಗ ಅಂಥವರಿಗೆ ಬಸವಣ್ಣನವರು –“ನಂಬಿದರೆ ಪ್ರಸಾದ, ನಂಬದಿದ್ದರೆ ವಿಷ –ತುಡುಕಬಾರದು” ಎಂದು ಅವರನ್ನು ತಡೆದು ಎಚ್ಚರಿಸುತ್ತಿರುವರು.
ತುಡುಕಬಾರದು ಎಂದರೆ ಕಸಿಯಬಾರದು ಎಂದು. ಈ ಪ್ರತಿಷ್ಠಿತ ಪೆಡಂಭೂತಗಳೋ –ಎಂದಿಗೂ ಕೊಟ್ಟರಿಯವು, ತುಡುಗುತಿಂದು ಮಾತ್ರ ಬಲ್ಲವು. ಅಂದರೆ ಕೊಡದವರಿಗೆ ಪಡೆಯುವ ಹಕ್ಕೂ ಇಲ್ಲವಾಗಿ, ಪಡೆದರೆ “ಪ್ರಸಾದ”ವನ್ನೂ ಪರಶೋಷಣೆಗಾಗಿಯೇ ಬಳಸುವರಾಗಿ “ತುಡುಕಬಾರದು ನೋಡಾ ಸಂಗನ ಪ್ರಸಾದ ಸಿಂಗಿಕಾಳಕೂಟವಿಷವೋ ಎಂದು ಹೇಳುತ್ತಿರುವರು ಬಸವಣ್ಣನವರು.
ಬಸವಣ್ಣನವರಾದ ಮೇಲಣ ಈ ಕಾಲಕ್ಕಂತೂ –ಅನ್ನ ಮಾರುವ ಅಂಗಡಿಯೂ ಪ್ರಸಾದನಿಲಯವಾಗಿದೆ –ಮಾರುವವರಲ್ಲಿ ಗುರುಗಳು ಜಂಗಮರೂ ಲಿಂಗದೇವರುಗಳೂ ಶಾಮೀಲಾಗಿದ್ದಾರೆ. ಹೀಗಾಗಿ ಕೈಯಲ್ಲಿ ಕಾಸಿಲ್ಲದ ಜನಸಾಮಾನ್ಯನಿಗೆ ಕೈಗೆಟುಕದ ಪ್ರಸಾದವೀಗ ಪುಂಡರ ಪುಡಾರಿಗಳ ಮೇಜಿನ ಮೋಜಾಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು