ಪ್ರಸಾದಿಯ ಜ್ಞಾನಿಸ್ಥಲ - ಶರಣರು
ಒಪ್ಪವ ನುಡಿವರಯ್ಯಾ ತುಪ್ಪವ ತೊಡೆದಂತೆ!
ಶರಣ ತನ್ನ ಮೆರೆವನೆ ಬಿನ್ನಾಣಿಯಂತೆ?
ಕೂಡಲಸಂಗನ ಪ್ರಸಾದದಿಂದ ಬದುಕುವನಲ್ಲದೆ
ತನ್ನ ಮೆರೆವನೆ?
Transliteration Oppava nuḍivarayya tuppava toḍedante!
Śaraṇa tanna merevane binnāṇiyante?
Kūḍalasaṅgana prasādadinda badukuvanallade
tanna merevane?
Manuscript
English Translation 2 Their pleasant talk is even as butter spread!
But should a Śaraṇa advertise himself,
Even as a clever pretender?
He lives by Kūḍala Saṅgama's grace;
But should he advertise himself?
Translated by: L M A Menezes, S M Angadi
Hindi Translation ऐसी मीठी बातें बोलते हो,
जैसे घृत सिंचित हों।
शरण ऐसे चतुरों की भाँति
अपने को प्रदर्शित करता है?
कूडलसंगमदेव के प्रसाद से जीता है,
नहीं तो क्या वह अपने को प्रदर्शित करता है?
Translated by: Banakara K Gowdappa
Telugu Translation నేయి సమిరినట్లు నెమ్మదిగా బల్కు శరణుడు;
తనకు తానె బై టబడడు జాణవోలే
సంగని ప్రసాదమున బ్రతుకు నేగాని తన్నుదామెర యించుకొనడు
Translated by: Dr. Badala Ramaiah
Tamil Translation நெய்ச்சுவையனைய, இனிய சொற்களை உரைப்பீர் ஐயனே
சரணன் பகட்டினர் அனைய தன்னைப் புகழ்வனோ?
கூடல சங்கனின் பிரசாதத்தால் வாழ்வதன்றி
தன்னைப் புகழ்ந்து கொள்வனோ?
Translated by: Smt. Kalyani Venkataraman, Chennai
Marathi Translation
न पटणारे बोलतात गोड शब्दातून या जागातील लोक,
शरण आत्मस्तुतीचे शब्द बोलतात का?
कूडलसंगमदेवाच्या
प्रसादावर जगणारे आत्मप्रदर्शन करतात का ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವಪ್ರಸಾದದಿಂದ ಸಾಧುಗೊಳಿಸಿಕೊಂಡಿರುವ ಶರಣನು ನೈಜವಾಗಿಯೇ ಜೀವಲೋಕಕ್ಕೆ ಭಾವನೀಯನಾಗಿರುವನೆಂಬುದು ಈ ವಚನದ ತಾತ್ಪರ್ಯ.
ಶರಣನೆಂಬ ಚಿನ್ನ ಗಿಲೀಟಿಲ್ಲದೆ ತಾನಾಗಿಯೇ ರಾರಾಜಿಸುವುದು –ಅದು ತೂಗಿದರೆ ಚಿನ್ನ, ಕಾಸಿದರೆ ಚಿನ್ನ, ಒರೆಉಜ್ಜಿದರೆ ಚಿನ್ನ, ಕುಟ್ಟಿದರೆ ಎಳೆದರೆ ಕುಸುರಿದೆಗೆದರೆ ಚಿನ್ನ –ಎಲ್ಲರ ಚಿದಾಭರಣ.
ಮಿಕ್ಕವರು ಅವಲೋಹದಂತೆ –ಅವರಿಗೆ ಗಿಲೀಟು ಬೇಕು –ಏಕೆಂದರೆ ಅವರಿಗೆ ಆತ್ಮದ ಮಿರುಗಿಲ್ಲ, ಅವರು ಮೆರೆದಾಡಬೇಕಾಗಿ -ಸುಳ್ಳನ್ನು ಸಿಹಿಯಾಗಿ ಹೇಳುವರು, ವಿಕಾರವನ್ನು ಸುಂದರವಾಗಿ ಬಣ್ಣಿಸುವರು, ವಿಷವನ್ನು ರುಚಿಯಾಗಿ ಆಡುವರು –ಅದು ಅವರ ಕೌಶಲ, ಪರಿಣಾಮವಾಗಿ ಲೋಕವು-ಕಿವಿಬೇಟವಾಗಿ ಮೃತ್ಯುವಿನ ಪ್ರೀತಿ ಬೆಳೆಸುವುದು, ಕಣ್ಬೇಟವಾಗಿ ಮೃತ್ಯುವನ್ನು ಸಮೀಪಿಸುವುದು, ರುಚಿಬೇಟವಾಗಿ ಆ ಮೃತ್ಯುವಿಗೆ ಸವಿದುತ್ತಾಗುವುದು.
ಹುಟ್ಟಿದವರು ಸಾಯುವುದು ಈ ಬಗೆಯಾಗಿ, ಇಂಥವರನ್ನು ಶರಣರು ಕೃಪಾಸಂಜೀವಿನಿಯಾಗಿ ಬದುಕಿಸುತ್ತ ಸದಾಕಾಲ ತಾನೇ ತಾನಾಗಿ ಮಿನುಗುತ್ತಿರುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು