ಪ್ರಾಣಲಿಂಗಿಯ ಶರಣಸ್ಥಲ - ಏಕದೇವೋಪಾಸನೆ
ಶರಣಸನ್ನಿಹಿತನೈಕ್ಯವಹಲ್ಲಿ ಹರಿಬ್ರಹ್ಮಾದಿಗಳು ಮೊದಲಾದ
ತೆತ್ತೀಸಾದಿ ದೇವರ್ಕಳು ʼಉಘೇ ಉಘೇʼ ಎನುತಿರಲು
ʼಐಕ್ಯ ಬಸವಣ್ಣಂಗೆ ಠಾವಾವುದಯ್ಯಾ?ʼ ಎಂದೊಡೆ:-
ಅಂಗದ ಕಳೆಯಲ್ಲಿ ಬಲದಲ್ಲಿ ಬ್ರಹ್ಮನ ಸ್ಥಾನ,
ಎಡದಲ್ಲಿ ನಾರಾಯಣನ ಸ್ಥಾನ, ಒಲ್ಲೆನಯ್ಯಾ!
ಕೊರಳು ಗರಳಸ್ಥಾನ, ಬಾಯಿ ಅಪ್ಪುವಿನ ಸ್ಥಾನ,
ನಾಸಿಕ ವಾಯುವಿನ ಸ್ಥಾನ, ಕಣ್ಗಳು ಅಗ್ನಿ ಸ್ಥಾನ,
ಜಡೆ ಗಂಗೆಯ ಸ್ಥಾನ, ನೊಸಲು ಚಂದ್ರನ ಸ್ಥಾನ,
ಹಿಂದು ಸೂರ್ಯನ ಸ್ಥಾನ,
ಚರಣಂಗಳು ಅಷ್ಟದಿಕ್ಪಾಲಕರ ಸ್ಥಾನಂಗಳು,
ಗುಹ್ಯ ಕಾಮನ ಸ್ಥಾನ,
ಹಸ್ತಂಗಳು ಕಪಾಲ ಖಟ್ವಾಂಗ ತ್ರಿಶೂಲ ಡಮರುಗ ಸ್ಥಾನ,
ದೇಹ ರುಂಡಮಾಲೆಯ ಸ್ಥಾನ, ಕರ್ಣ ನಾಗೇಂದ್ರನ ಸ್ಥಾನ,
ಇಂತೀ ಸ್ಥಾನಂಗಳ ನಾನೊಲ್ಲೆನಯ್ಯಾ!
ಹೃದಯಕಮಲ ಮಧ್ಯವ ಅಂತರಾಳದ
ಏಕಪೀಠದ ಸಿಂಹಾಸನದ ತೆರಹ ಕೊಡು,
ಕೂಡಲಸಂಗಮದೇವಾ!
Transliteration Śaraṇasannihita aikyavahalli haribrahmādigaḷu modalāda
tettīsādi dēvarkaḷu ʼughē ughēʼ enutiralu
ʼaikya basavaṇṇaṅge ṭhāvāvudayyā?ʼ endoḍe:-
Aṅgada kaḷeyalli baladalli brāhmaṇa sthāna,
eḍadalli nārāyaṇana sthāna, ollenayyā!
Koraḷu garaḷasthāna, bāyi appuvina sthāna,
nāsika vāyuvina sthāna, kaṇgaḷu agni sthāna,
jaḍe gaṅgeya sthāna, nosalu candrana sthāna,
hindu sūryana sthāna,
caraṇaṅgaḷu aṣṭadikpālakara sthānagaḷu,
guhya kāmana sthāna,
hastaṅgaḷu kapāla khaṭvāṅga triśūla ḍamaruga sthāna,
Dēha ruṇḍamāleya sthāna, karṇa nāgēndrana sthāna,
intī sthānaṅgaḷa nānollenayyā!
Hr̥dayakamaḷamadhyava antarāḷada
ēkapīṭhada sinhāsanada teraha koḍu,
kūḍalasaṅgamadēvā!
Manuscript
English Translation 2 Where Śaraṇā has been
There Hari and Brahma nad all the rest
And the three and thirty gods and more
Exclaim, Hurrah, haurrah!-
Should they ask in what place
Basavaṇṇa is united: in the body's light,
The abode of Brahma on the right,
"Nārāyaṇa's on the left-
I do not care!
The throat is where the poison is,
The mouth where water dwells,
The nose, the air's abode, the eyes of fire,
The hair, the Gaṅgās home,
The brow, the moon's,
The back of the head, the sun's;
The feet are where they stand- the eight
Who keep the quarters of the heavens;
The lions are Love's abode;
The hands, of the bowl, sword, trident, drum;
The body is where he puts on
The garland of skulls the ear
Of the Lord os Snakes:
None of these seats I want!
But give me, O Kūḍala Saṅgama Lord,
Room on the one-seat throne
The knowledge born of self-experience,
Of the heart's lotus inmost core!
Translated by: L M A Menezes, S M Angadi
Hindi Translation जब शरण-सन्निहित बसवण्णा का लिंगैक्य होनेवाला था।
हरि-ब्रह्मादि तैंतीस कोटि देवता
धन्य धन्य, साधु साधु कह हर्षनाद कर रहे थे।
तब यह पूछा गया, बसवण्णा के ऐक्य होने का स्थान कहाँ?
अंग काँति दक्षिण पाश्र्व में ब्रह्म का स्थान है,
वाम पाश्र्व में नारायण का-अतः मुझे नहीं चाहिए !
कंठ विष का स्थान है, मुख जल का है,
नासिक वायु का स्थान है, नेत्र अग्नि का है,
जटा गंगा का स्थान है, ललाट चंद्र का है,
पिछला भाग सूर्य का स्थान है, चरण अष्टदिक्पालकों का स्थान है,
गुह्य काम का स्थान है, हस्त कपाल, खट्वांग, त्रिशूल डमरु का स्थान है,
देह रुंड-माला का स्थान है, कर्ण नागेंद्र का है,
ये स्थान मुझे नहीं चाहिए ।
तव हृदय-कमल के अंतराल में
एक पीठ-सिंहासन पर स्थान दो, कूडलसंगमदेव॥
Translated by: Banakara K Gowdappa
Telugu Translation శరణ సన్నిహితుడై ఐక్యమగు వేళ
హరి బ్రహ్మాదులు త్రింశత్కోటి దేవతలు;
భళాభళా యనుచుండ;
ఐక్య బసవన్నకు స్థలమేది అయ్యా!
అంగకళ దక్షిణమున బ్రహ్మ
వామమున నారాయుణుడు నిల్వ
గళమున గరళము; నోటనీరు; ముక్కున వాయువు :
కన్నుల అగ్ని; జడగంగ; నొసట చంద్రుడు
వెనుక సూర్యుడు; చరణము లష్టదిక్పాలకులు
గుహ్యమున కాముడు; హస్తముల కపాల ఖట్వాంగ
త్రిశూలఢమరములు; దేహమున రుండమాల
కర్ణమున నాగేంద్రుడి ట్లైన స్థానముల
నే నొల్లనయ్యా! హృదయ కమల మథ్యాంతరాళమున;
ఏక పీఠ సింహాసన స్థలము
ప్రసాదింపుమయ్యా కూడల సంగమదేవా!
Translated by: Dr. Badala Ramaiah
Tamil Translation பிராணலிங்கியின் சரணத்தலம்
இணையும் வேளை நெருங்கும்பொழுது
திருமால், பிரம்மன் போன்ற முப்பத்து
மூன்று கோடி தேவர்கள் வாழ்க, வாழ்க
என்று கூற, இணையவுள்ள பசவண்ணலிற்கு
எந்த இடம் எனின் உடலின் வலப்பக்கம்
பிரம்மனின் இடம், இடப்புறத்தில் நாராயணனின்
இடம் விரும்பேன் ஐயனே, கழுத்து
நஞ்சின் இடம், வாய் நீரின் இடம்
மூக்கு வாயுவின் இடம், கண்கள் நெருப்பின்
இடம், ஜடை கங்கையின் இடம் நெற்றி
சந்திரனின் இடம், பின்பகுதி சூரியனின் இடம்
திருவடிகள் எட்டு திக்குபாலர்களின் இடம்
குஹ்யம் காமனின் இடம், கரங்கள்
கபாலம், கட்வாங்கம், திரிசூலம், டமருகங்கனின்
இடம், உடல் மண்டையோட்டு மாலையினிடம்
செவி நாகேந்திரனின் இடம், இத்தகைய
இடங்களை நான் விரும்பேன், இதயத்தின்
நடுவில், ஆழத்திலுள்ள ஒரே ஒரு பீடத்தின்
அரியணையில் வாய்ப்பினை அளிப்பாய்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
शरण समरस होऊन ऐक्य होता
हरिब्रह्मादि तेहतीस देव त्यांचे स्वागत
उघे उघे म्हणीत करतात.
ऐक्य बसवण्णांना आपल्यात कोठे बसवणार ?
देहाच्या उजव्या भागात ब्रह्माचे स्थान. डाव्या भागात नारायणाचे स्थान,
तेथे मला नको देवा. कंठ विषाचे स्थान,
तोंड आपचे स्थान, नासिक वायूचे स्थान,
नयन अग्नीचे स्थान, जटा गंगेचे स्थान, कपाळ चंद्राचे स्थान,
पाठ सूर्याचे स्थान, चरण अष्टदिशांचे स्थान, गुह्य कामाचे स्थान,
हात, कपाल, मुंडके, त्रिशूल, डमरुचे स्थान.
देह रुंडमालेचे स्थान, कर्ण नागेंद्राचे स्थान,
अशी ही स्थाने मला नको आहेत देवा.
हृदय कमलाच्या मध्यभागी एक पीठ सिंहासन
ते स्थल मला द्यावे कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಶಿವನಲ್ಲಿ ಐಕ್ಯವಾಗುವ ಶುಭಘಳಿಗೆ ಬಂತೆಂದರೆ –ಮೂವತ್ತುಮೂರು ಕೋಟಿ ದೇವತೆಗಳೂ ಹರ್ಷದಿಂದ ಉಘೇ ಉಘೇ ಎನ್ನುತ್ತಿರಬಹುದು. ಆದರೆ ಸ್ವತಃ ಬಸವಣ್ಣನವರು ತಮ್ಮೆಲ್ಲ ವಿಕ್ರಮದ ಆ ಅಜಿತಮುಹೂರ್ತದಲ್ಲಿ ಆಯ್ದುಕೊಳ್ಳುವುದು ಶಿವನ ಅತ್ಯತಿಷ್ಠದ್ದಶಾಂಗುಲಮಕುಟ ಸ್ಥಾನವನ್ನೂ ಅಲ್ಲ ; ಆಧಾರ ಚರಣಸ್ಥಾನವನ್ನೂ ಅಲ್ಲ –ಆ ಶಿವನ ವಿರಾಡ್ರೂಪದ ಆದ್ಯಂತಕ್ಕೂ ಆವರಿಸಿ ಸ್ಪಂದಿಸಬಲ್ಲ ಅವನ ಹೃದಯಸ್ಥಾನವನ್ನು. ಹಾಗೆ ಮಾಡುವುದರಿಂದ ಶಿವನ ಅಂಗೋಪಾಂಗಗಳಲ್ಲಿ ನೆಲಸಿರುವ ಯಾವ ದೇವತೆಯ ಯಾವ ಸ್ಥಾನವನ್ನೂ ಆಕ್ರಮಿಸಿಕೊಂಡಂತಾಗುವುದಿಲ್ಲ–ಮತ್ತು ಆ ಶಿವನು ತನ್ನನ್ನು ತಾನೇ ಧ್ಯಾನಿಸಲು ಮೀಸಲಾಗಿರಿಸಿಕೊಂಡಿರುವ ಅವನ ಹೃದಯಸ್ಥಾನದಲ್ಲಿ ಎಲೆಯ ಮರೆಯ ಹಣ್ಣಿನಂತೆ ಗಮ್ಮಗಿರುವ ಕೈವಲ್ಯರಸಾನಂದ ಆ ಬಸವಣ್ಣನವರ ಚಿರೇಪ್ಸಿತಕಾಂಕ್ಷೆ ಕೂಡ. ಇಹದಲ್ಲೇ ಅಲ್ಲ ಪರದಲ್ಲಿಯೂ ಬಸವಣ್ಣನವರು ಯಾವ ಸ್ಥಾನಮಾನದ ಯಾವ ಭಾವಬಂಧನಗಳಿಲ್ಲದವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು