ಪ್ರಾಣಲಿಂಗಿಯ ಶರಣಸ್ಥಲ - ಅನುಗ್ರಹ
ಮಾಡುವರಿಲ್ಲ, ನೀ ಮಾಡದೆ ನಿಲ ಸಾಲೆ;
ಬೇಡುವರಿಲ್ಲ, ನೀ ಬೇಡದೆ ನಿಲ ಸಾಲೆ;
ಕೂಡುವರಿಲ್ಲ, ನೀ ಕೂಡದೆ ನಿಲ ಸಾಲೆ;
ಕೂಡಲಸಂಗಮದೇವ
ತಾನು ತಾನಾಗಿ ನೋಡದೆ ನಿಲ ಸಾಲೆ!
Transliteration Māḍuvarilla, nī māḍade nila sāle;
bēḍavarilla, nī bēḍade nila sāle;
kūḍuvarilla, nī kūḍade nila sāle;
kūḍalasaṅgamadēva
tānu tānāgi nōḍade nila sāle!
Manuscript
English Translation 2 There's none to serve:
Unless you serve, I cannot stand;
There's none to beg:
Unless you beg, I cannot stand;
There's none to join:
Unless you join, I cannot stand.
There is none to behold: Kūḍala Saṅgama being I myself
I cannot stand!
Translated by: L M A Menezes, S M Angadi
Hindi Translation करनेवाले नहीं हैं, तुम नहीं करो, तो मैं ठहर नहीं सकता;
माँगनेवाले नहीं हैं, तुम नहीं माँगो, तो ठहर नहीं सकता ।
मिलनेवाले नहीं हैं, तुम नहीं मिलो, तो ठहर नहीं सकता ।
कूडलसंगमदेव, तुम नहीं देखो, तो ठहर नहीं सकता ॥
Translated by: Banakara K Gowdappa
Telugu Translation చేయువారు లేరు నీవు చేయకున్న నిల్వలేను
వేడువారు లేరు నీవు వేడకున్న నిల్వలేను;
కూడువారు లేరు నీవు కూడకున్న నిల్వలేను;
కూడల సంగమదేవ! నేను నేనై చూడక నిల్వలేను!
Translated by: Dr. Badala Ramaiah
Tamil Translation அளிப்பவர் எவருமில்லை, எனவே நீ ஈயாது விடாய்
இருக்கலாகாது, வேண்டுவோரில்லை எனவே
நீ வேண்டாது விடாய், கூடுவதற்கு
எவருமில்லை என நீ என்னைக் கூடுகிறாய்
தான் தானாகி நீ காணாது விடாய்
Translated by: Smt. Kalyani Venkataraman, Chennai
Marathi Translation
करणारे नाहीत, तुझ्याविना करणारे कोणी नाही
मागणारे नाहीत, तुझ्याविना मागणारे कोणी नाही.
देणारे नाहीत, तुझ्याविना देणारे कोणी नाही.
कूडलसंगमदेवा तुझ्याविना देणारे कोणी नाही.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವಚನದ ಸರಳಾನುವಾದ : ನನಗೆ ಯಾರು ಮಾಡುವರಿಲ್ಲದಾಗ ನೀನು ಮಾಡದೆ ನಿಲ್ಲಲಾರೆ, ನನ್ನನ್ನು ಯಾರೂ ಬೇಡುವವರಿಲ್ಲದಾಗ ನೀನು ಬೇಡದೆ ನಿಲ್ಲಲಾರೆ, ನನ್ನನ್ನು ಯಾರು ಕೂಡುವರಿಲ್ಲದಾಗ ನೀನು ನನ್ನನ್ನು ಕೂಡದೆ ನಿಲ್ಲಲಾರೆ. ಅಂದರೆ-ಎಲೆ ಕೂಡಲ ಸಂಗಮದೇವ, ನೀನು ನೈಜವಾಗಿಯೇ ನನಗೆ ಕರ್ತನೂ ಬಂಧುವೂ ಸಂಗಾತಿಯೂ ಆಗಿ ನನ್ನ ಹಿತವನ್ನು ಸಂರಕ್ಷಿಸದೆ ಇರಲಾರೆ.
ವಿವರ : ನಾನು ನಿರ್ಗತಿಕನಾಗಿದ್ದಾಗ ನೀನು ನನಗೆ ಸಹಾಯ ಮಾಡಿರುವೆ. ನಾನು ಸ್ಥಿತಿವಂತನಾದಾಗ ನೀನು ನನ್ನನ್ನು ಬೇಡಿ -ನಾನು ನಿನಗೆ ಕೊಟ್ಟು –ಕೊಟ್ಟನೆಂಬ ಧನ್ಯತೆಯನ್ನೂ ನೀನು ನನಗುಂಟುಮಾಡಿರುವೆ. ನಾನು ಒಂಟಿತನದಿಂದ ನವೆಯುತ್ತಿದ್ದಾಗ ನೀನು ನನಗೆ ಜೊತೆಗೊಟ್ಟು ಅನ್ಯೋನ್ಯವಾಗಿ ಸ್ಪಂದಿಸುವ ಮನದಿನಿಯಾಗಿ ಒಡೆಯರು ನನಗಿರುವರೆಂಬ ಭಾವಸೌಭಾಗ್ಯವನ್ನೂ ನನಗುಂಟುಮಾಡಿರುವೆ. ನನಗೆ ಕರ್ತನೂ ಪರೀಕ್ಷಕರನೂ ಪ್ರಾಣಪ್ರಿಯನೂ ನೀನೇ ಆಗಿರುವೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು