ಹಲಬರ ನುಂಗಿದ ಹಾವಿಂಗೆ ತಲೆ ಬಾಲವಿಲ್ಲ, ನೋಡಾ:
ಕೊಲುವುದು ತ್ರೈಜಗವೆಲ್ಲವ, ತನಗೆ ಬೇರೆ ಪ್ರಳಯವಿಲ್ಲ;
ನಾಕಡಿಯನೈದುವುದು, ಲೋಕದ ಕಡೆಯನೆ ಕಾಣ್ಬುದು,
ಸೂಕ್ಷ್ಮ ಪಥದಲ್ಲಿ ನಡೆವುದು: ತನಗೆ ಬೇರೆ ಒಡಲಿಲ್ಲ;
ಅಹಮ್ಮೆಂಬ ಗಾರುಡಿಗನ ನುಂಗಿತ್ತು.
ಕೂಡಲಸಂಗನ ಶರಣರಲ್ಲದುಳಿದವರ!
Transliteration Halabara nuṅgida hāviṅge tale bālavilla, nōḍa:
Koluvudu traijagavellava, tanage bēre praḷayavilla;
nākaḍiyanaiduvudu, lōkada kaḍeyane kāṇbudu,
sūkṣma pathadalli naḍevudu: Tanage bēre oḍalilla;
aham'memba gāruḍigana nuṅgittu.
Kūḍalasaṅgana śaraṇaralladuḷidavara!
Manuscript
English Translation 2 Behold, the snake that swallowed many a one,
Has neither head nor tail!
It kills the three worlds; but itself
Knows no destruction; it walks
Four steps and beholds
The end of the world; it walks
Along a subtle path, although
It has no body; it has swallowed up
The mountain bank whose name is 'I',
And all the rest, except
Kūḍala Saṅga's Śaraṇās !
Translated by: L M A Menezes, S M Angadi
Hindi Translation अनेकों को निगले हुए साँप के न सिर है, न पूँछ;
वह त्रिभुवन का संहार करता है, उसे कोई प्रलय नहीं;
चार डग चलता है, जगत का अंत ही देखता है;
वह सूक्ष्म पथ पर चलता है, उसके कोई शरीर नहीं है,
अहं रूपी गारुडी को निगल लिया,
कूडलसंगमदेव के शरणों कों छोड शेष सबों को भी ॥
Translated by: Banakara K Gowdappa
Telugu Translation పలువర మ్రింగిన పాముకు తల తోక లేదురా;
ముంచు మూడు లోకముల తనకు వేలె ప్రళయము లేదు
నే కూల్ప కూలు; జగదంత్యమునే చూతు
సూక్ష్మ పథముననడతు తనకు వేఱె తనువు లేదు
అహంబను గరుడ మాంత్రికుని మ్రింగె;
సంగని శరణుల విడిచి మిగిలిన వారినెల్లా మ్రింగెకదరా!
Translated by: Dr. Badala Ramaiah
Tamil Translation பலரை விழுங்கிய பாம்பிற்குத் தலை
வால் இல்லை காணாய், மூவுலகில்
உள்ளோரைக் கொல்கிறது, தனக்கும் அழிவில்லை
நான்கு அவத்தைகளுடன் கூடியது
உலகியல் செயல்களையும் செய்கிறது
சூட்சுமமான வழியில் செல்கிறது
இதற்கு வேறு உடலில்லை பகட்டினரை
செருக்குற்றோரை கூடலசங்கனின் சரணர்
அல்லாதோரை விழுங்கியது அன்றோ!
Translated by: Smt. Kalyani Venkataraman, Chennai
Marathi Translation
अनेकांना गिळणाऱ्या सापाला शिर- शेपूट नाही पहा.
नष्ट करतो तिन्ही लोक, पण त्याला प्रलय नाही.
चार पावले चालतो पणा सर्व जगाला पाहतो.
सूक्ष्मपथावर चालतो पण त्याला देह नाही.
अहंरुपी गारुड्याने गिळले सर्वांना कूडलसंगाच्या शरणाविना.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮೃತ್ಯುವೆಂಬ ಹೆಬ್ಬಾವಿಗೆ ತಲೆಯಿಲ್ಲ–ಆದರೆ ಹಲವರನ್ನು ಅದು ನುಂಗಿದೆ, ಬಾಲವಿಲ್ಲ–ಆದರೆ ಸರ್ವರನ್ನೂ ಸುತ್ತಿಹಿಡಿದಿದೆ. ಹೀಗೆ ಲೋಕ ಮೂರನ್ನೂ ಸಾಯಿಸುವ ಈ ಹಾವಿಗೆ ಮಾತ್ರ ಸಾವಿಲ್ಲ. ಅದು ಶೈಶವ ಬಾಲ್ಯ ಯೌವನ ವಾರ್ಧಕ್ಯವೆಂಬ ನಾಲ್ಕು ಹಂತದಲ್ಲಿಯೂ ವ್ಯಾಪಿಸಿಕೊಂಡಿರುವುದು, ಲೋಕ ಲೋಕಗಳ ತುತ್ತತುದಿಗೂ ಚಾಚಿಕೊಂಡಿರುವುದು. ತನಗೇ ಪ್ರತ್ಯೇಕವಾದ ಮೈಯಿಲ್ಲವಾಗಿ ಅದು ಎಲ್ಲಿ ನುಸುಳುವುದೋ ಎಲ್ಲಿ ಮೇಲೆ ಬೀಳುವುದೋ ಒಂದೂ ತಿಳಿಯದಂತಿರುವುದು. ಇದರ ಗುಣಕ್ರಿಯೆಗಳನ್ನು –“ನಾನು ಬಲ್ಲೆ, ನಾನು ಹಿಡಿಯಬಲ್ಲೆ”ನೆಂಬ ಸೋಹಮ್ಮಿನ ಜೊಮ್ಮಿನ ಸನ್ಯಾಸಿಗಳನ್ನೆಲ್ಲಾ ಒಂದೇ ತುತ್ತಿಗೆ ಅದು ನುಂಗುತ್ತದೆ. ಆದರೆ ಅಂಗವೆಲ್ಲಾ ಲಿಂಗವಾಗಿರುವ ದಾಸೋಹಂ ಪಂಥದ ಶಿವಶರಣರನ್ನು ಅದು ಮುಟ್ಟದು.
ವಿ : ಈ ಹಾವು ಮಾಯೆಗೂ ಪ್ರತೀಕವಾಗಿ ನಿಲ್ಲಬಲ್ಲುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು