•  
  •  
  •  
  •  
Index   ವಚನ - 859    Search  
 
ಶರಣನ ಜ್ಞಾನಿಸ್ಥಲ - ಶಿವಜ್ಞಾನ
ಆದಿಯಲ್ಲಿ ಶಿವಬೀಜವಲ್ಲದವರಿಗೆ ವೇದ್ಯವಾಗದು ಶಿವಜ್ಞಾನ; ಶಿವಭಕ್ತಿ. ಲಿಂಗಸ್ಥಳವಳವಡದು; ಜಂಗಮಸ್ಥಲವಳವಡದು; ಪಾದೋದಕ ಪ್ರಸಾದಸ್ಥಳವಳವಡದು; ನರಕದಲ್ಲಿ ಬೀಳುವ ಕರ್ಮಿಗಳಿಗೆ ಕೂಡಲಸಂಗನ ಶರಣರನುಭಾವ ನೆಲೆಗೊಳ್ಳದು.
Transliteration Ādiyalli śivabījavalladavarige vēdyavāgadu śivajñāna; śivabhakti. Liṅgasthalavaḷavaḍadu; jaṅgamasthalavaḷavaḍadu; pādōdaka prasādasthalavaḷavaḍadu; narakadalli bīḷuva karmigaḷige kūḍalasaṅgana śaraṇaranubhāva nelegoḷḷadu.
Manuscript
English Translation 2 The experience of Śiva cannot be grasped By those who are not Śiva's seed at first, They are not versed In Śivabhakti or in lore Relating to Liṅga and Jaṅgama ; Nor in Prasāda or in lore Relating to Liṅga and Jaṅgama ; Nor in Prasāda or Pādōdaka.... The experience of Kūḍala Saṅga Cannot be grasped By the ritualists doomed into hell! Translated by: L M A Menezes, S M Angadi
Hindi Translation शिवज्ञान, शिवभक्ति विदित नहीं होती, लिंग-स्थल प्राप्त नहीं होता, जंगम-स्थल प्राप्त नहीं होता, पादोदक प्रसादस्थल प्राप्त नहीं होता । नरक में गिरनेवाले कर्मियों को कूडलसंगमदेव के शरणों का अनुभाव स्थिर नहीं होता ॥ Translated by: Banakara K Gowdappa
Telugu Translation ఆదిని శివ;జము కానివానికి వేద్యముకాదు శివజ్ఞానము ఆలవడదు శివభ క్తి. లింగ స్థలము, జంగమ స్థలము, అలవడదు పాదోదక ప్రసాద స్థలములు నరకమునబడు కర్ములకు శరణుల అనుభావ మలవడదయ్యా! Translated by: Dr. Badala Ramaiah
Tamil Translation ஆதியில் சிவ அம்சமெனும் உணர்வற்றோருக்கு சிவஞானம், சிவபக்தியை அறியவியலாது இலிங்கத்தலம், ஜங்கமத்தலம் பொருந்தாது திருவடித்திருநீர் பிரசாதத்தலம் பொருந்தாது நரகத்தில் வீழும் உலகியருக்கு, கூடல சங்கனின் சரணரை உணர்வது நிலைகொள்ளாது. Translated by: Smt. Kalyani Venkataraman, Chennai
Marathi Translation आदिमध्ये शिव संस्कारहीनांना शिवज्ञान, शिवभक्ती, लिंगस्थल मिळणार नाही, जंगमस्थल मिळणार नाही. पादोदक-प्रसाद मिळणार नाही. नरकात पडलेल्या कर्मीनां कूडलसंगमदेवाच्या शरणांचा अनुभाव मेळा मिळणार नाही. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮಾಂಸ ಮೂಳೆ ತುಂಬಿದ ಒಂದು ಚರ್ಮದ ಚೀಲವಲ್ಲ ನಾನು, ನಾನು ಶಿವಾಂಶಿಕ –ಅಂದರೆ ಆದಿಯಲ್ಲಿ ಶಿವಬೀಜದಿಂದ ಬಂದವ ನಾನೆಂಬ ಪ್ರಜ್ಞೆಯಿಲ್ಲದವರಿಗೆ ಶಿವಜ್ಞಾನ ಶಿವಭಕ್ತಿ ಲಿಂಗಧಾರಣೆ ಅಳವಡುವುದಿಲ್ಲ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಅಳವಡುವುದಿಲ್ಲ. ಶರಣರು ಮೇಲಿಂದ ಮೆಲೆ ಹೇಳಿದ ಶಿವಾನುಭಾವದ ವಾಕ್ಯಗಳ ಆಧಾರದ ಮೇಲಿಂದಾದರೂ ವಿವೇಚಿಸಿ ತಮ್ಮ ಶಿವಜನ್ಮದ ಘನತೆಯನ್ನು ಮನಗಾಣದ ಕರ್ಮವಾದಿಗಳಿಗೆ ನರಕಜೀವನವೇ ಗತಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು