ಕೆರೆ ಹಳ್ಳ ಬಾವಿಗಳು ಮೈದೆಗೆದರೆ
ಗುಳ್ಳೆ ಗೊರಜೆ ಚಿಪ್ಪುಗಳು ಕಾಣಬಹುದು:
ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು.
ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ
ಲಿಂಗವ ಕಾಣಬಹುದು!
Transliteration Kere haḷḷa bāvigaḷu maidegedare
guḷḷe goraje cippugaḷu kaṇḍubaruttave:
Vāridhi maidegedare ratnaṅgaḷu kāṇuttave.
Kūḍalasaṅgana śaraṇaru manaderedu mātanāḍidaru
liṅgava Liṅgava kāṇabahudu!
Manuscript
English Translation 2 When tanks and streams and wells
Lay themselves bare, you see
Pebbles and weeds and oyster shells;
But when the ocean-bed lies bare,
It is gems you see!
When Kūḍala Saṅga's Śaraṇās
Lay bare their hearts and speak,
It is Liṅga that you see!
Translated by: L M A Menezes, S M Angadi
Hindi Translation ताल, नाले, कूपों के खुल जाने पर
बिलौर, घास-पूस व सीपों को देख सकते हैं;
वारिधि के खुल जाने पर रत्नों को देख सकते हैं ।
कूडलसंगमदेव के शरणों के खुले मन से बोलने पर
लिंग दर्शन कर सकते हैं ॥
Translated by: Banakara K Gowdappa
Telugu Translation చెఱువు గుంట బావి యింకిన నాచు చిప్ప పైకి తేలు;
వారిధి యింకిన రత్నములు ముత్యములు వెలువడునయ్యా
సంగని శరణులు మనసారమాటాడిన మహాదేవుడే కనపడునయ్యా
Translated by: Dr. Badala Ramaiah
Tamil Translation குளம், குட்டை, கிணறுகள் வற்றின்
சங்கு, சிப்பி, என்னுமிவற்றைக்காணலாம்
கடலின் அடியில் இரத்தினங்களைக் காணலாம்.
நம் கூடல சங்கனின் அடியார் மனம் திறந்து
உரையாடின் இலிங்கத்தைக் காணலாம்
Translated by: Smt. Kalyani Venkataraman, Chennai
Marathi Translation
तलाव, ओढा, विहिरीचे हृदय खोलले तर
बुडबुडे, पाणछत्री, शिंपले, गोटे दिसतील.
सागराचे हृदय खोलून पाहता रत्न, मोती मिळतील.
कूडलसंगाचे शरण मन मोकळे करुन बोलता
लिंगदर्शन होईल.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶರಣರ ಮಾತುಗಳಿಂದ ದೇವರನ್ನು ಕಾಣಬಹುದು
ಸಾಮಾನ್ಯವಾಗಿ ಊರ ಮುಂದಿರುವ ಚಿಕ್ಕ ಕೆರೆ, ಹಳ್ಳಗಳು, ಬಾವಿಗಳು ಇವೆಲ್ಲ ಬೇಸಿಗೆ ಕಾಲದಲ್ಲಿ ಬತ್ತಿ ಹೋಗುತ್ತವೆ. ಆಗ ಅವುಗಳ ತಳದಲ್ಲಿ ಕಾಣುವುದೇನು? ಗುಳ್ಳೆ, ಗೊರಚೆ, ಚಿಪ್ಪು ಇತ್ಯಾದಿಗಳೇ! ಎಂದರೆ ಕೆಲಸಕ್ಕೆ ಬಾರದ ವಸ್ತುಗಳು ಮಾತ್ರವೇ ಕಾಣಬಹುದು. ಆದರೆ ಸಮುದ್ರವು ಒಂದು ವೇಳೆ ಬತ್ತಿದರೆ ಅದರೆ ತಳದಲ್ಲಿ ಕಾಣಬಹುದಾದ್ದೇನು? ಸಾಮಾನ್ಯ ವಸ್ತುಗಳಲ್ಲ. ಬಹಳ ಬೆಲೆಬಾಳುವ ಮುತ್ತು-ರತ್ನಗಳೇ ಅದರ ತಳದಲ್ಲಿ ಕಾಣತ್ತವೆ. ಇಲ್ಲಿ ಕೆರೆ-ಹಳ್ಳ-ಬಾವಿಗಳೂ ಜಲಾಶಯಗಳೇ, ಸಮುದ್ರವೂ ಜಲಾಶಯವೇ! ಆದರೂ ಸಮುದ್ರದ ತಳದಲ್ಲಿರುವ ವಸ್ತುಗಳು ಬಹಳ ಬೆಲೆ ಬಾಳುವ ಮುತ್ತು-ರತ್ನಗಳು. ಅದರಂತೆಯೇ ಸಾಮಾನ್ಯ ಮನುಷ್ಯನು ತನ್ನ ಅಂತರಂಗವನ್ನು ಬಿಚ್ಚಿ ಹೇಳಿದರೂ ಒಳ್ಳೊಳ್ಳೆಯ ವಿಚಾರಗಳು ದೊರೆಯಲಾರವು. ಅದೇ ಶರಣರು ಎಂದರೆ ದೇವರನ್ನು ನಂಬಿರುವವರು ದೇವರ ಪರಿಚಯ ಪಡೆದಿರುವವರು, ತಮ್ಮ ಅಂತರಂಗವನ್ನು ಬಿಚ್ಚಿ ಮಾತನಾಡಿದರೆ ನಮಗೆ ಉತ್ತಮ ವಿಚಾರಗಳೇ ದೊರೆಯಬಹುದು ಎಂದರೆ ಉತ್ತಮೋತ್ತಮವಾದ ಲಿಂಗವೇ (ದೇವರೇ) ಕಾಣಬಹುದು. ಅಂಥವರ ಮಾತಿನಿಂದ ನಮಗೆ ದೇವರ ಪರಿಚಯವೇ ಆಗಬಹುದು. ಆದ್ದರಿಂದ ಸಾಮಾನ್ಯರ ಸಹವಾಸ ಮಾಡಿ, ಅವರೊಡನೆ ಸಂಭಾಷಣೆ ಮಾಡುವುದಕ್ಕಿಂತ ಶರಣರ ಸಹವಾಸ ಮಾಡಿ ಅವರೊಡನೆ ಸಂಭಾಷಿಸಿ, ದೇವರ ಪರಿಚಯ ಪಡೆದು ತನ್ನಲ್ಲಿ ದೇವತ್ವವನ್ನಳವಡಿಸಿಕೊಂಡು ತಾನೇ ದೇವರಾಗಬಹುದು.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.