•  
  •  
  •  
  •  
Index   ವಚನ - 864    Search  
 
ಶರಣನ ಜ್ಞಾನಿಸ್ಥಲ - ಶರಣರು
ನಾರುಳಿಯ ಹಣಿದವನಾರಾದರೆಯೂ ಆಡರೆ? ನಾರುಳಿದರೆ ಮುಂದೆಯಂಕುರಿತ ಫಲ ತಪ್ಪದು: ಮಾಡುವನ್ನಕ್ಕ ಫಲದಾಯಕ ! ಮಾಟವರತು ನಿಮ್ಮಲ್ಲಿ ಸಯವಾದರೆ ಆತನೆ ಅಚ್ಚ ಶರಣನಯ್ಯಾ, ಕೂಡಲಸಂಗಮದೇವಾ.
Transliteration Nāruḷiya haṇidavanārādareyū āḍare? Nāruḷidare munde aṅkurita phala tappadu: Māḍuvannakka phaladāyaka! Māṭavaratu nim'malli sayavādare ātane acca śaraṇanayyā, kūḍalasaṅgamadēvā.
Manuscript
English Translation 2 Does not anybody Press the sugarcane in the mill? Should but a fibre remain, the fruit Is later bound to sprout: so long as you act, The action gives you fruit! But if one's action perish, and One becomes one with you, that is The perfect Śaraṇās , O Kūḍala Saṅgama Lord! Translated by: L M A Menezes, S M Angadi
Hindi Translation नारियल कोल्हू में डालकर कोई नहीं पेरते ईख बच जाने से आगे बीज का अंकुरित होता कर्म करने अवश्यंभावी तक वह फलदायक है । कर्म त्यागकर जो त्वल्लीन होता है वही सच्चा शरण है, कूडलसंगमदेव॥ Translated by: Banakara K Gowdappa
Telugu Translation నారికేళ మెవడు నా టెనో ఎవడై న చెప్పెనే? నారికేళము నాట ముందు మొలకై ఫలమగుట తప్పదు చేయువఱకు ఫలప్రదమగు; చేతలుడిగి నీలోన నిల్చినవాడే నిజమైన శరణుడయ్యా! Translated by: Dr. Badala Ramaiah
Tamil Translation தேங்காயை ஒரே வெட்டில் வெட்டுவது பந்தயம் கட்டி ஆடும் ஒருவகை சூதாட்டம் தேங்காய் எஞ்சினால் பிறகு தப்பாது முளைவிடும் வினைப்பயனைத் துய்ப்பது தப்பாது செயலை அறிந்து உம்மிடம் தஞ்சம்புகின் அவனே மேலான சரணன் ஐயனே கூடல சங்கம தேவனே. Translated by: Smt. Kalyani Venkataraman, Chennai
Marathi Translation नारळ वाळला तर अंकुरेल का ? नारळ हिरवा असेल तर पुढे अंकुरणार नक्की. कर्म असेपर्यंत फळ असणारच ! कर्माचे मर्म तुमच्यात जाणले तर तोच खरा शरण कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಕಬ್ಬಿನ ಜಲ್ಲೇಯನ್ನೋ ತೆಂಗಿನ ತರಳನ್ನೋ ಒಂದೇ ಏಟಿಗೆ ಕೊಚ್ಚಿ, ಆ ಕೊಚ್ಚಿದೆಡೆಯಲ್ಲಿ ನಾರುಳಿಯದಂತೆ ಕತ್ತರಿಸುವುದೊಂದು ಪಂಥಕಟ್ಟಿ ಆಡುವ ಆಟ. ಅದರಲ್ಲಿ ನಾರುಳಿದರೆ ಸೋಲು. ಇದನ್ನು ಉದಾಹರಣೆಯಾಗಿ ಎತ್ತಿಕೊಂಡು ಬಸವಣ್ಣನವರು ಹೇಳುತ್ತಾರೆ : ಈ ಆಟವನ್ನು ಯಾರಾದರೂ ಆಡಿ ಗೆದ್ದಾರು, ಆದರೆ ಈ ದೇಹವನ್ನು ದೇಹಗುಣ(ವೆಂಬ ನಾರು) ಉಳಿಯದಂತೆ ಪರಿಚ್ಛೇದಿಸಿಕೊಳ್ಳುವುದು ಇನ್ನೂ ಕಷ್ಟಕರವಾದ ಆಟವೆಂದೂ, ಅದರಲ್ಲಿ ಗೆದ್ದವನು ನಿಜವಾಗಿಯೂ ಅಜಿತನೆಂದೂ ಸಾಧಕರಿಗೆ ಪ್ರೋತ್ಸಾಹಿಸುತ್ತಿರುವರು. ಇಂಥ ದೇಹಶೋಧನವೆಂಬ ಹಣಿದದಲ್ಲಿ. ಫಲಾಪೇಕ್ಷೇಯೇ ನಾರು, ಅದು ಉಳಿಯದಂತೆ ದೇಹಶೋಧ ನಡೆಯಬೇಕು. ಇಲ್ಲದಿದ್ದರೆ –ಅವನು ಮಾಡುವುದೆಲ್ಲಾ ಕರ್ಮವಾಗಿ, ಕರ್ಮಕ್ಕೆ ತಕ್ಕ ಪಾಪಪುಣ್ಯಗಳು ಜಮಾ ಆಗಿ, ಲೆಕ್ಕ ತೀರಿಸಲು ಜನ್ಮಜನ್ಮಕ್ಕೆ ಅಲೆದಾಡಬೇಕಾಗುತ್ತದೆ. ಫಲಾಪೇಕ್ಷೆಯಿಲ್ಲದೆ ಮಾಡುವುದೆಲ್ಲಾ ದಾಸೋಹವಾಗಿ, ಭಕ್ತನು ಹಮ್ಮಿನ ನಾರುಳಿಯದೆ ಶಿವನಲ್ಲಿ ಸಮರಸವಾಗುತ್ತಾನೆ. ಹೀಗೆ ದೇಹದ ಹಂಗುತೊರೆದ ಶರಣನು ಜ್ಯೋತಿರ್ಲಿಂಗದ ಪ್ರತಿನಿಧಿಯಾಗಿ –ಈ ಕರ್ಮ ಭೂಮಿಯಲ್ಲಿ ಜ್ಯೋತಿಸ್ತಂಭವಾಗಿ ರಾರಾಜಿಸುತ್ತಿರುವನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು