ಅಯ್ಯಾ, ಸಜ್ಜನ ಸದ್ಭಾವರ ಸಂಗದಿಂದ
ಮಹಾನುಭಾವರ ಕಾಣಬಹುದಯ್ಯಾ;
ಮಹಾನುಭಾವರ ಸಂಗದಿಂದ ಶ್ರೀಗುರುವನರಿಯಬಹುದು,
ಲಿಂಗವನರಿಯಬಹುದು, ಜಂಗಮವನರಿಯಬಹುದು,
ಪ್ರಸಾದವನರಿಯಬಹುದು, ತನ್ನ ತಾನರಿಯಬಹುದು.
ಇದು ಕಾರಣ, ಸದ್ಭಕ್ತರ ಸಂಗವನೆ ಕರುಣಿಸು,
ಕೂಡಲಸಂಗಮದೇವಾ, ನಿಮ್ಮ ಧರ್ಮ!
Transliteration Ayya, sajjana sadbhāvara saṅgadinda
mahānubhāvara kāṇabahudayya;
mahānubhāvara saṅgadinda śrīguruvanariyabahudu,
liṅgavanariyabahudu, jaṅgamavanariyabahudu,
prasādavanariyabahudu, tanna tānariyabahudu.
Idu kāraṇa, sadbhaktara saṅgavane karuṇisu,
kūḍalasaṅgamadēvā, nim'ma dharma!
Manuscript
English Translation 2 Sir, by association with the good and true
One can attain to the Experients;
By association with Experients
One gets to know the Guru, Sir;
One gets to know the Liṅga , Sir,
Jaṅgama and Prasāda too;
One gets to know oneself at last.
Therefore, bless me with the companionship
Of real devotees, I pray,
O Kūḍala Saṅgama Lord!
Translated by: L M A Menezes, S M Angadi
Hindi Translation प्रभो, सज्जन एवं सहृदयों के संग से
महानुभावों के दर्शन कर सकते हैं ।
महानुभावों के संग से गुरु को जान सकते हैं ।
लिंग को जान सकते हैं, जंगम को जान सकते हैं ।
प्रसाद जान सकते हैं, अपने आप कोे जान सकते हैं ।
अतः कूडलसंगमदेव, मुझे सदभक्तों का संग प्रदान करने की कृपा करो ॥
Translated by: Banakara K Gowdappa
Telugu Translation సజ్జన సంఘమున మహాత్ముల చూడవచ్చు
మహాత్ముల మైత్రిని శ్రీగురుని చూడవచ్చు
లింగమును చూడవచ్చు; జంగముని చూడవచ్చు
ప్రసాదము నందవచ్చు కడకు తన్నుదా తెలియవచ్చు
సద్భక్తుల సంఘమును దయ జూపింపుమయ్యా! సంగయ్యా!
Translated by: Dr. Badala Ramaiah
Tamil Translation ஐயனே, நன்னெறி, நல்லெண்ணம்
உள்ளோரின் தொடர்பால் பெரும் அனுபவம்
பெற்றோரைக் காணமுடியும் ஐயனே
பெரும் அனுபவம் பெற்றோரின் தொடர்பால்
உயர்குருவை அறியவியலும் ஐயனே
இலிங்கத்தை அறியவியலும்
ஜங்கமத்தை அறியவியலும்
பிரசாதத்தை அறியவியலும்
தன்னைத்தான் அறியவியலும். எனவே
நன்னெறி நல்லெண்ணம் உடையோரின்
தொடர்பையே அருள்வாய்
கூடல சங்கமதேவனே, உம் அறம்
Translated by: Smt. Kalyani Venkataraman, Chennai
Marathi Translation
देवा, सज्जन, सद्भावाच्या सत्संगात महानुभावींना पाहू शकतो,
महानुभावांच्या संगात श्रीगुरुंना जाणता येते देवा.
लिंग जाणता येते, जंगम जाणता येतो.
प्रसाद जाणता येतो, स्वतःला जाणता येते.
म्हणून सद्भक्ताच्या सत्संगाची कृपा करावी.
कूडलसंगमदेवा तुमचा धर्म.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ “ಸದ್”ಭಾವನೆಯುಳ್ಳ ಸಜ್ಜನ ಸದ್ಭಕ್ತರ ಸಹವಾಸ ಮಾಡಿದರೆ –ಅವರ ಕಡೆಯಿಂದ ಮಹಾನುಭಾವಿಗಳ ಸಂಸರ್ಗ ಲಭಿಸಿ ಆ ಮೂಲಕ ಸದ್ಗುರುವಿನ ಸಂದರ್ಶನವಾಗುತ್ತದೆ. ಆ ಸದ್ಗುರುವಿನ ಅನುಗ್ರಹಕ್ಕೆ ಪಾತ್ರನಾದರೆ ಲಿಂಗದೀಕ್ಷೆ ಜಂಗಮದಾಸೋಹ ಪ್ರಸಾದಪ್ರಾಪ್ತಿ ಆಗುತ್ತದೆ.
ಈ ಪ್ರಸಾದ ಮಹಿಮೆ ಅಷ್ಟಿಷ್ಟಲ್ಲ : ಅದರಿಂದ ಯಾವನಿಗಾಗಲಿ ತನ್ನಲ್ಲಿರುವ ಶಿವಾಂಶವನ್ನು ಗುರುತಿಸಿಕೊಳ್ಳುವ ವಿವೇಕ ಉದಯಿಸಿ ವೈರಾಗ್ಯ ವರ್ಧಿಸುತ್ತದೆ. ಆದ್ದರಿಂದ ಉತ್ತರೋತ್ತರ ಸತ್ಪರಿಣಾಮ ಪರಂಪರೆಯನ್ನು ಆಕಾಂಕ್ಷಿಸುವವನು ಮೊದಲು ಸದ್ಭಕ್ತರ ಸಹವಾಸ ಮಾಡಬೇಕು. ಮತ್ತೆ ಕೇಳಿ :
ಭಕ್ತರ ಸಹವಾಸದಿಂದ ಮಹಾನುಭಾವಿಗಳ ದರ್ಶನ, ಆ ಮಹಾನುಭಾವಿಗಳ ಸಹವಾಸದಿಂದ ಗುರು ದರ್ಶನ ಗುರುಸೇವೆ, ಗುರುಸೇವೆಯಿಂದ ಲಿಂಗಧಾರಣೆ, ಲಿಂಗಧಾರಣೆಯಿಂದ ಜಂಗಮದಾಸೋಹ, ಜಂಗಮದಾಸೋಹದಿಂದ ಪ್ರಸಾದಪ್ರಾಪ್ತಿ, ಪ್ರಸಾದಪ್ರಾಪ್ತಿಯಿಂದ ನಿಜಮುಕ್ತಿ –ಈ ದಾರಿಯನ್ನು ಹಿಡಿದವನು ಬಾಳುವನು. ದುರ್ಜನರ ಸಹವಾಸ ಮಾಡಿದವನು ಲಂಪಟರ ಗುಂಪಿಗೆ ಸೇರಿ, ಗುಂಡನ ಬೆನ್ನು ಬಿದ್ದು -ಹೊನ್ನು ಹೆಣ್ಣು ಮಣ್ಣಿನ ಉಸುಬಿನಲ್ಲಿ ಅದ್ದಿ ಹೋಗಿ ನರಕಯಾತನೆಪಡುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು