•  
  •  
  •  
  •  
Index   ವಚನ - 884    Search  
 
ಶರಣನ ಭಕ್ತಸ್ಥಲ - ಮನಸ್ಸು
ಅರಿದುದನರಿಯಲೊಲ್ಲದು, ಅದೆಂತಯ್ಯಾ? ಮರೆದುದ ಮರೆಯಲೊಲ್ಲದು, ಅದೆಂತಯ್ಯಾ? ಅರಿದು ಮರೆದ ಮನವ ಕೂಡಲಸಂಗಯ್ಯ ಬಲ್ಲ.
Transliteration Ariduda ariyalolladu, adēntayyā? Mareduda mareyalolladu, adēntayyā? Aridu mareda manava kūḍalasaṅgayya balla.
Manuscript
English Translation 2 How is that one shuns to know That which is known, good Sir? How is it one refuses to forget What is forget, good Sir? Lord Kūḍala Saṅga alone knows The mind that knows and then forgets! Translated by: L M A Menezes, S M Angadi
Hindi Translation जो विदित है उसे जानना नहीं चाहता, यह कैसा? जो विस्मृत है उसे भूलना नहीं चाहता, यह कैसा? जानकर भूलनेवाले मन को कूडलसंगमदेव ही जानते हैं ॥ Translated by: Banakara K Gowdappa
Telugu Translation తెలిసిన దానిని తెలియ నొల్లదిది యెట్లయ్యా? మఱచిన దానిని మఱువ నొల్లదిది యెట్లయ్యా? తెలిసిన మఱచిన మనసున సంగయ్య తానే తెలియునయ్యా! Translated by: Dr. Badala Ramaiah
Tamil Translation அறிந்ததை ஏற்க விடாது, எப்படி ஐயனே! மறந்ததை மறக்கவிடாது, எப்படி ஐயனே அறிந்து, மறந்த மனத்தைக் கூடல சங்கமன் அறிவான் Translated by: Smt. Kalyani Venkataraman, Chennai
Marathi Translation जाणले पाहिजे, ते जाणायचे नाही, काय विचित्र आहे ? विसरले पाहिजे, ते विसरायचे नाही. काय विचित्र आहे? जाणून विसरणारे मन कूडलसंगमदेव स्वतःच जाणतात. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ಜೀವ ತಾನು ಮಾಡಿದ ಸತ್ಸಂಕಲ್ಪಕ್ಕೆ ಕಚ್ಚಿಕೊಳ್ಳಲಾರದು, ದುಸ್ಸಂಕಲ್ಪದಿಂದ ಕಳಚಿಕೊಳ್ಳಲಾರದು. ಇದು ದೇಹಕಾರಣದಿಂದ ಜೀವಕ್ಕಾದ ಜಂಜಡ. ಅರಿಯಬೇಕಾದುದನ್ನು ಅರಿಯಬೇಕು, ಅರಿತ ಮೇಲೆ ಮರೆಯಬೇಕಾದುದನ್ನು ಮರೆಯಬೇಕು –ಇದು ಎಚ್ಚರಗೊಂಡ ಆತ್ಮಶಕ್ತಿಗೆ ಮಾತ್ರ ಸಾಧ್ಯ. ಸತ್ಯಪ್ರಕಾಶಕ್ಕೆ ದೂರವಾಗಿ, ಅಸತ್ಯದ ಹಾಳಿನಲ್ಲೇ ಗೂಡು ಕಟ್ಟಿ ಮೊಟ್ಟೆಯಿಟ್ಟು ಅದರ ಮೇಲೆ ಕಣ್ಣು ಮುಚ್ಚಿ ಕಾವು ಕೊಡುವ ಗೂಬೆತನ ಕೂಡದು ಈ ಜೀವ ಹಂಸಕ್ಕೆ !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು