•  
  •  
  •  
  •  
Index   ವಚನ - 916    Search  
 
ಶರಣನ ಐಕ್ಯಸ್ಥಲ - ಲಿಂಗ-ಜಂಗಮ
ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ; ಮಾಟವುಳ್ಳನ್ನಬರ ಜಂಗಮವ ಹಾಡಿದೆ, ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ. ಈ ತ್ರಿವಿಧ ನಾಸ್ತಿಯಾದ ಬಳಿಕ ಎನ್ನ ನಾ ಹಾಡಿಕೊಂಡೆ, ಕಾಣಾ, ಕೂಡಲಸಂಗಮದೇವಾ.
Transliteration Pūjeyuḷḷannabara liṅgava hāḍide; māṭavuḷḷannabara jaṅgamava hāḍide, jihveyuḷḷannabara prasādava hāḍide. Ī trividha nāstiyāda baḷika enna nā hāḍikoṇḍe, kāṇā, kūḍalasaṅgamadēvā.
Manuscript
English Translation 2 As long as worship is, I sing of Liṅga ; As long as action is, I sing of Jaṅgama; As long as there is tongue, I sing of Prasāda. Since these three ceased to be, Myself I sing, mark you, O Kūḍala Saṅgama Lord! Translated by: L M A Menezes, S M Angadi
Hindi Translation जब तक पूजा रही, मैंने लिंगदेव की स्तुति की, जब तक क्रिया रही, मैंने जंगम की स्तुति की, जब तक जिह्वा रही, मैंने प्रसाद की स्तुति की, जब ये तीनों नहीं रहे तब मैंने आत्मस्तुति की, कूडलसंगमदेव ॥ Translated by: Banakara K Gowdappa
Telugu Translation పూజ లున్నంత వఱకు లింగమును పాడితి; చేత లున్నంతదాక జంగముని గొల్చితి నాల్క కల్గినంతదాక ప్రసాదమును గోరితి ఈ త్రివిధమూ నా స్తిjైుపోవ! నన్ను నేనే పాడుకొంటినయ్యా! Translated by: Dr. Badala Ramaiah
Marathi Translation पूजा करताना लिंगस्तुती गातो. आचार करताना जंगमस्तुती गातो. स्वाद घेताना प्रसाद स्तुती गातो. हे त्रिविध नष्ट झाल्यावर माझी मीच स्तुती करु लागलो कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರ ಧರ್ಮೋಪದೇಶವನ್ನೆಲ್ಲ ಸಾರವತ್ತಾಗಿ ಮೂರು ಮಾತಿನಲ್ಲಿ ಲಿಂಗವೆಂದು ಜಂಗಮವೆಂದು ಪ್ರಸಾದವೆಂದು ಹೇಳಬಹುದು. ನಮ್ಮಲ್ಲಿರುವ ಪರಶಿವಚಿದಂಶವನ್ನೇ ಶ್ರೀಗುರು ಹಸ್ತಮಸ್ತಕಸಂಯೋಗದಿಂದ ಕಡೆದು ಕೈಯಲ್ಲಿಟ್ಟುದೇ ಲಿಂಗ. ಆ ಲಿಂಗದ ಪೂಜೆಯ ಜೊತೆಜೊತೆಗೇ ಪೂರಕವಾಗಿ ನಡೆಸಬೇಕಾದ ಲೋಕ ಸಮಾರಾಧನೆಯೇ ಜಂಗಮದಾಸೋಹ. ಹೀಗೆ ಲಿಂಗದ ಜಂಗಮದ ಬೀಜವನ್ನು ಜಗದಗಲ ಬಿತ್ತಿ ಬೆಳೆದ ಸತ್ಯ ಸಮಾಧಾನವೇ ಪ್ರಸಾದ. ಈ ಮೂರು ಕೈಗೂಡಿದಾಗಲೇ ಭಕ್ತನಿಗೆ ಪ್ರಶಂಸನೀಯವಾದುದನ್ನು ನಾನು ನೆರವೇರಿಸಿದೆನೆಂದಾಗಿ ಬಂದ ಮಣಿಹ ಮುಗಿಯಿತೆಂದಾಗಿ ಅವನ ಭಾವಜ್ಯೋತಿ ನಿರ್ವಯಲಾಗುವುದು ಅದೇ ನಿರ್ವಾಣ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು