ಮರುಳುತಲೆ ಹುರುಳುತಲೆ ನೀನೇ ದೇವಾ:
ಹೆಂಗೂಸು ಗಂಡುಗೂಸು ನೀನೇ ದೇವಾ,
ಎಮ್ಮಕ್ಕನ ಗಂಡ ನೀನೇ ದೇವಾ-
ಕೂಡಲಸಂಗಮದೇವಾ-
ಭ್ರಾಂತಳಿದು ಭಾವ ನಿಂದುದಾಗಿ!
Transliteration Maruḷutale huruḷutale nīnē dēvā:
Heṅgūsu gaṇḍugūsu nīnē dēvā,
em'makkana gaṇḍa nīnē dēvā-
kūḍalasaṅgamadēvā-
bhrāntaḷidu bhāva nindudāgi!
Manuscript
English Translation 2 A sane head and a crazy head Thou art, O Lord;
Thou art a female and a male child too;
Thou art my elder sister's husband, Lord-
Because, O Kūḍala Saṅgama Lord,
Illusion now has perished and
But piety remains!
Translated by: L M A Menezes, S M Angadi
Hindi Translation बाल-बालिका शिशु तुम ही हो देव,
स्त्री शिशु, पुरुष शिशु तुम ही हो देव,
मेरी जीजी के पति तुम ही हो देव,
भ्रांति दूर हुई, भाव रह गया
कूडलसंगमदेव ॥
Translated by: Banakara K Gowdappa
Telugu Translation అనాయాసముగ యిల్లుకటె; నిరాయాసమున పరమ సంతోషి;
రూపించుటలో రూపాథికుడ; చూచుటలో చూపుఘనము
సహజ సంగుని వ్యక్తిత్వ మిట్లయ్యా! ఉదకమున బిందువు
ఉదయరత్నమువలె; సంగని శరణుల వ్యక్తిత్వమయ్యా!
Translated by: Dr. Badala Ramaiah
Marathi Translation
अज्ञानी, ज्ञानी दोन्ही तुम्हीच देवा.
स्त्री-पुरुष दोन्ही तुम्हीच.
माझ्या अक्काचे पती तुम्हीच देवा.
कूडलसंगमदेवा द्विधाभाव मुक्त झालो.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನಾದಿನಿಯೊಬ್ಬಳು ತನ್ನ ಅಕ್ಕನ ಗಂಡ(ಭಾವ)ನಿಗೆ ಹೇಳುವ ಧಾಟಿಯಲ್ಲಿದೆ ಈ ವಚನ. ಅವಳೂ ಆ ಭಾವನನ್ನೇ ಮದುವೆಯಾಗುವ ಬೆಡಗಿನ ಮಾತಿದು :
ಬೆಡಗನ್ನು ಬಿಡಿಸಿ ಹೇಳುವುದಾದರೆ –ಜ್ಞಾನಶಕ್ತಿಯ ಸಂಬಂಧದಿಂದ ಶಿವನನ್ನು ಒಲಿಸಲಿಚ್ಛಿಸುವ ತಂಗಿ ಕ್ರಿಯಾಶಕ್ತಿಯು ಶರಣಸತಿಯೇ ಆಗಿರುವಳು. ಅವಳೆನ್ನುವ ಮಾತು ಈ ಮುಂದಿನಂತಿದೆ: ಭೂತನಾಥನಾದರೂ ಬುದ್ಧಿಗೊಡೆಯನಾದರೂ ನೀನೇ ನನಗೆ ಗತಿ. ನೀನು ಅರ್ಧನಾರೀಶ್ವರನಾಗಿ ನನಗೆ ಹೆಂಗುಸು ಗಂಡುಸು ಎರಡೂ ಆಗಿರುವೆ. ಎಲ್ಲಕ್ಕಿಂತ ಹೆಚ್ಚಾಗಿ ನೀನು ಜ್ಞಾನೇಶ್ವರನಾಗಿ ನಾನು ನೀನೆಂಬ ನನ್ನ ಭಿನ್ನಭ್ರಾಂತಿಯನ್ನು ಕೆಡಿಸಿ ನಾವಿಬ್ಬರು ಒಂದೆಂಬ ಭಾವವನ್ನು ನನ್ನಲ್ಲಿ ದೃಢಗೊಳಿಸಿರುವೆ.
ವಿ : ಜ್ಞಾನೋದಯವಾಗದೆ ಮಾಡಿದ ಬರಿಯ ಕ್ರಿಯೆಗಳು ವ್ಯರ್ಥ. ಜ್ಞಾನನೇತೃತ್ವದಲ್ಲಿ ನಡೆದೆಲ್ಲ ಕ್ರಿಯೆಗಳೂ ಶಿವಾರ್ಪಿತವಾಗುತ್ತವೆಂಬುದು ವಚನದ ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು