ಇನ್ನಾಡುವೆ ಜಂಗಮ ಬಹುರೂಪ,
ಕಲ್ಯಾಣವೆಲ್ಲಾ ಅರಿಯಬೇಕೆಂದು.
ಎನ್ನ ಬಹುರೂಪ ಕಾಮ ಹೊಯ್ದುಕೊಂಡಿಯೆಂದಡೆ
ಪ್ರಸಾದವ ಮಾಡಿಕೊಟ್ಟಡೆ
ಇದು ಬಸವನ ಪ್ರಸಾದವೆಂದು ಕೈಕೊಂಡೆ ಕಾಣಾ.
ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲಾ.
Transliteration Innāḍuve jaṅgama bahurūpa,
kalyāṇavellā ariyabēkendu.
Enna bahurūpa kāma hoydukoṇḍiyendaḍe
prasādava māḍikoṭṭaḍe
idu basavana prasādavendu kaikoṇḍe kāṇā.
Rēkaṇṇapriya nāgināthā, basavaninda badukitī lōkavellā.