ಕಲ್ಲ ಒಳಗಣ ಕಿಚ್ಚಿಂಗೂ ಬೂದಿಯಿಲ್ಲದಂತಿರಿಸಿದೆ
ಅಯ್ಯಾ ಎನ್ನ, ಲಿಂಗದೊಳಗೆ.
ಗಾಳಿಗಂಧ ಕೂಡಿದಂತಿರಿಸಯ್ಯಾ ಎನ್ನ, ಲಿಂಗದೊಳಗಂಗವನು.
ರೇಕಣ್ಣಪ್ರಿಯ ನಾಗಿನಾಥಾ, ನಿಮ್ಮ ಒಲವಿನೊಳಗಣ ನಿಲವು
ಸೊಡರ ಬೆಳಗಿನಲಡಗಿದ ಎಣ್ಣೆಯಂತೆ ಇರಿಸಯ್ಯಾ,
ಎನ್ನ ಲಿಂಗದೊಳಗಂಗವನು.
Transliteration Kalla oḷagaṇa kicciṅgū būdiyilladantiriside
ayyā enna, liṅgadoḷage.
Gāḷigandha kūḍidantirisayyā enna, liṅgadoḷagaṅgavanu.
Rēkaṇṇapriya nāgināthā, nim'ma olavinoḷagaṇa nilavu
soḍara beḷaginalaḍagida eṇṇeyante irisayyā,
enna liṅgadoḷagaṅgavanu.